ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ರಾಶಿ ಚಕ್ರ
Rashi Chakra

Astrology Makara ಮಕರ

(ಡಿ.22-ಜ.21)

ಆತುರದಿಂದ ಅಚಾತುರ್ಯವಾಗಬಹುದು. ಆದ್ದರಿಂದ ಯಾವುದೇ ವಿಚಾರದಲ್ಲಿ ದ್ವಂದ್ವವಿದ್ದಲ್ಲಿ ಆಪ್ತರ ಸಲಹೆಗಳಿಂದ ಸ್ಪಷ್ಟಪಡಿಸಿಕೊಳ್ಳಿ. ಸಂಗಾತಿ ಜೊತೆ ಹೆಚ್ಚು ಕಾಲ ಕಳೆಯಿರಿ, ಇಲ್ಲವಾದಲ್ಲಿ ಪ್ರಣಯಜೀವನದಲ್ಲಿ ಏರಿಳಿತ ಖಂಡಿತ. ಉನ್ನತ ಶಿಕ್ಷಣ ನಿರೀಕ್ಷೆ ಅಥವಾ ಹೊಸತನ್ನು ಕಲಿಯುವ ಆಸಕ್ತಿ ಇದ್ದಲ್ಲಿ ಸುವರ್ಣಾವಕಾಶವಿದೆ.

Astrology  Vrushabhaವೃಷಭ

(ಏ.21-ಮೇ.20)

ನೀವು ಸೂಕ್ಷ್ಮವಾಗಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದರಿಂದ ವೃತ್ತಿಕ್ಷೇತ್ರದಲ್ಲಿ ಹೆಚ್ಚಿನ ಸಮಯ ಕಳೆಯಬೇಕಾಗಬಹುದು. ಈ ಮಧ್ಯೆ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವತ್ತಲೂ ದೃಷ್ಟಿ ಹರಿಸಿ. ಒಮ್ಮತಕ್ಕೆ ಬರಲು ಯತ್ನಿಸಿ. ಪ್ರೇಮಜೀವನಕ್ಕೆ ಹೆಚ್ಚಿನ ಆದ್ಯತೆ ಅಗತ್ಯ. ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭಸುದ್ದಿ. ಹಿರಿಯರ ಬಗ್ಗೆ ಕಾಳಜಿಯಿರಲಿ.

Astrology Kanyaಕನ್ಯಾ

(ಆ.24-ಸೆ.23)

ಸನ್ನಿವೇಶಗಳ ಮಹತ್ವವನ್ನು ಕಡೆಗಣಿಸಿದರೆ ನಿಮ್ಮ ವ್ಯವಹಾರಗಳಲ್ಲಿ ತಪ್ಪುಗಳಾಗಬಹುದು. ನಿಮ್ಮನ್ನು ನೀವೇ ದೂಷಿಸುವ ಬದಲು ಯೋಜನೆಗಳಿಗೆ ಎದುರಾಗುವ ಅಡಚಣೆಗಳನ್ನು ನಿವಾರಿಸಿ. ವೈಯಕ್ತಿಕ ಸಮಸ್ಯೆಗಳು ಸರಳವಾಗಿ ಪರಿಹಾರವಾಗಲಿವೆ. ಆರ್ಥಿಕ ವಿಚಾರಗಳಲ್ಲಿ ಭಾವನಾತ್ಮಕ ಚಿಂತನೆ ಬೇಡ, ಎಚ್ಚರಿಕೆಯಿಂದ ಹೆಜ್ಜೆಯಿಡುವುದು ಒಳಿತು.

Astrology  Kumbhaಕುಂಭ

(ಜ.22-ಫೆ.19)

ಯಾವುದೇ ವ್ಯವಹಾರಗಳಲ್ಲಿ ತೊಡಗಿಸಿಕೊಂಡರೂ ಸ್ವಂತ ನಿರ್ಧಾರಕ್ಕೆ ಮನ್ನಣೆಯಿರಲಿ. ಅನಗತ್ಯ ಪೈಪೋಟಿಯಲ್ಲಿ ತಲೆಹಾಕುವುದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಿ. ಇತರರ ಅಭಿಪ್ರಾಯ ಸಂಗ್ರಹಿಸಿ. ಪ್ರೇಮಜೀವನದಲ್ಲಿ ನೆಮ್ಮದಿ. ಹೂಡಿಕೆ ಮತ್ತಿತರ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ಯೋಚಿಸಿ, ನಿರ್ಧರಿಸಿ.

Astrology  Mithunaಮಿಥುನ

(ಮೇ.21-ಜೂ.21)

ನಿಮಗೆ ಬಿಡುವಿಲ್ಲದ ಕೆಲಸಗಳ ನಡುವೆ ಬಾಕಿ ಉಳಿದಿದ್ದ ಯೋಜನೆ ಪೂರ್ಣವಾದ ಸಂತೃಪ್ತಿ ಸಿಗಲಿದೆ. ವೈಯಕ್ತಿಕ ವಿಚಾರಗಳ ಬಗ್ಗೆ ಭಾವನಾತ್ಮಕವಾಗಿ ಚಿಂತಿಸದೆ, ವಸ್ತುನಿಷ್ಠವಾಗಿ ಆಲೋಚಿಸಿ ನಿರ್ಧಾರಕ್ಕೆ ಬನ್ನಿ. ಪ್ರಣಯ ಜೀವನವನ್ನು ನಿರ್ಲಕ್ಷಿಸಬೇಡಿ. ಆಸ್ತಿ ಸಂಬಂಧಿತ ವಿವಾದಗಳಲ್ಲಿ ಒತ್ತಾಯ ಬೇಡ, ಚಾತುರ್ಯದಿಂದ ನಿವಾರಿಸಿಕೊಳ್ಳಿ.

Astrology  Tulaತುಲಾ

(ಸೆ.24-ಅ.23)

ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಗೃಹವಲಯದಲ್ಲಿ ನಿಮ್ಮ ಮಾತೇ ನಡೆಯಬೇಕೆಂಬ ಹಠ ಬೃಹತ್ ಸಮಸ್ಯೆಗಳಿಗೆ ಕಾರಣವಾಗಬಹುದು. ನಿಮ್ಮ ಸಂಗಾತಿಗೆ ಏನಾದರೂ ವಿಶೇಷವಾದುದನ್ನು ನೀಡ ಬಯಸುವಿರಿ. ಹಿರಿಯರ ಕುರಿತು ಕಾಳಜಿಯಿರಲಿ. ಸಾಮಾಜಿಕವಾಗಿ ತೊಡಗಿಸಿಕೊಂಡಲ್ಲಿ ಸಂಪರ್ಕವಲಯ ವೃದ್ಧಿಸಲಿದೆ.

Astrology  Meenaಮೀನ

(ಫೆ.20-ಮಾ.20)

ಆಕಾಶಕ್ಕೆ ಏಣಿ ಹಾಕುವ ಸಾಹಸ ಬೇಡ. ಅದರಿಂದ ವೃಥಾ ಸಾಮರ್ಥ್ಯ ವ್ಯರ್ಥ ಮತ್ತು ಈಗಾಗಲೇ ಆರಂಭಿಸಿರುವ ಅನೇಕ ಯೋಜನೆಗಳಿಗೆ ಧಕ್ಕೆಯಾಗಬಹುದು. ಪ್ರಣಯಜೀವನದಲ್ಲಿ ಸಣ್ಣ-ಪುಟ್ಟ ವಿವಾದಗಳು ಸಹಜ. ಅತಿರೇಕದಿಂದ ವರ್ತಿಸಿದಲ್ಲಿ ಆಪ್ತರೊಂದಿಗೆ ಕಲಹ ಏರ್ಪಡಬಹುದು. ಅವಿವಾಹಿತರಿಗೆ ಹೊಸ ಸಂಬಂಧಗಳು ಕೂಡಿಬರಲಿವೆ.

Astrology  Katakaಕಟಕ

(ಜೂ.22-ಜು.22)

ನಿಮ್ಮ ನಿರೀಕ್ಷೆಗಳ ಬಗ್ಗೆ ನಿಮ್ಮಲ್ಲಿ ಗೊಂದಲವಿದ್ದರೆ, ಪರ್ಯಾಯ ವ್ಯವಸ್ಥೆಯ ಆಯ್ಕೆ ಕಠಿಣವೆನಿಸಲಿದೆ. ಆತುರದಿಂದ ನಿರ್ಧಾರ ತೆಗೆದುಕೊಂಡಲ್ಲಿ ಮುಂದೆ ಪಶ್ಚಾತ್ತಾಪ ಪಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಬಾಧ್ಯತೆಗಳಿಂದ ತಪ್ಪಿಸಿಕೊಂಡು ನೆಮ್ಮದಿ ಸಿಗುವ ಚಟುವಟಿಕೆಗಳತ್ತ ಗಮನ ಹರಿಸಬಯಸುವಿರಿ.

Astrology  Vrushikaವೃಶ್ಚಿಕ

(ಅ.24-ನ.22)

ಕ್ರಿಯಾತ್ಮಕ ಯೋಜನೆಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರಲಿ. ಹೊಸ ಯೋಜನೆಗಳು ಫಲಪ್ರದವಾಗಲಿವೆ. ಒತ್ತಡದ ಸನ್ನಿವೇಶಗಳ ಕುರಿತು ಎಚ್ಚರಿಕೆಯಿರಲಿ. ಆತುರದ ಪ್ರತಿಕ್ರಿಯೆಯಿಂದ ಸಂಬಂಧಗಳಲ್ಲಿ ಬಿರುಕು ಮೂಡಬಹುದು. ಪ್ರೇಮ ಜೀವನದಲ್ಲಿ ಸಂತೋಷ, ನೆಮ್ಮದಿ. ಆರೋಗ್ಯದ ಕುರಿತು ಕಾಳಜಿಯಿಡಿ. ಪ್ರಯಾಣದಲ್ಲಿ ಮುಂಜಾಗ್ರತೆಯಿರಲಿ.

Astrology  Meshaಮೇಷ

(ಮಾ.21-ಏ.20)

ಈಗಾಗಲೇ ಆರಂಭಿಸಿರುವ ಯೋಜನೆಗಳು ನಿರೀಕ್ಷೆಯಂತೆ ಪ್ರಗತಿ ಸಾಧಿಸಲಿವೆ. ನಿಮ್ಮ ಯೋಜನೆ ಮತ್ತು ಅಭಿಪ್ರಾಯಗಳನ್ನು ಸಮ್ಮತಿಸಲು ಒತ್ತಾಯಿಸುವ ಬದಲು ಇತರರ ಚಿಂತನೆಗಳಿಗೆ ಕಿವಿಗೊಟ್ಟಲ್ಲಿ ತಲೆ ತಿನ್ನುವ ಚರ್ಚೆಗಳಲ್ಲೂ ಪರಿಹಾರ ಕಾಣಬಹುದು. ಮಕ್ಕಳ ಚಿಂತೆ ಕಾಡಬಹುದು. ಗೃಹ ಅಭಿವೃದ್ಧಿ ಯೋಜನೆಗಳಲ್ಲಿ ವೆಚ್ಚದತ್ತ ಗಮನ ಹರಿಸಿ.

Astrology  Simhaಸಿಂಹ

(ಜು.23-ಆ.23)

ನಿಮ್ಮಲ್ಲಿ ಹೊಸ ಚಿಂತನೆಗಳಿದ್ದಲ್ಲಿ ನೀವು ನೇತೃತ್ವ ವಹಿಸಿದ ಕಾರ್ಯಗಳಲ್ಲಿ ಯಶಸ್ಸು ಖಂಡಿತ. ಕ್ರಿಯಾಶೀಲ ಚಟುವಟಿಕೆಗಳಿಗೆ ನಿಮ್ಮ ಸಾಮರ್ಥ್ಯವನ್ನು ಬಳಸಿಕೊಂಡರೆ ಗೆಲುವು ಖಚಿತ. ಸಂಗಾತಿ ಜೊತೆ ಹೆಚ್ಚಿನ ಸಮಯ ಕಳೆಯಿರಿ, ಇದರಿಂದ ನಿಮ್ಮ ಪ್ರಣಯಜೀವನದಲ್ಲಿ ಹುರುಪು ಸಿಗಲಿದೆ. ಆರ್ಥಿಕ ವಿಚಾರಗಳಲ್ಲಿ ದುಡುಕಿನ ನಿರ್ಧಾರ ಬೇಡ.

Astrology  Dhanuಧನು

(ನ.23-ಡಿ.21)

ಜನರು ಗುರುತಿಸುವ ಉತ್ತಮ ಕೆಲಸಗಳನ್ನು ಮಾಡಲಿದ್ದೀರಿ. ಎಲ್ಲಾ ಯೋಜನೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿದಲ್ಲಿ ನಿಮ್ಮ ಕೆಲಸಗಳು ಫಲಕಾರಿಯಾಗುವುದರಲ್ಲಿ ಅನುಮಾನವಿಲ್ಲ. ಕ್ಷಿಪ್ರ ಚಿಂತನೆ ಮತ್ತು ಚಾತುರ್ಯ ನಿಮ್ಮನ್ನು ಗೊಂದಲದ ಸನ್ನಿವೇಶಗಳಿಂದ ಪಾರುಮಾಡಲಿವೆ. ಪ್ರಣಯ ಜೀವನದಲ್ಲಿ ಸಾಮರಸ್ಯ ಮೂಡಲಿದೆ.

ಟಿ.ಎಸ್.ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .