|
ನಿಮಗೆ ಯಶಸ್ಸು ತಂದುಕೊಟ್ಟ 'ಒಡಲಾಳ'ದ ಸಾಕವ್ವನ ಬಗ್ಗೆ?
ಸಾಕವ್ವ ಓರ್ವ ಮುಗ್ಧ ಹಾಗೂ ಗಟ್ಟಿತನದ ಮಹಿಳೆ. ಸ್ವಾವಲಂಬಿಯಾಗಿ ಬದುಕಲಿಚ್ಛಿಸುವವಳು. ಆಕೆ ಅಬಲೆಯಲ್ಲ. ಬಡತನದ ದಾರಿದ್ರ್ಯದ ನಡುವೆಯೂ ಸಂಸಾರವನ್ನು ಸರಿದೂಗಿಸಬೇಕೆಂಬ ಆಕೆಯ ಹಂಬಲ, ಇಚ್ಛಾಶಕ್ತಿ ಎಲ್ಲರಿಗೂ ಮಾದರಿ.
ರಂಗಭೂಮಿಗೆ ನೀವು ಕಾಲಿಟ್ಟ ಸಂದರ್ಭ ಹಾಗೂ ಪ್ರಸ್ತುತ ಯಾವ ರೀತಿಯ ವ್ಯತ್ಯಾಸ ಕಾಣುತ್ತಿದ್ದೀರಿ?
ನಾನು ಕಂಡಂತೆ ಯಾವುದೇ ಬದಲಾವಣೆಯಾಗಿಲ್ಲ. 1978ರಲ್ಲಿ ರಂಗಭೂಮಿ ಹೇಗಿತ್ತೋ ಈಗಲೂ ಹಾಗೇ ಇದೆ.
ಬದಲಾವಣೆಯಾಗಬೇಕೆಂದು ನೀವು ಬಯಸುತ್ತಿಲ್ಲವೇ?
ಕಾಲಕ್ಕನುಗುಣವಾಗಿ ಬದಲಾವಣೆ ಅಗತ್ಯ. ಈ ನಿಟ್ಟಿನಲ್ಲಿ ನಾವು ಯೋಚಿಸಬೇಕಿದೆ.
ರಾಜಕಾರಣ, ಸಿನಿಮಾ, ರಂಗಭೂಮಿ; ಪ್ರಮುಖ ಆದ್ಯತೆ?
ಹಾಗೇನಿಲ್ಲ. ಮೂರಕ್ಕೂ ನಾನು ಪ್ರಾಮುಖ್ಯತೆ ನೀಡುತ್ತೇನೆ.
ಕರ್ನಾಟಕದಲ್ಲಾದ ಅಧಿಕಾರ ಹಸ್ತಾಂತರ ರಾಜಕೀಯ ದೊಂಬರಾಟದ ಕುರಿತು...?
ಕ್ಷಮಿಸಿ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ!
ಟಿಎಸ್‌ಐ
ಕೆ.ರಾಘವಶರ್ಮ |