|
ಮೇ 12, 1949
ಇಂಗ್ಲೆಂಡ್ ಮಹಾರಾಜ ವಿಕ್ಟೋರಿಯಾ ಅವರಿಗೆ
ತಮ್ಮೊಂದಿಗಿನ ಹಲವು ವರ್ಷಗಳ ವಾಣಿಜ್ಯ
ವ್ಯವಹಾರಗಳಿಂದಾಗಿ ಕೆಲ ಸುಸಂಸ್ಕೃತ,
ಇನ್ನು ಕೆಲ ದುಷ್ಟ ಪಾಶ್ಚಾತ್ಯರು ಏಕ
ಪ್ರಮಾಣದಲ್ಲಿ ಚೀನಾ ಪ್ರವೇಶಿಸಿದ್ದಾರೆ.
ಪರಿಣಾಮವಾಗಿ ಅಫೀಮು ಕಳ್ಳ ಸಾಗಣೆ ಜೊತೆಗೆ
ಚೀನೀಯರನ್ನು ದುರ್ಮಾರ್ಗಕ್ಕೆ ಸೆಳೆದು ದೇಶದೆಲ್ಲೆಡೆ ಈ ಕಳ್ಳ ದಂಧೆಯನ್ನು
ಪಸರಿಸುವ ಕೆಲಸದಲ್ಲಿ ಅವರು ತೊಡಗಿದ್ದಾರೆ.
ಸ್ವಾರ್ಥ ಸಾಧನೆಯನ್ನು ಮಾತ್ರ
ದೃಷ್ಟಿಯಲ್ಲಿಟ್ಟುಕೊಂಡು ಅದರಿಂದ ಇತರರಿಗೆ ಸಂಭವಿಸಬಹುದಾದಂಥ ಕಷ್ಟಗಳನ್ನು
ಕಡೆಗಣಿಸುವವರನ್ನು ಸಾಕ್ಷಾತ್ ಭಗವಂತ ಹಾಗೂ ಮನುಕುಲ ದ್ವೇಷಿಸುತ್ತದೆ.
ಈ ವಿವರವನ್ನು ತಿಳಿದ ಮೇಲಂತೂ ಘನತೆವೆತ್ತ
ಚಕ್ರವರ್ತಿಗಳು ಸಿಟ್ಟಿಗೆದ್ದಿದ್ದಾರೆ.
ಆದ ಕಾರಣ ಚಕ್ರವರ್ತಿಗಳ ಆಣತಿಯಂತೆ ನೇಮಕಗೊಂಡ
ಆಯುಕ್ತನಾದ ನಾನು,
ಗವರ್ನರ್ ಜನರಲ್ ಹಾಗೂ ಗವರ್ನರ್ ಜೊತೆಗೆ ಕ್ವಾಂಗ್‌ಟಂಗ್‌ಗೆ
ಆಗಮಿಸಿ ತನಿಖೆ ನಡೆಸಿ ಪರಿಸ್ಥಿತಿಯನ್ನು ಸುಧಾರಿಸಬೇಕಾಗಿ ರಾಜಾಜ್ಞೆಯಾಗಿದೆ.
ಚೀನಾದಲ್ಲಿ ಅಫೀಮು ಮಾರುವವರು ಹಾಗೂ ಅಫೀಮು
ಸೇವಿಸುವವರಿಗೆ ಮರಣದಂಡನೆ ವಿಧಿಸಲೇಬೇಕು.
ಪಾಶ್ಚಾತ್ಯರು ಅಫೀಮು ಮಾರಾಟದಲ್ಲಿ ತೊಡಗಿರುವುದು
ನಮ್ಮ ಗಮನಕ್ಕೆ ಬಂದರೆ ಹಾಗೂ ಅವರಿಂದ ಸಮಾಜದ ಮೇಲೆ ತೀವ್ರ
ಕೆಡುಕುಂಟಾಗುತ್ತಿದ್ದು,
ವ್ಯಾಪಾರದಿಂದ ಅವರು ಭಾರೀ ಲಾಭದ ಫಸಲನ್ನು
ಕೊಯ್ಯುತ್ತಿರುವುದು ತಿಳಿದುಬಂದರೆ ಕಾನೂನಿನ ಅನ್ವಯ ಅವರಿಗೂ ಶಿಕ್ಷೆ
ವಿಧಿಸಲಾಗುವುದು.
ಹಲವು ಪಾಶ್ಚಾತ್ಯರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದನ್ನೂ
ನಾವು ಮರೆತಿಲ್ಲ.
ಒಮ್ಮೆ ಪಾಶ್ಚಾತ್ಯ ವ್ಯಾಪಾರಿಗಳು ತಮ್ಮ ಸಂಗ್ರಾಹಕ
ಹಡಗಿನಲ್ಲಿ 20,183
ಪೆಟ್ಟಿಗೆಯಲ್ಲಿದ್ದ ಅಫೀಮನ್ನು ತಮ್ಮ ವ್ಯಾಪಾರ ಮೇಲ್ವಿಚಾರಕ ಈಲಿಯಟ್‌ನ
ಮೂಲಕ ನಮಗೆ ಒಪ್ಪಿಸಿ ತಪ್ಪೊಪ್ಪಿಕೊಂಡ ಘಟನೆಯೂ ನಮ್ಮ ನೆನಪಿನಲ್ಲಿದೆ.
ಆ ಕಳ್ಳ ಮಾಲನ್ನು ಸಂಪೂರ್ಣವಾಗಿ
ನಾಶಗೊಳಿಸಲಾಗಿದ್ದು ಅದನ್ನು ಸವಿವರವಾಗಿ ನಾನು ಮತ್ತು ಸಹೋದ್ಯೋಗಿಗಳು ಹಲವು
ಪತ್ರಗಳ ಮೂಲಕ ಚಕ್ರವರ್ತಿಗಳಿಗೆ ತಿಳಿಸಿದ್ದೇವೆ ಕೂಡ.
ಅದೃಷ್ಟವಶಾತ್ ಮತ್ತೊಂದು ಅವಕಾಶವನ್ನೂ
ಚಕ್ರವರ್ತಿಗಳು ನೀಡಿದ್ದಾರೆ.
ತಮ್ಮ ಅಪರಾಧವನ್ನು ಒಪ್ಪಿಕೊಂಡು ಶರಣಾಗುವವರನ್ನು
ಉದಾರ ಮನಸ್ಕರಾದ ಚಕ್ರವರ್ತಿಗಳು ತಾತ್ಕಾಲಿಕವಾಗಿ ಮನ್ನಿಸಲಿದ್ದಾರೆ.
ಆದರೆ ಅಫೀಮಿನ ಮೇಲಿನ ನಿರ್ಬಂಧವನ್ನು ಉಲ್ಲಂಘಿಸಿ
ಮತ್ತೆ ಹಳೆಯ ಚಾಳಿಯನ್ನೇ ಮುಂದುವರಿಸುವರಿಸಿದರೆ ಅವರು ಕಾನೂನಿನ ಕೈಗಳಿಂದ
ತಪ್ಪಿಸಿಕೊಳ್ಳುವುದು ಕನಸಿನ ಮಾತೇ ಸರಿ.
ನಾವು ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದ್ದು,
ನಮ್ಮ ಸಂಸ್ಕೃತಿ ಹಾಗೂ ದೇಶದ ಬಗ್ಗೆ ಒಲವು
ತೋರುತ್ತಿರುವ ತಮ್ಮ ಘನತೆವೆತ್ತ ಸಿಂಹಾಸನದ ಮುಂದೆ ನಮ್ಮೊಂದು ಕಳಕಳಿಯ
ವಿನಂತಿ,
ಪಾಶ್ಚಾತ್ಯರಿಗೆ ನಮ್ಮ ಹೊಸ ಕಾನೂನುಗಳನ್ನು ಗಮನಿಸುವಂತೆ
ಸೂಚಿಸಿ.
ಪಾಶ್ಚಾತ್ಯರಿಗೆ ಕಾನೂನುಗಳ ಅನುಕೂಲ ಹಾಗೂ ಅನನುಕೂಲಗಳ
ಬಗ್ಗೆ ತಿಳಿಸಿದರೆ ಸಾಕು.
ಪವಿತ್ರ ನ್ಯಾಯಾಲಯದ ಆದೇಶಗಳನ್ನು ಚಾಚೂ ತಪ್ಪದೆ
ಪಾಲಿಸಬೇಕಾದದ್ದು ಅಗತ್ಯ ಎಂಬುದನ್ನು ಅವರೇ ಕಂಡುಕೊಳ್ಳುತ್ತಾರೆ.
ಚೀನಾದಿಂದ ನಿಮ್ಮ ದೇಶ ಅರವತ್ತರಿಂದ ಎಪ್ಪತ್ತು
ಸಾವಿರ 'ಲೈ'ಗಳಷ್ಟು
(ಒಂದು
'ಲೈ'
ಒಂದು ಮೈಲಿಗೆ ಸಮ)
ದೂರದಲ್ಲಿದೆ.
ಅಂದರೂ ಲಾಭಕೋರತನದ ಒಂದೇ ಒಂದು ಉದ್ದೇಶದಿಂದ ಹಲವು
ಪಾಶ್ಚಾತ್ಯ ಹಡಗುಗಳು ನಮ್ಮಲ್ಲಿಗೆ ಬರಲು ಕಾತರಿಸುತ್ತಿವೆ.
ಚೀನಾದ ಸಂಪತ್ತು ಪಾಶ್ಚಾತ್ಯರ ಲಾಭಕ್ಕೇ ಮೀಸಲು
ಎಂಬಂತಾಗಿದೆ.
ಅಂದರೆ ಪಾಶ್ಚಾತ್ಯರು ಇಲ್ಲಿಯವರೆಗೆ ಮಾಡಿಕೊಂಡಿರುವ ಭಾರೀ
ಲಾಭಗಳೆಲ್ಲವೂ ಚೀನಾದಿಂದ ಕಸಿದುಕೊಂಡಂಥವು.
ಅದರ ಬದಲಿಗೆ ಅಫೀಮಿನಿಂದ ಚೀನಾ ಜನಜೀವನವನ್ನು
ಘಾಸಿಗೊಳಿಸುವ ಅಧಿಕಾರ ಪಾಶ್ಚ್ಯಾತರಿಗೆ ನೀಡಿದವರು ಯಾರು?
ಚೀನೀಯರಿಗೆ ತೊಂದರೆ ಕೊಡುವ ಉದ್ದೇಶವಿಲ್ಲದೇ
ಇರಬಹುದು,
ಆದರೆ ಲಾಭಗಳಿಸುವ ಏಕಮಾತ್ರ ಉದ್ದೇಶದಿಂದ ಚೀನಾಕ್ಕೆ ಬರುವ
ಅವರು ಅದರಿಂದ ಚೀನೀಯರಿಗೆ ಆಗುತ್ತಿರುವ ತೊಂದರೆಯನ್ನು ಗಮನಿಸುವಲ್ಲಿ
ವಿಫಲರಾಗುತ್ತಿದ್ದಾರೆ.
ಒಂದು ಮಾತನ್ನು ಕೇಳುತ್ತೇನೆ,
ನಿಮ್ಮ ಆತ್ಮಸಾಕ್ಷಿ ಎಲ್ಲಿದೆ?
ಅಫೀಮಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ
ತಿಳಿದಿರುವುದರಿಂದ ಅಫೀಮು ಸೇವನೆಯನ್ನು ನಿಷೇಧಿಸಿರುವಿರಿ ಎಂದು ಕೇಳಿದ್ದೇನೆ.
ತಮ್ಮ ದೇಶ ತೊಂದರೆಗೊಳಗಾಗುವುದನ್ನು ನಿಷೇಧಿಸಿದ
ತಾವು ಅದೇ ಕಾರಣಗಳಿಂದ ಬೇರೆ ದೇಶಗಳು ತೊಂದರೆಗೊಳಗಾಗುವುದನ್ನೂ ತಡೆಯಬೇಕು.
ಚೀನಾವನ್ನು ಕಡೆಗಣಿಸುವುದು ಎಷ್ಟು ಸರಿ?!
ಲಿನ್ ಝೆಕ್ಸು
|