|

ಕನ್ನಡ ಚಿತ್ರರಂಗದಲ್ಲಿ ಗೀತ ರಚನಕಾರರ ಸ್ಥಿತಿ
ಹೇಗಿದೆ?
ಕನ್ನಡ ಚಿತ್ರೋದ್ಯಮ ನಮ್ಮ ಬರವಣಿಗೆಯನ್ನು
ಗೌರವಿಸುತ್ತದೆ,
ಆದರೆ ನಮ್ಮ ಪರಿಸ್ಥಿತಿ ನೋಡಿ ಅನುಕಂಪ ಪಡುವವರೇ ಹೆಚ್ಚು.
ಒಂದು ಗೀತೆಯಲ್ಲಿ ಸಂಗೀತ ಮತ್ತು ಸಾಹಿತ್ಯ ಯಾವುದು
ಮುಖ್ಯ?
ಗೀತೆಯಲ್ಲಿ ಸಂಗೀತ ಮತ್ತು ಸಾಹಿತ್ಯ ಎಂದರೆ
ಗಂಡ-ಹೆಂಡತಿ
ಬಾಂಧವ್ಯ ಇದ್ದಂತೆ.
ಅಂತಹ ಗೀತೆ ಮಾತ್ರ ಯಶಸ್ಸು ಗಳಿಸಲು ಸಾಧ್ಯ.
ಈಚೆಗೆ ಕಲ್ಯಾಣ್ ಅವರೊಳಗಿನ
'ಕವಿ'
ಕಾಣಸಿಗುವುದೇ ಅಪರೂಪವಾಗಿದೆಯಲ್ಲಾ..
ಸಂಗೀತ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದೇನೆ.
ಹಾಗೆಂದು ಗೀತೆರಚನೆಯಿಂದ ದೂರಸರಿದಿಲ್ಲ.
ಕನ್ನಡದ ಜನ ಪ್ರೀತಿಸುವ ಗೀತೆ-
ಗಳನ್ನು ಬರೆಯುತ್ತಲೇ ಇರುತ್ತೇನೆ.
ಈಗ ಯಾವ ಚಿತ್ರಗಳಿಗೆ ಸಂಗೀತ
ನಿರ್ದೇಶಿಸುತ್ತಿದ್ದೀರಿ?
ಗಂಗಾವತರಣ,
ಚಿಕ್ಕಮಗಳೂರ ಚಿಕ್ಕಮಲ್ಲಿಗೆ,
ಮಂದಾಕಿನಿ,
ಪ್ರೀತಿ ನೀ ಶಾಶ್ವತನಾ...
ಹೀಗೆ
9 ಚಿತ್ರಗಳು ಕೈಯಲ್ಲಿವೆ.
ಕನ್ನಡ ಚಿತ್ರರಂಗಕ್ಕೆ ಆಗಮಿಸುವ ನೂತನ ಗೀತರಚನಕಾರರ
ಕುರಿತು..
ಕನ್ನಡ ಚಿತ್ರರಂಗ ವಿಶಾಲವಾದ ಮೈದಾನ.
ಈ ಮೈದಾನದಲ್ಲಿ ಅವರವರ ದಾರಿ,
ಅವರವರ ಕುದುರೆ,
ಅವರದ್ದೇ ವೇಗ.
ಇವರನ್ನು ಕಂಡಾಗ ತುಂಬಾ ಸಂತೋಷವಾಗುತ್ತಿದೆ.
ಟಿಎಸ್‌ಐ
ಚಿತ್ರಾ ಕರ್ಕೇರಾ
|