ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ತಂದೆಗೆ ಮೊಜಾರ್‍ಟ್ ಬರೆದ ಪತ್ರ
 

History Mail - The Sunday Indian - Kannadaವುಲ್ಫಗಾಂಗ್ ಅಮೇಡಿಯಸ್ ಮೊಜಾರ್‍ಟ್, ಕ್ಲಾಸಿಕ್ ಯುಗ ಕಂಡ ಅಸಾಧಾರಣ ಸಂಗೀತ ಪ್ರತಿಭೆ. ಈತನ 600 ಸಂಗೀತ ಸಂಯೋಜನೆಗಳು ಸಿಂಫೋನಿ, ಚೇಂಬರ್, ಪಿಯಾನೋ, ಆಪರ್‍ಯಾಟಿಕ್ ಮತ್ತು ಕೋರಲ್ ಪ್ರಕಾರಗಳಲ್ಲಿಯೇ ಅಗ್ರಸ್ಥಾನ ಪಡೆದಿವೆ. 22ರ ಹರೆಯದ ಮೋಜಾರ್‍ಟ್ ಜರ್ಮನಿಯ ಮಾನ್‌ಹೀಮ್‌ನಲ್ಲಿದ್ದಾಗ ತನ್ನ ತಂದೆ ಲಿಯೊಫೋಲ್ಡ್‌ಗೆ ಬರೆದ ಈ ಪತ್ರ ಆತನ ಯೌವನದ ತವಕ-ತಲ್ಲಣಗಳನ್ನು ಸಶಕ್ತವಾಗಿ ಚಿತ್ರಿಸುತ್ತದೆ. ಉದ್ಯೋಗ ಅರಸಿಕೊಂಡು ಯುರೋಪ್‌ನಲ್ಲಿ ಅಲೆಯುತ್ತಿದ್ದ ಮೊಜಾರ್‍ಟ್ ತನಗರಿವಿಲ್ಲದಂತೆಯೇ ಅಲ್ಯೋಶಿಯಾ History Mail - The Sunday Indian - Kannadaವೆಬರ್ (ಇಲ್ಲಿ ಆಕೆಯನ್ನು 'ಮ್ಯಾಡ್ಲ್ ವೆಬರ್' ಎಂಬ ಹೆಸರಿನಿಂದ ಕರೆಯುತ್ತಾನೆ) ಎಂಬ ತರುಣಿಯ ಪ್ರೇಮಪಾಶದಲ್ಲಿ ಸಿಲುಕುತ್ತಾನೆ. ಅನನುಭವಿಯಾಗಿದ್ದರೂ ಆಕೆಯ ಕಛೇರಿ ನೋಡಲು ಮೊಜಾರ್ಟ್ ಉತ್ಸುಕನಾಗಿರುವುದು ಇಲ್ಲಿ ಉಲ್ಲೇಖಗೊಂಡಿದೆ.

ಮಾನ್‌ಹೀಮ್, ಫೆಬ್ರುವರಿ 14, 1778

ಪ್ರೀತಿಯ ಅಪ್ಪ,

ಫೆಬ್ರುವರಿ 9ರಂದು ನನಗೆ ತಲುಪಿದ ನಿಮ್ಮ ಪತ್ರದಿಂದ ನಾನು ನಿಮಗೆ ಈ ಹಿಂದೆ ಬರೆದಿದ್ದ ಎರಡು ಪತ್ರಗಳೂ ತಲುಪಿಲ್ಲ ಎಂಬುದು ವೇದ್ಯವಾಗುತ್ತದೆ. ವೆಂಡ್ಲಿಂಗ್ ಮತ್ತು ರ್‍ಯಾಮ್ ನಾಳೆ ನಸುಕಿನಲ್ಲಿ ಪ್ಯಾರಿಸ್‌ಗೆ ಹೊರಡಲಿದ್ದಾರೆ. ಅವರೊಂದಿಗೆ ನಾನು ಪ್ಯಾರಿಸ್‌ಗೆ ಹೋಗಲಿಲ್ಲ ಎಂಬ ಕಾರಣಕ್ಕೆ ನೀವು ನನ್ನ ಮೇಲೆ ಬೇಸರಗೊಂಡಿದ್ದರೆ, ಅದಕ್ಕಾಗಿ ನಾನು ಪಶ್ಚಾತ್ತಾಪ ಪಡುವ ಅವಶ್ಯಕತೆಯಿಲ್ಲ ಎಂದು ಭಾವಿಸುತ್ತೇನೆ. ಏಕೆಂದರೆ, ಪ್ಯಾರಿಸ್‌ನ ದಾರಿ ನನ್ನ ಪಾಲಿಗೆ ಯಾವತ್ತಿಗೂ ತೆರೆದಿದೆ. ವೆಂಡ್ಲಿಂಗ್ ಪ್ಯಾರೀಸ್‌ಗೆ ತೆರಳಿದ ನಂತರ ಹೆರ್ ಗ್ರಿಮ್ ಕುರಿತು ವಿಚಾರಿಸಿ ಅದರ ಕುರಿತ ಮಾಹಿತಿ ಕಳಿಸುವುದಾಗಿ ನನಗೆ ಭರವಸೆ ನೀಡಿದ್ದಾನೆ. ಇಂತಹ ಸ್ನೇಹಿತರು ಪ್ಯಾರಿಸ್‌ನಲ್ಲಿರುವಾಗ ನಾನಲ್ಲಿಗೆ ಖಂಡಿತಾ ಹೋಗುತ್ತೇನೆ. ಅವನು ನನ್ನ ಹೊಟ್ಟೆಪಾಡಿಗೆ ಒಂದು ದಾರಿ ಹುಡುಕುತ್ತಾನೆ ಎಂಬ ಭರವಸೆ ನನಗಿದೆ. ನಾನು ಅವರೊಂದಿಗೆ ಹೋಗದಿರಲು ಮುಖ್ಯ ಕಾರಣವೆಂದರೆ, ಆಗ್ಸಬರ್ಗ್‌ಗೆ ಅಮ್ಮ ಹಿಂದಿರುಗುವುದರ ಬಗ್ಗೆ ಯಾವುದೇ ವ್ಯವಸ್ಥೆ ಮಾಡಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ. ಅಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಪ್ರಯಾಣ ಮಾಡಲು 'ವೆಟುರಿನಿ'ಯ ಸೌಲಭ್ಯವಿದೆಯಾದ್ದರಿಂದ ನಮ್ಮ ಪ್ರಯಾಣ ಅಷ್ಟೊಂದು ದುಬಾರಿಯಾಗಲಾರದು ಎಂದು ನನಗೆನಿಸುತ್ತದೆ. ಆ ಸಮಯಕ್ಕೆ ಅಮ್ಮ ಹಿಂದಿರುಗಲು ಬೇಕಾದ ವೆಚ್ಚವನ್ನು ಹೊಂದಿಸುವ ಭರವಸೆ ನನಗಿದೆ. ಆದರೆ ಈಗ ಅದು ಸಾಧ್ಯವಿಲ್ಲ.

ಹೆರ್ ದೆ ಜೀನ್ ನಾಳೆ ಪ್ಯಾರೀಸ್‌ಗೆ ಹೊರಡಲಿದ್ದಾರೆ. ನಾನು ಈವರೆಗೆ ಎರಡು ಕಛೇರಿ ಮತ್ತು ಮೂರು ಕ್ವಾರ್‍ಟೆಟ್ಟ್‌ಗಳನ್ನು ಮಾತ್ರ ಪೂರೈಸಿಕೊಟ್ಟಿರುವುದರಿಂದ ಅವರು ನನಗೆ 96 ಫ್ಲೋರಿನ್ಸ್‌ಗಳನ್ನು ಕಳುಹಿಸಿದ್ದಾರೆ. ನನ್ನ ಮತ್ತು ವೆಂಡ್ಲಿಂಗ್ ನಡುವಿನ ಒಪ್ಪಂದದಂತೆ ಅವರು ನನಗೆ ಸಂಪೂರ್ಣ ಹಣ ನೀಡಬೇಕು. ನನಗೆ ಇಲ್ಲಿ ಕಾಲಾವಕಾಶ ತುಂಬಾ ಕಡಿಮೆ ಇರುವುದರಿಂದ ನಾನು ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದೇ ಹೋದದ್ದು ಅಚ್ಚರಿ ಏನಲ್ಲ. ನಾನು ರಾತ್ರಿ ಮಾತ್ರ ಸಂಯೋಜನೆ ಮಾಡಲು ಸಾಧ್ಯವಾದ್ದರಿಂದ ಮುಂಜಾನೆ ಬೇಗ ಏಳಲು ಸಾಧ್ಯವಾಗುತ್ತಿಲ್ಲ. ಅಲ್ಲದೇ, ಬೆಳಗಿನ ವೇಳೆ ನನಗೆ ಸೃಜನಶೀಲ ಕೆಲಸದಲ್ಲಿ ತೊಡಗುವುದು ದುಸ್ಸಾಧ್ಯ. ಯಾವಾಗಲೂ ಕೆಲಸದಲ್ಲೇ ತೊಡಗಿರುವುದೂ ಸಾಧ್ಯವಿಲ್ಲ ಅಲ್ಲವೇ? ನಿಜ, ನಾನು ದಿನವಿಡೀ ಗೀಚಬಲ್ಲೆ. ಆದರೆ ಸ್ವಲ್ಪವೇ ಕೆಲಸ ಮಾಡಿದರೂ ಅದು ಜಗತ್ತಿನ ಗಮನಕ್ಕೆ ಬಂದೇ ಬರುತ್ತದೆ. 'ಟೈಟಲ್ ಪೇಜ್'ನಲ್ಲಿ ಬರುವ ನನ್ನ ಹೆಸರಿಗೆ ಅವಮಾನವಂತೂ ಆಗುವುದಿಲ್ಲ ಎಂಬ ಭರವಸೆಯನ್ನು ನಾನು ನೀಡಬಲ್ಲೆ.

ಪ್ರಿಯ ಅಪ್ಪ, ಅಕ್ಕರೆ ತುಂಬಿದ ನಿನ್ನ ಪತ್ರಕ್ಕೆ ನಾನು ಋಣಿ. ನಾನಿದನ್ನು ಅಮೂಲ್ಯ ನಿಧಿಯಂತೆ ನನ್ನ ಮುಂದಿನ ದಿನಗಳಲ್ಲಿ ಕಾಪಾಡಿಕೊಳ್ಳುತ್ತೇನೆ. ಆಗ್ಸ್‌ಬರ್ಗ್‌ನಿಂದ ಸಾಲ್ಸ್‌ಬರ್ಗ್‌ಗೆ ಅಮ್ಮ ತೆರಳುವುದನ್ನು ಮರೆಯಬೇಡಿ. ನನಗೆ ಆ ಪ್ರಯಾಣದ ದಿನವನ್ನು ತಪ್ಪದೇ ತಿಳಿಸಿ.

ನನ್ನ ಹಿಂದಿನ ಪತ್ರದಲ್ಲಿ ನಾನು ಪ್ರಸ್ತಾಪಿಸಿದ ಗೀತಗಳನ್ನು ತಾವು ನೆನಪಿಟ್ಟುಕೊಂಡಿರಬೇಕೆಂದು ಕೇಳಿಕೊಳ್ಳುತ್ತೇನೆ. ಕಂಟಾಬೈಲ್ (ಹಾಡು ಅಥವಾ ಹಾಡಿನಂತಿರುವ ಸಂಗೀತ ಪ್ರಕಾರ) ನೀಳಗೀತೆಗಳು ಮತ್ತು ಕೊಲೊರೇಟಸ್ (ಅಲಂಕಾರಿಕ ಸಂಗೀತ)ಗಳೊಂದಿಗೆ ನಾನು ಕೆಲವು 'ಕಡೆಂಜ಼ಾ' ಗಳನ್ನು ಬರೆದುಕೊಂಡಂತೆ ನೆನಪು. ಮ್ಯಾಡ್ಲ್ ವೆಬರ್‌ಳ ಅಭ್ಯಾಸಕ್ಕೆ ಇವುಗಳನ್ನು ಬಳಸಲು ಬಯಸಿದ್ದೇನೆ. ನಾನು ಬಾಷ್‌ನ ಎಂಡಾಂಟಿನೋ (ಇಟಾಲಿಯನ್ ಸಂಗೀತದ ಲಯವುಳ್ಳ) ಕಂಟಾಬೈಲ್‌ಗಳನ್ನು ಅವಳಿಗೆ ಈಗತಾನೆ ಕಲಿಸಿದ್ದೇನೆ. ನಿನ್ನೆ ಕ್ಯಾನಬಿಚ್‌ನಲ್ಲಿ ಸಂಗೀತ ಕಛೇರಿ ಇತ್ತು. ಅದರಲ್ಲಿ, ಮೊದಲ ಸಿಂಫೋನಿಯನ್ನು ಹೊರತುಪಡಿಸಿ, ಉಳಿದೆಲ್ಲಾ ಗೀತೆಗೆ ನನ್ನ ಸಂಯೋಜನೆಗಳನ್ನೇ ಬಳಸಿಕೊಳ್ಳಲಾಗಿತ್ತು. 'ಬಿ'ನಲ್ಲಿ ನಡೆದ ನನ್ನ ಕಛೇರಿಯಲ್ಲಿ ರೋಸ್ ಮತ್ತು ಮ್ಯಾಡ್ಲೇ ನೆರವು ನೀಡಿದರು. ಫರ್ಲೆಂದಿಯಲ್ಲಿ 'ಹಾಟ್ ಬಾಯ್ 8 ಸಂಯೋಜನೆಯನ್ನು ಹೆರ್ ರ್‍ಯಾಮ್ ಐದನೇ ಬಾರಿ ಹಾಡಿ ಸಂಚಲನ ಮೂಡಿಸಿದರು.

ಇಟಲಿ ಮತ್ತು ಅಲ್ಲಿಗೆ ಹೋಗುವ ನನ್ನ ಹಂಬಲವನ್ನು ಎಂದಿಗೂ ಮರೆಯಬೇಡಿ; ನನ್ನ ಮಹತ್ವಾಕಾಂಕ್ಷೆ ಮತ್ತು ಬಯಕೆಯ ಅರಿವು ನಿಮಗಿದೆ ಎಂದು ಭಾವಿಸುತ್ತೇನೆ. ಆ ಭಗವಂತನಲ್ಲಿ ನನಗೆ ಅಚಲ ವಿಶ್ವಾಸ. ಆ ದಯಾಮಯಿ ನನ್ನ ಕೈ ಬಿಡಲಾರ ಎಂಬ ಭರವಸೆ ನನಗಿದೆ. ಕಡೆಯದಾಗಿ, ನನ್ನ ಪ್ರಾರ್ಥನೆ ಮತ್ತು ಮನವಿಗಳನ್ನು ದಯವಿಟ್ಟು ಮರೆಯದಿರಿ.

ಮೊಜಾರ್ಟ್

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .