|
ಪ್ರಕೃತಿ: ಸಂಘರ್ಷ
ವನ್ಯಮೃಗ ಮುನಿಸಿಗೆ ಯಾರು ಕಾರಣ?
ಆನೆ, ಕರಡಿ ದಾಳಿಗೆ ತತ್ತರಿಸಿದ ಒರಿಸ್ಸಾ ಜನತೆ

ಕಳೆದ ತಿಂಗಳಿಡೀ ರಾಮ್‌ಸಿಂಗ್ ಮುಂಡಾ ಮತ್ತು
ರಾಣಿ ಎಂಬ ಕರಡಿಯ ನಡುವಿನ ಸ್ನೇಹದ ಕುರಿತಾಗಿ ಒರಿಸ್ಸಾದಲ್ಲಿ
ಸುದ್ದಿಯಾಗಿದ್ದರೆ ಈಗ ಮತ್ತೆ ಅಂತಹುದೇ
-ವನ್ಯಜೀವಿ
ಮತ್ತು ಮನುಷ್ಯರ ನಡುವಿನ ಸಂಬಂಧ-
ಸುದ್ದಿಯಲ್ಲಿದೆ.
ಆದರೆ ಇದು ರಾಮ್ ಸಿಂಗ್ ಹಾಗೂ ರಾಣಿಯಂತೆ ಸ್ನೇಹ
ಸಂಬಂಧವಲ್ಲ.
ಬದಲಾಗಿ ಕಠೋರ ಮುಖದ ಅನಾವರಣ.
ಜುಲೈ ಎರಡನೇ ವಾರದಲ್ಲಿ ಆನೆ ಹಾಗೂ ಕರಡಿ
ಸಮಸ್ಯೆಗಳು ಹುಟ್ಟುಹಾಕಿದ ಪ್ರಶ್ನೆಗಳು ಹಲವು.
ಜುಲೈ
8ರಂದು ಆಂಗುಲ್‌ನಲ್ಲಿ ದಂಪತಿಯ ಮೇಲೆ ಆನೆಯೊಂದು
ಆಕ್ರಮಣ ಮಾಡಿದ್ದರಿಂದ ಅವರು ಜೀವ ತೆರಬೇಕಾಯಿತು.
ಮರುದಿನವೇ ಕಿಯೊಂಝರ್ ಜಿಲ್ಲೆಯ ತಾಲ್ಕೊಯ್‌ನಲ್ಲಿ
ಮಹಿಳೆಯೊಬ್ಬಳು ಆನೆಗೆ ಬಲಿಯಾದಳು.
ಅಷ್ಟು ಮಾತ್ರವಲ್ಲ ಹೆದ್ದಾರಿಯಲ್ಲಿ ವಾಹನಗಳನ್ನು
ತಡೆದು ಆಹಾರ ಕಸಿದುಕೊಳ್ಳುವ ಅಭ್ಯಾಸ ಹೊಂದಿದ್ದ ಕುಖ್ಯಾತ
'ಡಕಾಯಿತ ಆನೆ'ಯೊಂದು
ಒಬ್ಬ ವ್ಯಕ್ತಿಯನ್ನು ಕೊಂದಿತ್ತು.
ಒಂದೆಡೆ ಆನೆಗಳು ಮನುಷ್ಯರ ಸರಣಿ ಹತ್ಯೆಗೆ
ಕಾರಣವಾಗುತ್ತಿದ್ದರೆ ಇನ್ನೊಂದೆಡೆ ಕರಡಿಗಳ ಉಪಟಳ.
ನುವಾಪರಾ ಜಿಲ್ಲೆಯ ಹಾತಿಸಾರದಲ್ಲಿ ಜುಲೈ
11ರಂದು ಕರಡಿಯ
ಆಕ್ರಮಣದಿಂದಾಗಿ ಐದು ಮಂದಿ ಗಾಯಗೊಂಡಿದ್ದರು.
ಮರುದಿನವೇ ಕೋರಾಪುಟ್ ಜಿಲ್ಲೆಯಲ್ಲಿ
ಮಹಿಳೆಯೊಬ್ಬಳ ಮೇಲೆ ಕರಡಿ ಆಕ್ರಮಣ ಮಾಡಿತು.
ಒರಿಸ್ಸಾಕ್ಕೂ ವನ್ಯಜೀವಿ ಆಕ್ರಮಣಕ್ಕೂ
ಬಹುದೊಡ್ಡ ಇತಿಹಾಸವಿದೆ.
ಪ್ರತಿ ದಿನ ಈ ಕುರಿತಂತೆ ಒಂದಲ್ಲಾ ಒಂದು ಪತ್ರಿಕೆಯಲ್ಲಿ
ವರದಿ ಇದ್ದೇ ಇರುತ್ತದೆ.
ದಾಖಲೆಗಳ ಪ್ರಕಾರ
1998-99
ಮತ್ತು 2003-04ರಲ್ಲಿ
ಒರಿಸ್ಸಾದಲ್ಲಿ 228
ಮಂದಿ ಆನೆಗಳಿಂದಾಗಿ ಸಾವನ್ನಪ್ಪಿದ್ದಾರೆ.
ಆನೆಗಳಿಗೆ ಬಲಿಯಾದವರ ಸಂಖ್ಯೆ
2005-06ರಲ್ಲಿ
42,
2006-07ರಲ್ಲಿ
49
ಆಗಿದ್ದರೆ ಆ ಸಂಖ್ಯೆ ಈ ವರ್ಷ ಈಗಾಗಲೇ
34ಕ್ಕೆ
ತಲುಪಿದೆ.
ಇನ್ನೊಂದೆಡೆ ತಮ್ಮನ್ನು ರಕ್ಷಿಸಿಕೊಳ್ಳುವ ಮತ್ತು
ಬೆಳೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆನೆಗಳನ್ನು ಕೊಲ್ಲಲಾಗುತ್ತಿದೆ.
ಕಳೆದ ಮೂರು ವರ್ಷಗಳಲ್ಲಿ
26 ಆನೆಗಳು ಇದೇ
ಕಾರಣದಿಂದಾಗಿ ಸಾವನ್ನಪ್ಪಿವೆ.
ಅತಿಯಾದ ಪ್ರಮಾಣದಲ್ಲಿ ಅರಣ್ಯ
ನಾಶವಾಗುತ್ತಿರುವುದೇ ಈ ಘಟನೆಗಳಿಗೆ ಕಾರಣ ಎನ್ನುವ ವನ್ಯಜೀವಿ ತಜ್ಞ
ಪ್ರತ್ಯುಶ್ ಮಹಾಪಾತ್ರ, "ಆನೆಗಳ
ಆವಾಸಸ್ಥಾನವನ್ನು ನಾಶ ಮಾಡುವುದರಿಂದ ಅವು ಆಹಾರ ಅರಸುತ್ತಾ ಹಳ್ಳಿಗಳಿಗೆ
ಬರುತ್ತವೆ.
ಮನುಷ್ಯರ ಮೇಲಿನ ಭೀತಿಯಿಂದ ಅವು ಈ ರೀತಿಯ ಆಕ್ರಮಣಶೀಲ
ಪ್ರವೃತ್ತಿ ರೂಢಿಸಿಕೊಂಡಿವೆ"
ಎನ್ನುತ್ತಾರೆ.
ವನ್ಯಜೀವಿ ಹಾಗೂ ಮನುಷ್ಯರ ನಡುವಿನ ಸಂಘರ್ಷ
ತಪ್ಪಿಸುವ ಉದ್ದೇಶದಿಂದ ಸರ್ಕಾರ ಕೆಲವು ನೂತನ ಹೆಜ್ಜೆಗಳನ್ನು ಮುಂದಿಟ್ಟಿದೆ.
ಆನೆಗಳು ಹಳ್ಳಿಯ ಒಳ ಪ್ರವೇಶಿಸದಂತೆ ಹಳ್ಳಿಯ
ಹೊರಭಾಗದಲ್ಲಿ ಕಂದಕಗಳನ್ನು ನಿರ್ಮಿಸಲಾಗುತ್ತಿದೆ.
ಆನೆಗಳು ಹಳ್ಳಿಯ ಒಳಪ್ರವೇಶಿಸಿದಾಗ ಹಳ್ಳಿಗರು
ಯಾವ ರೀತಿ ವರ್ತಿಸಬೇಕು ಎಂಬುದನ್ನೂ ಮಾಧ್ಯಮಗಳ ಮೂಲಕ ತಿಳಿಸಲಾಗುತ್ತಿದೆ.
ಇದಲ್ಲದೆ ರಾತ್ರಿ ಹೊತ್ತು ಹಳ್ಳಿಗರು ಪ್ರಖರವಾದ
ದೊಂದಿ,
ಪಟಾಕಿ,
ವಾದ್ಯಗಳನ್ನು ಬಳಸದಂತೆ ನಿರ್ಬಂಧಿಸಲಾಗಿದೆ.
ಪ್ರಕೃತಿಗೆ ವಿರೋಧವಾಗಿ ನಡೆದರೆ ಏನಾಗುತ್ತದೆ
ಎಂಬುದಕ್ಕೆ ಒರಿಸ್ಸಾ ಜ್ವಲಂತ ಸಾಕ್ಷಿ.
ಟಿಎಸ್‌ಐ
ದೇವವೃತ ಪೋಧಾ
ಆಂಧ್ರಪ್ರದೇಶ: ಪ್ರತ್ಯೇಕತಾವಾದ
'ಪ್ರತ್ಯೇಕ' ತೆಲಂಗಾಣ
ಜಾತಿ ರಾಜಕಾರಣದ ಹಣಾಹಣಿ

ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆಗೆ
ಮತ್ತೊಂದು ತಿರುವು ಸಿಕ್ಕಿದೆ.
ಇತ್ತೀಚೆಗೆ ತೆಲುಗು ದೇಶಂ ಪಕ್ಷಕ್ಕೆ ರಾಜೀನಾಮೆ
ಕೊಟ್ಟಿರುವ ಮಾಜಿ ಗೃಹಸಚಿವ ದೇವೇಂದರ್ ಗೌಡ್ ಹುಟ್ಟು ಹಾಕಿದ ಹೊಸ ರಾಜಕೀಯ
ಪಕ್ಷ 'ನವ
ತೆಲಂಗಾಣ ಪ್ರಜಾ ಪಕ್ಷ'
(ಎನ್‌ಟಿಪಿ)
ಮೂಲ ಉದ್ದೇಶಕ್ಕೆ ಹಾಲು,
ಬೆಲ್ಲ,
ಮತ್ತು ದ್ರಾಕ್ಷಿಗಳ ಲೇಪನ ಬಳಿದಿದೆ!
ಹಿಂದುಳಿದ ಟೋಡ್ಲರ್ ಸಮುದಾಯಕ್ಕೆ ಸೇರಿದ ಗೌಡ್
ಅವರು ಈಚೆಗೆ ತಮ್ಮ ಹೊಸ ಪಕ್ಷವನ್ನು ಉದ್ಘಾಟಿಸಿದರು.
ಆಕಾಶನೀಲಿ ಬಣ್ಣದ ಹಿನ್ನೆಲೆಯಲ್ಲಿ ಕಂದು ಬಣ್ಣದ
ತೆಲಂಗಾಣ ಪ್ರಾಂತ್ಯದ ಭೂಪಟವುಳ್ಳ ಧ್ವಜವನ್ನು ಇದೇ ಸಂದರ್ಭದಲ್ಲಿ
ಪ್ರದರ್ಶಿಸಿದರು.
ತೆಲಂಗಾಣದ ಹಿಂದುಳಿದ ಸಮುದಾಯಗಳ ಮತಗಳ ಮೇಲೆ ಗೌಡ್
ಕಣ್ಣಿಟ್ಟಿದ್ದಾರೆ.
'ಎರಡನೇ
ಸ್ವಾತಂತ್ರ್ಯ ಸಂಗ್ರಾಮ'
ಎಂದು ಅವರು ವರ್ಣಿಸಿರುವುದರಲ್ಲಿ ತೆಲಂಗಾಣ ಪ್ರಾಂತ್ಯದ ಹಿಂದುಳಿದ
ಜನಾಂಗವನ್ನು ಆಕರ್ಷಿಸುವ ಉದ್ದೇಶವೇ ಮುಖ್ಯವಾಗಿತ್ತು.
ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ತೆಲಂಗಾಣದ
ಹಿಂದುಳಿದ ಜನತೆಗೆ ಹೆಚ್ಚು ಮಹತ್ವ ನೀಡಿಲ್ಲ.
ಹೀಗಾಗಿ ಹೊಸ ಪಕ್ಷಗಳಾದ ಕಸಾನಿ ಜ್ಞಾನೇಶ್ವರ್
ಅವರ 'ಮನಾ
ಪಕ್ಷ',
ಮಾಜಿ ಮುಖ್ಯ ಕಾರ್ಯದರ್ಶಿ ಕಾಕಿ ಮಾಧವರಾವ್
ಅವರಿಂದ ಅಸ್ತಿತ್ವಕ್ಕೆ ಬಂದಿರುವ
'ಫೋರಂ ಫಾರ್
ಎಂಪವರ್‌ಮೆಂಟ್ ಆಫ್ ವೀಕರ್ ಸೆಕ್ಷನ್'
(ಎಫ್‌ಇಡಬ್ಲುಎಸ್)
ಮೊದಲಾದ ಸಂಘಟನೆಗಳು ಹಿಂದುಳಿದ ವರ್ಗಗಳನ್ನು
ಓಲೈಸುವುದರಲ್ಲಿ ಜಿದ್ದಾಜಿದ್ದಿಗೆ ಬಿದ್ದಿವೆ.
ರಾಜ್ಯದಲ್ಲಿ ಜಾತಿ ರಾಜಕಾರಣ ಸಾಕಷ್ಟು ಹುಲುಸಾಗಿ
ಬೆಳೆದಿದೆ.
ಅದರಲ್ಲೂ ತೆಲಂಗಾಣಕ್ಕೆ ಸಂಬಂಧಿಸಿದಂತೆ ಟಿಡಿಪಿ
ಸ್ಥಾಪನೆಯಾಗುವವರೆಗೆ ರೆಡ್ಡಿ ಸಮುದಾಯದವರ ಪ್ರಭಾವ ಅಧಿಕವಾಗಿತ್ತು.
ಮುಖ್ಯಮಂತ್ರಿಗಳಾಗಿದ್ದ ಕಾಂಗ್ರೆಸ್‌ನ ಕಸು
ಬ್ರಹ್ಮಾನಂದ ರೆಡ್ಡಿ,
ನೀಲಂ ಸಂಜೀವ ರೆಡ್ಡಿ,
ಕೋಟ್ಲಾ ವಿಜಯ ಭಾಸ್ಕರ ರೆಡ್ಡಿ,
ಜನಾರ್ದನ ರೆಡ್ಡಿ,
ಮತ್ತೀಗ ರಾಜಶೇಖರ ರೆಡ್ಡಿ ತೆಲಂಗಾಣ
ಪ್ರಾಂತ್ಯದಿಂದಲೂ ರೆಡ್ಡಿಗಳ ಬೆಂಬಲ ಪಡೆಯುವಲ್ಲಿ ಸಫಲರಾಗಿ ಅಧಿಕಾರದ
ಗದ್ದುಗೆ ಹಿಡಿದವರು.
1978ರಲ್ಲಿ
ಪ್ರತ್ಯೇಕ ತೆಲಂಗಾಣ ಚಳವಳಿಯನ್ನು ಪ್ರಾರಂಭಿಸಿದ ತೆಲಂಗಾಣ ಮೂಲದ ಮರ್ರಿ
ಚೆನ್ನಾ ರೆಡ್ಡಿ ನಂತರ ಮುಖ್ಯಮಂತ್ರಿ ಆಗುವುದರೊಂದಿಗೆ ರೆಡ್ಡಿ ಜನಾಂಗದವರ
ರಾಜಕೀಯ ಪ್ರಾಬಲ್ಯ ಮತ್ತಷ್ಟು ಬಿಗಿಯಾಗಿತ್ತು.
ಆದರೆ ಎನ್‌ಟಿಆರ್ ಮತ್ತು ಚಂದ್ರಬಾಬು ನಾಯ್ಡು
ತಮ್ಮ 17
ವರ್ಷಗಳ ಆಳ್ವಿಕೆಯಲ್ಲಿ ರೆಡ್ಡಿಯೇತರ ಜನಾಂಗದವರನ್ನು ಚುನಾವಣೆಗೆ
ನಿಲ್ಲಿಸುವ ಹಾಗೂ ಗೆಲ್ಲಿಸುವ ಮೂಲಕ ರೆಡ್ಡಿ ಸಮುದಾಯದವರನ್ನು ರಾಜ್ಯ
ರಾಜಕೀಯದಿಂದ ಕೆಲ ಕಾಲ ಹೊರಗಿಡುವಲ್ಲಿ ಯಶಸ್ವಿಯಾದರು.
ಎನ್.ಟಿ.
ರಾಮರಾವ್
'ತೆಲುಗು ದೇಶಂ
ಪಕ್ಷ'
ಹುಟ್ಟು ಹಾಕಿದ ನಂತರ ಆಂಧ್ರಪ್ರದೇಶದ ಮತ್ತು ತೆಲಂಗಾಣ ಪ್ರಾಂತ್ಯದ
ಹಿಂದುಳಿದ ವರ್ಗದ ಜನತೆ ಎನ್‌ಟಿಆರ್ ಅವರ ಸಮಾನತೆ,
ಸಮಾಜವಾದಿ ತತ್ವಗಳೆಡೆಗೆ ಆಕರ್ಷಿತರಾದರು.
ಆದರೆ ನಾಯ್ಡು ಅವರ ಬಡವರ ವಿರೋಧಿ ಹಾಗೂ ಧನಿಕರ
ಪರವಾದ ಆಳ್ವಿಕೆಯಿಂದ ರೋಸಿ ಹೋದ ಹಿಂದುಳಿದ ಸಮುದಾಯದ ಬಹಳಷ್ಟು ಜನ ಇತರ
ಪಕ್ಷಗಳಾದ ಕಾಂಗ್ರೆಸ್ ಮತ್ತು ತೆಲಂಗಾಣ ರಾಷ್ಟ್ರೀಯ ಸಮಿತಿ
(ಟಿಆರ್‌ಎಸ್)
ಕಡೆಗೆ ಆಕರ್ಷಿತರಾದರು.
ಆದರೆ,
ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಅವರು ಮತ್ತೆ
ಕಾಂಗ್ರೆಸ್‌ನಲ್ಲಿ ರೆಡ್ಡಿ ಸಮುದಾಯಕ್ಕೆ ಪುನಶ್ಚೇತನ ನೀಡಿದರು.
ಕಳೆದ ಕೆಲ ವರ್ಷಗಳಲ್ಲಿ ಮುಖ್ಯಮಂತ್ರಿ,
ಗೃಹಸಚಿವ ಮತ್ತು ಸಭಾಧ್ಯಕ್ಷ ಸ್ಥಾನಗಳು
ರೆಡ್ಡಿಗಳ ಮುಷ್ಟಿಯಲ್ಲಿವೆ.
ಆಂಧ್ರದ ವಿಧಾನ ಸಭೆಯಲ್ಲಿ ರೆಡ್ಡಿ ಸಮುದಾಯದ
294
ಶಾಸಕರು ಇದ್ದಾರೆ.
483 ರೆಡ್ಡಿ
ಜನಾಂಗದವರು ಕಳೆದ ಕೆಲವು ವರ್ಷಗಳಿಂದ ಸಾರ್ವಜನಿಕ ಸೇವೆಗಳ ಆಯಕಟ್ಟಿನ ಸ್ಥಾನ
ಆಕ್ರಮಿಸತೊಡಗಿದ್ದಾರೆ.
ಜನಸಂಖ್ಯೆಯಲ್ಲಿ ಶೇ.
8-10ರಷ್ಟಿರುವ
ರೆಡ್ಡಿ ಮತ್ತು ಕಮ್ಮ ಜನಾಂಗದವರು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ
ಹಿಡಿದಿದ್ದಾರೆ.
ಶೇ.
50ಕ್ಕಿಂತ
ಹೆಚ್ಚಿರುವ ಹಿಂದುಳಿದ ಜನಾಂಗದವರಿಗೆ ಸರ್ಕಾರದ ಮೇಲೆ ಯಾವುದೇ ಹಿಡಿತವಿಲ್ಲ.
ವೇಲಮ ಸಮುದಾಯದ ಕೆ.
ಚಂದ್ರಶೇಖರ ರಾವ್ ನೇತೃತ್ವದ ಟಿಆರ್‌ಎಸ್
ಜಮೀನ್ದಾರ ವರ್ಗಕ್ಕೆ ಸೇರಿದ್ದು,
ಪಕ್ಷಕ್ಕೆ ತೆಲಂಗಾಣದಲ್ಲಿ ಅಮಾನವೀಯ ದಬ್ಬಾಳಿಕೆಯ
ಹಿನ್ನೆಲೆ ಇದೆ.
ಸಂಸತ್ ಸದಸ್ಯರು ಹಾಗೂ ಶಾಸಕರ ಸಾಮೂಹಿಕ ರಾಜೀನಾಮೆ ಮತ್ತು
ಕಳೆದ ಚುನಾವಣೆಯಲ್ಲಿ ಟಿಆರ್‌ಎಸ್‌ನ ಹೀನಾಯ ಸೋಲು ಇವು ತೆಲಂಗಾಣದ ಹಿಂದುಳಿದ
ಜನಾಂಗಗಳಲ್ಲಿ ಮೂಡಿರುವ ಆಕ್ರೋಶವನ್ನು ತೋರಿಸುತ್ತವೆ.
ದೇವೇಂದರ್ ಗೌಡ್ ಅವರಿಗೆ ಹಿಂದುಳಿದ ಸಮುದಾಯಗಳ ಈ
ರಾಜಕೀಯ ಹಾಗೂ ಸಾಮಾಜಿಕ ಅತೃಪ್ತಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ
ಇಂಗಿತವಿದ್ದ ಹಾಗಿದೆ.
ಈ ಮಧ್ಯೆ,
ಆಂಧ್ರದ ಮತ್ತೊಂದು ಮುಂದುವರಿದ ಜನಾಂಗ
'ಕಾಪು'ಗಳು
ರೆಡ್ಡಿ ನಂತರದ ಪ್ರಬಲ ಸಮುದಾಯದ ಸ್ಥಾನ ಪಡೆಯಲು ದಾಪುಗಾಲಿಡುತ್ತಿದ್ದಾರೆ.
ಕಾಪು ಸಮುದಾಯದ ಜನಪ್ರಿಯ ಸಿನಿಮಾ ನಟ ಚಿರಂಜೀವಿ
ಸದ್ಯದಲ್ಲಿಯೇ ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಿದಲ್ಲಿ,
ಅಧಿಕಾರದ ಗದ್ದುಗೆ ಹಿಡಿಯುವ ಅವರ ಕನಸು
ನನಸಾಗಬಹುದು.
ಹಾಗೊಂದು ವೇಳೆ ತೆಲಂಗಾಣ ವಿಚಾರವಾಗಿ ಸಮಾನ
ಮನಸ್ಥಿತಿಯನ್ನು ಹೊಂದಿದ್ದಲ್ಲಿ ಚಿರಂಜೀವಿ ಅವರ ಪಕ್ಷಕ್ಕೆ ಬೆಂಬಲ ನೀಡಲು
ತಾವು ಸಿದ್ಧವಿರುವುದಾಗಿ ಗೌಡ್ ತಿಳಿಸಿದ್ದಾರೆ.
ಬಹು ನಿರೀಕ್ಷಿತ ಚಿರಂಜೀವಿ ಅವರ ರಾಜಕೀಯ
ಪಕ್ಷಕ್ಕೆ ಆಂಧ್ರದ ಹಾಗೂ ತೆಲಂಗಾಣದ ರಾಜಕೀಯ ಮುಖವನ್ನೇ ಬದಲಾಯಿಸುವ
ಶಕ್ತಿಯಿದೆ.
ಟಿಎಸ್‌ಐ
ನರೇಶ್ ನುನ್ನಾ
ಕೋಲ್ಕತ್ತಾ: ಸಾರಿಗೆ
ಸುಗಮ ಪಯಣಕ್ಕೆ ಹೊಸ ಯೋಜನೆ
ಪ್ರತಿ ಟ್ಯಾಕ್ಸಿಯಲ್ಲೂ ಪ್ರಿಂಟರ್ ಅಳವಡಿಸಲು ಬಿಟಿಎ ಪ್ರಸ್ತಾವ

ಈಗ ಕೋಲ್ಕತ್ತಾ ಟ್ಯಾಕ್ಸಿಗಳ ಎದುರಿಗಿರುವುದು
ಅಭಿವೃದ್ಧಿಯ ಪರ್ವಕಾಲ.
ಡಿಜಿಟಲ್ ಪ್ರಿಂಟರ್ ಮತ್ತು ಪ್ರಯಾಣಿಕರಿಗೆ
ಅನುಕೂಲಕರವಾಗುವ ಇನ್ನಿತರ ಸೌಲಭ್ಯಗಳನ್ನು ಟ್ಯಾಕ್ಸಿಗಳಲ್ಲಿ
ಅಳವಡಿಸಲಾಗುತ್ತಿರುವುದೇ ಟ್ಯಾಕ್ಸಿಗಳ ಅದೃಷ್ಟ ಖುಲಾಯಿಸುತ್ತಿರುವುದಕ್ಕೆ
ಮುಖ್ಯ ಕಾರಣ.
'ಬೆಂಗಾಲ್
ಟ್ಯಾಕ್ಸಿ ಸಂಘ'
(ಬಿಟಿಎ)ದ
ಕಾರ್ಯದರ್ಶಿ ಬಿಮಲ್ ಗುಹಾ ಪ್ರಯಾಣಿಕರಿಗೆ ಇದರಿಂದಾಗುವ ಅನುಕೂಲಗಳ ಬಗ್ಗೆ
ಆಶಾವಾದ ವ್ಯಕ್ತಪಡಿಸುತ್ತಾ, "ನಾನು
'ಸಾರ್ವಜನಿಕ
ವಾಹನ ಇಲಾಖೆ'
(ಪಿವಿಡಿ)ಗೆ
ಈಗಾಗಲೇ ಪತ್ರವೊಂದನ್ನು ಕಳುಹಿಸಿದ್ದು,
ಪ್ರತಿ ಟ್ಯಾಕ್ಸಿ ಚಾಲಕನೂ ತನ್ನ ವಾಹನಗಳಲ್ಲಿ
ಪ್ರಿಂಟರ್ ಅಳವಡಿಸುವುದನ್ನು ಕಡ್ಡಾಯಗೊಳಿಸಬೇಕೆಂದು ಕೇಳಿಕೊಂಡಿದ್ದೇನೆ"
ಎನ್ನುತ್ತಾರೆ.
ಅಂದಹಾಗೆ ಬಿಲ್ಲಿಂಗ್ ಉದ್ದೇಶಗಳಿಗಾಗಿ ಈ
ಕಂಪ್ಯೂಟರೀಕೃತ ಪ್ರಿಂಟರ್‌ಗಳನ್ನು ಬಳಸುವ ಬಗ್ಗೆ ಚಿಂತಿಸಲಾಗುತ್ತಿದೆ.
ಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ
ಸುಮಂತ್ರ ಚೌಧುರಿ, "ಇಲ್ಲಿಯವರೆಗೆ
ಈ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಆದರೆ ಇದರಿಂದ ಪ್ರಯಾಣಿಕರಿಗೆ ಸಾಕಷ್ಟು
ಪ್ರಯೋಜನವಾಗುವುದಂತೂ ಸತ್ಯ.
ಆದರೆ ಮೀಟರ್‌ಗಳನ್ನು ಅಕ್ರಮವಾಗಿ ತಿದ್ದುವ
ಪರಿಪಾಠ ನಿಯಂತ್ರಿಸಲು ಇದರಿಂದ ಸಾಧ್ಯವಾಗುವುದು ಕಷ್ಟ.
ಆದಾಗ್ಯೂ ಒಂದು ವೇಳೆ ಮೀಟರ್‌ಗಳಲ್ಲಿ ಅಕ್ರಮ
ನಡೆಯಿತೆಂದರೆ ಪ್ರಿಂಟರ್ ಕಾರ್ಯ ನಡೆಸುವುದೇ ಇಲ್ಲ"
ಎಂದು ಹೇಳುತ್ತಾರೆ.
ಪಿವಿಡಿ ಮುಂದಿನ ತಿಂಗಳು
300
ಟ್ಯಾಕ್ಸಿಗಳಿಗೆ ಪರವಾನಗಿ ನೀಡುತ್ತಿದೆ.
"ಪ್ರಿಂಟರ್‌ನ ಮುದ್ರಿತ ಕಾಗದ
ಪ್ರಯಾಣಿಸುತ್ತಿರುವ ವಾಹನದ ಸಂಪೂರ್ಣ ಮಾಹಿತಿ ನೀಡುತ್ತದೆ.
ಒಂದು ವೇಳೆ ಪ್ರಯಾಣಿಕ ತನಗೆ ಸಂಬಂಧಪಟ್ಟ
ವಸ್ತುಗಳನ್ನು ಟ್ಯಾಕ್ಸಿಯಲ್ಲೇ ಮರೆತಿದ್ದರೆ ಅಥವಾ ದೂರು
ನೀಡಬೇಕೆಂದಿದ್ದಲ್ಲಿ ಟ್ಯಾಕ್ಸಿ ಸಂಘದ ಬದಲಿಗೆ ನೇರವಾಗಿ ವಾಹನ ಮಾಲೀಕನಿಗೆ
ಕರೆ ಮಾಡುವ ಅವಕಾಶವಿದೆ"
ಎನ್ನುತ್ತಾರೆ ಗುಹಾ.
ಈ ಮುದ್ರಿತ ಪ್ರತಿಯಲ್ಲಿ ನಿರ್ದಿಷ್ಟ ಬಾಡಿಗೆ,
ಪ್ರಯಾಣಿಸಿದ ಒಟ್ಟು ದೂರ,
ಕಾರಿನ ಮಾಲೀಕ ಹಾಗೂ ಆತನಿರುವ ಸಂಘದ ಸಂಪರ್ಕ
ಮಾಹಿತಿಯೂ ಲಭ್ಯ.
ಇಷ್ಟಾದರೂ ಈ ಯೋಜನೆ ಇನ್ನೂ ಕಾರ್ಯಗತವಾಗುವ
ಹಂತ ತಲುಪಿಲ್ಲ. "ಬಿಟಿಎ
ಈ ನೂತನ ಯೋಜನೆಯನ್ನು ಸಾರಿಗೆ ಇಲಾಖೆ ಎದುರಿಟ್ಟಿದ್ದು ಅಲ್ಲಿಂದ ಹಸಿರು
ನಿಶಾನೆ ಬರಬೇಕಾಗಿದೆ"
ಎನ್ನುತ್ತಾರೆ ಬಿಟಿಎ ಕಾರ್ಯದರ್ಶಿ ಬಿಹಾಲ್ ಗುಹಾ.
ಅಂದಹಾಗೆ ಟ್ಯಾಕ್ಸಿಗಳಲ್ಲಿ ಅಳವಡಿಸಲು
ಉದ್ದೇಶಿತವಾಗಿರುವ ಪ್ರಿಂಟರ್ ಬೆಲೆ ಅಂದಾಜು ರೂ.
3000
ಆಗಲಿದ್ದು ಬಹುತೇಕ ನಗರಪಾಲಿಕೆಗಳು ಪ್ರಿಂಟರ್ ಅಳವಡಿಸಲು ಉತ್ಸುಕವಾಗಿವೆ.
ಆದರೆ ಕೆಲವು ವರ್ಷಗಳ ಹಿಂದೆ ಬಿಟಿಎ ಇಂತಹದ್ದೇ
ಯೋಜನೆಯನ್ನು ವಿಧ್ಯುಕ್ತವಾಗಿ ಆರಂಭಿಸಿತ್ತು ಎಂಬುದನ್ನು ಮರೆಯುವಂತಿಲ್ಲ.
ಅಂದು ಚಾಲಕರ ಸಂಪೂರ್ಣ ಮಾಹಿತಿಯುಳ್ಳ
2,000
ಪಟ್ಟಿಗಳನ್ನು ಅದು ಮುದ್ರಿಸಿತು.
ಆದರೆ ಪ್ರಯಾಣಿಕರು ಹೆಚ್ಚಿನ ಆಸಕ್ತಿ ತೋರದ ಕಾರಣ
ಯೋಜನೆ ನೆಲಕಚ್ಚಿತು.
ವಿವೇಕಪೂರ್ಣವಾದ ಹೊಸ ಯೋಜನೆಯಾದರೂ ಮೂಲೆಗೆ ಸರಿಯುವಂತಾಗದೆ
ಪ್ರಯಾಣಿಕರಿಗೆ ನೆಮ್ಮದಿಯ ಪಯಣಕ್ಕೆ ಪೂರಕವಾದೀತೇ?.
ಟಿಎಸ್‌ಐ
ಸಯಾನ್ ಘೋಷ್
|