ಇಂಡೋನೇಷಿಯ: ದುರವಸ್ಥೆ
ಪ್ರಜಾಸತ್ತೆ ಬಂದರೂ ನೆಮ್ಮದಿ ಬರಲಿಲ್ಲ
ಸದೃಢ ಆರ್ಥಿಕ ವ್ಯವಸ್ಥೆ ನಿರ್ಮಿಸುವಲ್ಲಿ ವಿಫಲವಾಗುತ್ತಿರುವ ಪ್ರಸಕ್ತ ಸರ್ಕಾರ

ಮುಸ್ಲಿಂ-ಕ್ರಿಶ್ಚಿಯನ್
ಮತ್ತು ಜಿಹಾದಿಗಳ ಹಿಂಸಾಚಾರ ಇಂಡೋನೇಷಿಯಾದ ಇತಿಹಾಸದ ಪುಟಗಳಲ್ಲಿ
ಸಮಾಧಿಯಾಗಿಬಿಟ್ಟಿತೆಂದು ನಂಬಲಾಗಿತ್ತು.
ಆದರೆ,
ಆ ಹಿಂಸಾಚಾರದ ಪರಿಣಾಮ ಈಗಲೂ ಆ ರಾಷ್ಟ್ರದಾದ್ಯಂತ
ವ್ಯಾಪಿಸಿರುವುದನ್ನು ಕಾಣಬಹುದು.
ಶಾಂತಿ ಒಪ್ಪಂದವನ್ನು ಸರ್ಕಾರ ಮುರಿದ ಮೇಲೆ,
ಹಿಂಸಾಚಾರ ಅಲ್ಲಿ ನಿಯಂತ್ರಣ ಕಳೆದುಕೊಂಡಿದೆ.
ಸ್ಥಳೀಯ ಮೂಲಭೂತವಾದಿಗಳು
'ಜೆಮಾ ಇಸ್ಲಾಮಿಯಾ'
(ಜೆಐ)ದಂತಹ
ಮೂಲಭೂತವಾದಿ ಸಂಘಟನೆಯ ಜೊತೆಗೂಡಿ ಸ್ಥಳೀಯ ಕ್ರಿಶ್ಚಿಯನ್ ಸಮುದಾಯದ ಬದುಕನ್ನು
ಅಸಹನೀಯಗೊಳಿಸಿದ್ದಾರೆ.
ಇತ್ತೀಚೆಗಿನ ದಿನಗಳಲ್ಲಿ ಇಂಡೋನೇಷಿಯಾ ತನ್ನ ರಾಜಕೀಯ
ಬಿಕ್ಕಟ್ಟಿನಿಂದಾಗಿ ಸುದ್ದಿಯಲ್ಲಿದೆ.
ಜನರಲ್ ಸುಹಾರ್ತೊ ಆಡಳಿತ
(ಸೇನಾ ಕ್ರಾಂತಿಯ
ನಂತರ ಕ್ರೂರ ಸರ್ವಾಧಿಕಾರಿಯಾದ ಈತ ಅರ್ಧ ದಶಲಕ್ಷಕ್ಕೂ ಹೆಚ್ಚು ಜನರನ್ನು
ಹತ್ಯೆಗೈದು ಕಮ್ಯುನಿಸ್ಟ್ ಪಕ್ಷವನ್ನು ನಿರ್ನಾಮ ಮಾಡಿದ)
ಕೊನೆಗೊಂಡು ಪ್ರಜಾಪ್ರಭುತ್ವಕ್ಕೆ ಅಡಿ ಇಟ್ಟ ಮೇಲೂ
ರಾಜಕೀಯ ಸ್ಥಿರತೆ ಅಲ್ಲಿ ಮರೀಚಿಕೆಯಾಗಿದೆ.
ಈ ಎಲ್ಲಾ ದುರವಸ್ಥೆಗೆ ಕಳಸವಿಟ್ಟಂತೆ
ರಾಜಕೀಯದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ಪ್ರತಿಷ್ಠಿತ ವ್ಯಕ್ತಿಗಳು ಕೂಡಾ
ಮತಾಂಧತೆಯನ್ನು ಹರಡುವ ಕಾರ್ಯದಲ್ಲಿ ತೊಡಗಿದ್ದಾರೆ.
'ಈ
ದೇಶದಲ್ಲಿ ಮೂಲಭೂತವಾದಿಗಳು ಹೇಳಬೇಕು;
ಉಳಿದವರು ಬಾಯಿಮುಚ್ಚಿ ಕೇಳಬೇಕು'
ಎಂಬ ಅರ್ಥದ ಸಂದೇಶವೊಂದು ಈಚೆಗೆ ಮೊನಾಸ್‌ನಿಂದ ಹೊರಬಿದ್ದಿದೆ.
2002ರ
ಬಾಲಿ ಬಾಂಬ್ ಸ್ಫೋಟದ ಹಿಂದೆ ಇಸ್ಲಾಮಿಕ್ ಉಗ್ರರ ಕೈವಾಡವಿದೆ ಎಂದು
ಆರೋಪಿಸುವುದರಿಂದ ಹಿಡಿದು ಇಸ್ಲಾಮಿ ಸಂಘಟನೆಗಳನ್ನು ನಿಷೇಧಿಸುವವರೆಗಿನ ಯಾವುದೇ
ವಿಷಯವೂ ಆ ರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ ಸ್ಥಿತಿಯನ್ನು
ಅಲುಗಾಡಿಸುತ್ತದಷ್ಟೆ.
ಬಹಳಷ್ಟು ರಾಜಕೀಯ ನಾಯಕರು ತಾವು ಶಾಂತಿ ಪ್ರತಿಷ್ಠಾಪನಾ
ಮತ್ತು ಸುಧಾರಣಾ ಪ್ರಕ್ರಿಯೆಯಲ್ಲಿ ಭಾಗಿ ಎಂದೇನೋ ಘೋಷಿಸುತ್ತಾರೆ.
ಆದರೆ,
ಜನಸಾಮಾನ್ಯರಿಗೆ ಮಾತ್ರ ಸರ್ಕಾರದ ಈ ಮಾತಿನ ಮೇಲೆ
ನಂಬಿಕೆ ಮೂಡುತ್ತಿಲ್ಲ.
ಇಂಡೋನೇಷಿಯಾದ ಜನತೆ ಸರ್ಕಾರ ಮತ್ತು ಅದರ ಕಾರ್ಯವೈಖರಿಯ
ಕುರಿತು ಇನ್ನೂ ಹೆಚ್ಚಿನ ಅರಿವು ಬೆಳೆಸಿಕೊಳ್ಳುವುದು ಅತಿಮುಖ್ಯ.
ಅದಕ್ಕಿಂತ ಹೆಚ್ಚಾಗಿ,
ಉಗ್ರವಾದ ವ್ಯಾಪಕವಾಗಿರುವುದಕ್ಕೆ ಮುಸ್ಲಿಂ ಸಮುದಾಯ
ಅಥವಾ ಇಸ್ಲಾಂ ಧರ್ಮವನ್ನು ದೂಷಿಸುವುದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುವುದೇ
ವಿನಾ ಇನ್ನೇನೂ ಸಾಧ್ಯವಾಗದು ಎನ್ನುವ ಸಂಗತಿ ಸರ್ಕಾರಕ್ಕೆ ಮನವರಿಕೆಯಾಗಬೇಕು.
ಅಸಮರ್ಥ ನಾಯಕತ್ವ,
ಆರ್ಥಿಕ ಮತ್ತು ರಾಜಕೀಯ ದುಸ್ಥಿತಿಯ ಕಾರಣದಿಂದಲೇ
ಅಲ್ಲಿ ಮೂಲಭೂತವಾದ ಮತ್ತು ಉಗ್ರವಾದ ತಲೆಎತ್ತಿದೆ.
ಈಗಿನ ಸರ್ಕಾರ ಸಶಕ್ತ ರಾಜಕೀಯ ನಾಯಕತ್ವವನ್ನಾಗಲೀ
ಅಥವಾ ಸದೃಢ ಆರ್ಥಿಕ ವ್ಯವಸ್ಥೆಯನ್ನಾಗಲೀ ನಿರ್ಮಿಸುವಲ್ಲಿ ಸಂಪೂರ್ಣ
ವಿಫಲವಾಗಿದೆ.
ಇದು ದೇಶದ ಆರ್ಥಿಕ ಮತ್ತು ವ್ಯಾಪಾರೋದ್ಯಮದ ಮೇಲೆ
ವ್ಯತಿರಿಕ್ತ ಪರಿಣಾಮ ಬೀರಿದೆ;
ಎಲ್ಲಕ್ಕಿಂತ ಹೆಚ್ಚಾಗಿ ದೇಶದ ಆರ್ಥಿಕತೆಗೆ ಗಣನೀಯ
ಕೊಡುಗೆ ನೀಡುವ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಪೆಟ್ಟು ಬಿದ್ದಿದೆ.
ದೇಶದಲ್ಲಿ ಸಂಪೂರ್ಣ ಶಾಂತಿ,
ಸುವ್ಯವಸ್ಥೆ,
ನೆಮ್ಮದಿ ನೆಲೆಸುವಂತೆ ಮಾಡಲು ಸಾಮಾಜಿಕ ನ್ಯಾಯ
ಮತ್ತು ಕಾನೂನು ಹೊಣೆಗಾರಿಕೆ ಹಾದಿಯಲ್ಲಿ ಇನ್ನೂ ಸಾಕಷ್ಟು ದೂರ ಸಾಗಬೇಕಿದೆ.
ಐಐಪಿಎಂ
'ಥಿಂಕ್ ಟ್ಯಾಂಕ್
ಸ್ರೇ ಅಗರ್‌ವಾಲ್
ಕಾನೂನು: ವ್ಯಂಗ್ಯ
ಮೇರಾ ಭಾರತ್ ಮಹಾನ್!
ದೇಶ ರಕ್ಷಕರ ವಿಚಾರಣೆ, ಕೊಲೆಗಡುಕರತ್ತ ಮೆದು ಧೋರಣೆ: ಇದು ಇಲ್ಲಿನ ಕಾನೂನು!

'ಗಡಿ
ಭದ್ರತಾ ಪಡೆ'ಯ
ಕಾರ್ಯ ಚಟುವಟಿಕೆಗಳು 'ಬಿಎಸ್‌ಎಫ್
ಕಾಯ್ದೆ'ಯ
ಅನುಸಾರ ನಡೆಯುತ್ತವೆ. ಬಿಎಸ್‌ಎಫ್ ಕಾಯ್ದೆ ಮತ್ತು ನಿಯಮಾವಳಿ-
2004ರಲ್ಲಿ
ಅಪರಾಧ ಎಸಗಿದ ಗಡಿ ಭದ್ರತಾ ಪಡೆಯ ಯೋಧರ ಶಿಕ್ಷೆಗೆ ಸಂಬಂಧಪಟ್ಟಂತೆ
'ಮೃತ್ಯು'
ಎಂಬ ಪದವನ್ನು 60
ಬಾರಿ ಪ್ರಸ್ತಾಪಿಸಲಾಗಿದೆ. ಕಾಯ್ದೆಯ ಮೂರನೇ ಪರಿಚ್ಛೇದದಲ್ಲಿ ವಿವಿಧ
ಪ್ರಕಾರಗಳ ಅಪರಾಧಗಳ ಬಗ್ಗೆ ವಿವರಿಸಿದ್ದರೆ, ನಾಲ್ಕನೇ ಪರಿಚ್ಛೇದದ ಪೂರಾ
ವಿಭಿನ್ನ ಪ್ರಕಾರಗಳ ಶಿಕ್ಷೆಗಳ ಕುರಿತು ಪ್ರಸ್ತಾಪಿಸಲಾಗಿದೆ.
ಗಲ್ಲುಶಿಕ್ಷೆಯಿಂದ ಜೀವಾವಧಿ ಶಿಕ್ಷೆಯವರೆಗೆ, ಸೇವೆಯಿಂದ
ವಜಾಗೊಳಿಸುವಲ್ಲಿಂದ ಆರಂಭಿಸಿ ಸೇನಾಧಿಕಾರಿಗಳನ್ನು ಉನ್ನತ ದರ್ಜೆಯಿಂದ
ಕೆಳಮಟ್ಟಕ್ಕೆ ಇಳಿಸುವವರೆಗೆ... ಹತ್ತು ಹಲವು ಪ್ರಕಾರಗಳ ಶಿಕ್ಷೆಯನ್ನು
ಅಲ್ಲಿ ವಿವರಿಸಲಾಗಿದೆ. ಇದಲ್ಲದೆ ಯೋಧರ ಸಿವಿಲ್ ಅಪರಾಧಗಳಿಗೆ ಕ್ರಿಮಿನಲ್
ಆರೋಪ ಹೊರಿಸಿ ಕ್ರಿಮಿನಲ್ ಕೋರ್ಟ್‌ಗಳಲ್ಲಿ ವಿಚಾರಣೆ ನಡೆಸಲೂ ಕಾಯ್ದೆಯಲ್ಲಿ
ಅವಕಾಶವಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವತ್ತೂ ಜನರ ಬೆಂಗಾವಲಾಗಿ
ನಿಲ್ಲುವ, ದೇಶ ರಕ್ಷಣೆಗಾಗಿ ತಮ್ಮ ಪ್ರಾಣತ್ಯಾಗಕ್ಕೆ ಸಿದ್ಧರಾಗುವ, ತಮ್ಮ
ಕುಟುಂಬಗಳನ್ನೇ ತೊರೆದು ನೀರು-ನೆರಳಿಲ್ಲದ ಪ್ರದೇಶದಲ್ಲಿ ಹೋರಾಡಲು
ಮುಂದಾಗುವ, ಇದಕ್ಕಾಗಿ ಹೇಳಿಕೊಳ್ಳುವಂತಹ ಭತ್ಯೆ ಏನನ್ನೂ ಪಡೆಯದ ಸೈನಿಕರ
ದುರವಸ್ಥೆ ಇದು!
ತಮಗಿರುವ ಅಧಿಕಾರವನ್ನು ಅತ್ಯಂತ ಅನಿವಾರ್ಯ
ಸನ್ನಿವೇಶಗಳಲ್ಲಿ ಬಳಸಿದ ಕಾರಣ ಕ್ರಿಮಿನಲ್ ಕೋರ್ಟ್‌ಗಳಲ್ಲಿ ಏಕಾಂಗಿಯಾಗಿ
ಹೋರಾಡಬೇಕಾದ ಪರಿಸ್ಥಿತಿ ಅವರದು. ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಗಡಿ
ಭದ್ರತಾ ಪಡೆಯ ಸೈನಿಕರು ಬಹಳ ಅನಿವಾರ್ಯವೆನಿಸಿದ ಸಂದರ್ಭಗಳಲ್ಲೂ ಆಯುಧ ಬಳಸಲು
ಹಿಂಜರಿಯುವ ಸ್ಥಿತಿ ನಿರ್ಮಾಣಗೊಂಡಿದೆ. ಒಂದು ವೇಳೆ ಸೈನಿಕರ ಕೈಯಿಂದ
ಪ್ರಮಾದವಶಾತ್ ವ್ಯಕ್ತಿಯೊಬ್ಬನ ಸಾವು ಸಂಭವಿಸಿತೆಂದರೆ ದುಸ್ವಪ್ನ
ಎದುರಾಯಿತೆಂದೇ ಅರ್ಥ. ಮಾನವ ಹಕ್ಕು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕಾಗಿ
ಶೋಷಣೆ ಆರಂಭವಾಗಿ ಬಿಡುತ್ತದೆ.
ಇವನ್ನೆಲ್ಲಾ ನೋಡಿದರೆ ಮಾನವ ಹಕ್ಕಿನ
ಪಾವಿತ್ರ್ಯ ಉಳಿಸಿಕೊಳ್ಳಲು ಭದ್ರತಾ ಪಡೆಯ ಮೇಲೆ ಎಷ್ಟೇ ನಿಯಂತ್ರಣ ಹೇರಿದರೂ
ಅಡ್ಡಿ ಇಲ್ಲ ಎಂಬ ಸಿದ್ಧಾಂತದ ತಳಪಾಯದ ಮೇಲೆ ದೇಶ ನಿಂತಿದೆಯೇನೋ ಎಂದು
ಅನಿಸದೆ ಇರಲಾರದು. ಆದರೆ ದಿನನಿತ್ಯ ಪತ್ರಿಕೆಗಳ ಮೇಲೆ ಕಣ್ಣಾಡಿಸಿದಾಗ ಒಂದು
ವಿಷಯವಂತೂ ಸ್ಪಷ್ಟವಾಗುತ್ತದೆ. ಭಯೋತ್ಪಾದಕರಿಗೆ ಬಲಿಯಾಗಿ ಅಥವಾ
ಅಡ್ಡಾದಿಡ್ಡಿ ಚಲಿಸುವ ಬಸ್ ಚಕ್ರಗಳ ಅಡಿ ಅದೆಷ್ಟೋ ಮಂದಿ ನಮ್ಮ ಕಣ್ಣೆದುರಿಗೇ
ಸಾವನ್ನಪ್ಪುತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಎಡ ಪಕ್ಷಗಳು ದಬ್ಬಾಳಿಕೆಗೆ
ಒಳಗಾದವರ ಪರವಾಗಿ ಮಾತನಾಡಬಹುದು. ಆದರೆ ಅಲ್ಲಿ ಬಹಳಷ್ಟು ಮಂದಿ
ಸಾವಿಗೀಡಾಗುವುದು ಖಾಸಗಿ ಬಸ್‌ಗಳು ರಸ್ತೆಯ ಮೇಲೆ ನಡೆಸುವ ಪೈಪೋಟಿಯಿಂದಾಗಿ
ಎಂಬುದು ಎಲ್ಲರಿಗೂ ತಿಳಿದ ಸತ್ಯ. ದೆಹಲಿ ಕೂಡ ಇದರಿಂದ ಹೊರತಾಗಿಲ್ಲ.
ಒಂದೆಡೆಯಿಂದ ಭಾರತ ಭಯೋತ್ಪಾದನೆಯನ್ನು
ಬುಡಸಮೇತ ಕಿತ್ತೊಗೆಯಲು ಸಮರ್ಥ ಕಾನೂನು ರೂಪಿಸಲು ಹಿಂಜರಿಯುತ್ತಿದ್ದರೆ,
ಮತ್ತೊಂದೆಡೆ ನಕ್ಸಲರು ಹಾಗೂ ಭಯೋತ್ಪಾದಕರಿಂದ ದೇಶ ರಕ್ಷಣೆ ಮಾಡುವ ಸೈನಿಕರು
ಭೀಕರವಾಗಿ ಹತ್ಯೆಯಾಗುತ್ತಿದ್ದರೂ ದಿವ್ಯಮೌನಕ್ಕೆ ಶರಣಾಗುತ್ತಿದೆ. ರಸ್ತೆ
ಅಪಘಾತಕ್ಕೆ ಕಾರಣರಾಗುವ ದುಷ್ಕರ್ಮಿಗಳಿಗೆ ಸುಲಭವಾಗಿ ಜಾಮೀನು ದೊರಕುವ
ಅವಕಾಶ ನೀಡಿ ಆ ಶಕ್ತಿಗಳು ಮರುದಿನ ಅದೇ ರಸ್ತೆಯಲ್ಲಿ ರಾಜಾರೋಷವಾಗಿ
ಅಲೆದಾಡುವಂತೆ ಮಾಡಿದೆ. ಬಹುಶಃ ನಾಗರಿಕ ಜಗತ್ತಿನಲ್ಲಿ ಬೇರೆಲ್ಲೂ ಬಸ್
ಅಪಘಾತ ಹಾಗೂ ಭಯೋತ್ಪಾದನೆಯಿಂದ ಇಷ್ಟೊಂದು ಮಂದಿ ಮೃತರಾಗುವುದಿಲ್ಲವೇನೋ?
ಖಾಸಗಿ ಲಾಭಕ್ಕಾಗಿ ಬೇರೆಲ್ಲೂ ಸಾರ್ವಜನಿಕ ಹಿತಾಸಕ್ತಿಯೊಂದಿಗೆ
ಇಷ್ಟರಮಟ್ಟಿಗೆ ರಾಜಿ ಮಾಡಿಕೊಂಡಿಲ್ಲವೇನೋ?
ಏರುತ್ತಿರುವ ಆರ್ಥಿಕತೆ, ಶಸ್ತ್ರಾಸ್ತ್ರ
ಸಂಗ್ರಹ ಅಥವಾ ಅಣು ಒಪ್ಪಂದದಲ್ಲಿನ ವಿಶೇಷ ಸ್ಥಾನಮಾನದಿಂದಾಗಿ ಪ್ರಬಲ
ರಾಷ್ಟ್ರಗಳ ಒಕ್ಕೂಟ ಸೇರಲು ಭಾರತ ಮುಂದಾಗಿರಬಹುದು. ಆದರೆ ತಮ್ಮ ಕರ್ತವ್ಯ
ನಿರ್ವಹಿಸುವ ಸೈನಿಕರನ್ನು ಕೋರ್ಟಿಗೆ ಅಲೆಸುವ, ಪ್ರತಿನಿತ್ಯ ಜನಸಾಮಾನ್ಯರ
ಸಾವು-ನೋವಿಗೆ ಸಾಕ್ಷಿಯಾಗುವ, ಮಾತೃಭೂಮಿಗಾಗಿ ಪ್ರಾಣದ ಹಂಗು ತೊರೆದು
ಹೋರಾಡುವವರಿಗೆ ಕನಿಷ್ಠ ಗೌರವವನ್ನೂ ತೋರದೆ ಉಲ್ಫಾ ಅಥವಾ ನಕ್ಸಲೈಟ್‌ಗಳಂತಹ
ಉಗ್ರರ ಪರವಾಗಿ ಮೆದು ಧೋರಣೆ ತೋರುವ ದೇಶವನ್ನು ನಾಗರಿಕ ಸಮಾಜ ಎನ್ನಲು ಹೇಗೆ
ತಾನೇ ಸಾಧ್ಯ? ಮೇರಾ ಭಾರತ್ ಮಹಾನ್?!
ಐಐಪಿಎಂ
'ಥಿಂಕ್ ಟ್ಯಾಂಕ್'
ಪಥಿಕೃತ್ ಪಾಯ್ನೆ
|