|
| ಪಾಲ್ ಕ್ರುಗ್ಮನ್ |
ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ |
ಮೆಕೇನ್,
ಈಗಿನ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರ
ಆರ್ಥಿಕ ನೀತಿಯನ್ನೇ ಮುಂದುವರೆಸಿಕೊಂಡು ಹೋಗುವುದಾಗಿ ಘೋಷಿಸಿದ್ದಾರೆ.
ಬುಷ್ ಆಡಳಿತದಲ್ಲಿ
ಆರ್ಥಿಕತೆ ಯಾವ ಸ್ಥಿತಿಗೆ ತಲುಪಿದೆ ಎಂದರೆ,
ಅಮೆರಿಕದ ಉದ್ಯೋಗಾವಕಾಶದ ಸೂಚ್ಯಂಕ ಕಳೆದ
60
ವರ್ಷಗಳಲ್ಲೇ ಕಂಡುಕೇಳರಿಯದ ರೀತಿ ಇಳಿಮುಖಗೊಂಡಿದೆ.
ಈ ಹಿಂದೆ ಮೊದಲನೇ ಜಾರ್ಜ್ ಬುಷ್ ಆಡಳಿತದಲ್ಲೂ
ಅಮೆರಿಕದ ಆರ್ಥಿಕತೆ ಇಷ್ಟೊಂದು ಅಧೋಗತಿಗೆ ಇಳಿದಿರಲಿಲ್ಲ.
ಆರ್ಥಿಕ ಏರಿಳಿತಗಳನ್ನು ಸಮರ್ಥವಾಗಿ
ನಿಭಾಯಿಸಲಾಗದ ಬುಷ್ ಅವರ ವಿರುದ್ಧ ಮತ್ತು ಶ್ವೇತಭವನದ ವಿರುದ್ಧ
ಜನಸಾಮಾನ್ಯರು ಕಿಡಿಕಾರುತ್ತಿದ್ದಾರೆ.
ಈ ನಡುವೆ ಆಪ್ತವಲಯದವರು ಹೇಳುವಂತೆ ಮೆಕೇನ್
ಅವರು ಮಾಜಿ ಸೆನೆಟರ್ ಫಿಲ್ ಗ್ರಾಮ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.
ಮೆಕೇನ್ ಚುನಾವಣಾ ಪ್ರಚಾರದ
ಉಪಮುಖ್ಯಸ್ಥರಾಗಿದ್ದ ಫಿಲ್ ಅಮೆರಿಕವನ್ನು
'ಅಳುಮುಂಜಿಗಳ
ರಾಷ್ಟ್ರ'
ಎಂದು ಜರೆದದ್ದಲ್ಲದೇ,
ಪ್ರಸಕ್ತ ಆರ್ಥಿಕ ಬಿಕ್ಕಟ್ಟು ಕೇವಲ
'ಮಾನಸಿಕ
ಸಮಸ್ಯೆ'
ಅಷ್ಟೇ ಎಂಬ ಹೇಳಿಕೆ ನೀಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಆದರೂ ಅವರ ಖಜಾನೆ ಕಾರ್ಯದರ್ಶಿ ಸ್ಥಾನಕ್ಕೆ
ಫಿಲ್ ಅವರ ಹೆಸರೇ ಮುಂಚೂಣಿಯಲ್ಲಿದೆ.
ಹೀಗಾಗಿ ವಿಫಲ ಆರ್ಥಿಕ ನೀತಿಗಳನ್ನು
ಬೆಂಬಲಿಸುವ;
ಅಮೆರಿಕದ ಜನಸಾಮಾನ್ಯರು,
ಶ್ರಮಜೀವಿಗಳ ಬದುಕನ್ನೇ ಅರಿಯದ ವ್ಯಕ್ತಿಗಳನ್ನು
ನೆಚ್ಚಿಕೊಳ್ಳುವುದರೊಂದಿಗೆ ಮೆಕೇನ್ ತಮ್ಮ ಗುರಿ ಸಾಧನೆಯನ್ನು ಸ್ವತಃ
ಅಸಾಧ್ಯಗೊಳಿಸಿಕೊಳ್ಳುತ್ತಿದ್ದಾರೆ.
ಆದರೆ ಮತಸಮೀಕ್ಷೆಗಳ ಪ್ರಕಾರ ಅಮೆರಿಕದ ಜನತೆ,
ಆರ್ಥಿಕತೆಯನ್ನು ನಿಭಾಯಿಸುವ ವಿಚಾರದಲ್ಲಿ,
ರಿಪಬ್ಲಿಕನ್ ಪಕ್ಷಕ್ಕಿಂತ ಡೆಮಾಕ್ರಟ್ ಪಕ್ಷದ
ಮೇಲೆ ಹೆಚ್ಚು ಭರವಸೆ ಇಟ್ಟಿದ್ದಾರೆ.
ಈ ವಿಚಾರದಲ್ಲಿ ಡೆಮಾಕ್ರಟ್‌ನ ಬಾರಕ್ ಒಬಾಮ
ರಿಪಬ್ಲಿಕ್‌ನ ಮೆಕೇನ್ ಅವರಿಗಿಂತ ಮುನ್ನಡೆ ಸಾಧಿಸಿದ್ದಾರೆ.
'ಟೈಮ್'
ನಿಯತಕಾಲಿಕೆಯ ಸಮೀಕ್ಷೆಯಲ್ಲಿ ಮೆಕೇನ್ ತಮ್ಮ ಪ್ರತಿಸ್ಪರ್ಧಿ ಬಾರಕ್ ಒಬಾಮ
ಅವರಿಗಿಂತ ಒಂದು ಹೆಜ್ಜೆ ಹಿಂದಿದ್ದಾರೆ.
ಆದರೆ ಅತ್ತ ಬಾರಕ್ ಒಬಾಮ ಆರ್ಥಿಕ ನೀತಿಗಳ
ವಿಚಾರದಲ್ಲಿ ಒಂದು ನಿರ್ಣಾಯಕ ಘಟ್ಟ ತಲುಪಲು ವಿಫಲವಾಗಿದ್ದರಿಂದ ಅವರಿಗೆ
ಸಂಪೂರ್ಣ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ.
ಒಬಾಮ ಅವರ ಚುನಾವಣಾ ಪ್ರಚಾರ ಏಕೆ ಆರ್ಥಿಕ
ವಿಚಾರಗಳ ಕುರಿತು ಗಮನ ಹರಿಸುತ್ತಿಲ್ಲ?
ಸಮುದ್ರ ತೀರ ಪ್ರದೇಶದಲ್ಲಿ ತೈಲ
ಶೋಧಿಸುವಂತಹ ಪ್ರಮಾದವೆಸಗಲು ರಿಪಬ್ಲಿಕನ್ಸ್ ಮುಂದಾಗಿದ್ದು ಇದಕ್ಕೆ ಕಾರಣ
ಅಲ್ಲ.
'ಇಂಧನ ಬೆಲೆ
ಇಳಿಕೆ'
ಎಂಬ ನಕಲಿ ಘೋಷಣೆ ಅಮೆರಿಕದ ಜನತೆಯ ಹಾದಿ ತಪ್ಪಿಸಿದೆ ಎಂಬುದು
ಮೇಲ್ನೋಟಕ್ಕೆ ಕಂಡು ಬರುತ್ತದೆ.
ನಾನಾಗಲೇ ಹೇಳಿದಂತೆ ಡೆಮಾಕ್ರಟ್ಸ್ ಆರ್ಥಿಕ
ವಿಚಾರಗಳಲ್ಲಿ ಸ್ವಲ್ಪ ಮಟ್ಟಿಗೆ ಕಾಳಜಿ ಉಳಿಸಿಕೊಂಡಿದ್ದಾರೆ.
ಆರ್ಥಿಕ ನೀತಿಗಳಿಗೆ ಕುರಿತಂತೆ ಒಬಾಮ
ನಿರ್ದಿಷ್ಟ ಯೋಜನೆಗಳನ್ನು ಹೊಂದಿಲ್ಲ ಎಂಬ ಭಾನುವಾರದ
'...ಟೈಮ್ಸ್'
ಪತ್ರಿಕೆಯ ವಾದ ಹುರುಳಿಲ್ಲದ್ದು.
ಒಬಾಮ ಅವರ ವೆಬ್‌ಸೈಟ್‌ನಲ್ಲಿ ಒಮ್ಮೆ ಇಣುಕಿ
ನೋಡಿದರೆ ಆರ್ಥಿಕ ನೀತಿಗಳನ್ನು ಕುರಿತ ಸಾಕಷ್ಟು ಮಾಹಿತಿ ನಿಮಗೆ
ದೊರೆಯುತ್ತದೆ.
ನನ್ನನ್ನು ಕೇಳಿದರೆ,
ಆತನ ಪ್ರಚಾರದ ಜಾಹೀರಾತುಗಳು ಆರ್ಥಿಕ
ನೀತಿಗಳಿಗೆ ಸಂಬಂಧಪಟ್ಟಂತೆ ತುಸು ಹೆಚ್ಚೇ ವಿಚಾರಗಳನ್ನು ಒಳಗೊಂಡಿವೆ.
ಕೊರತೆ ಇರುವುದು ನಿರ್ದಿಷ್ಟತೆಯಲ್ಲಿ ಅಲ್ಲ;
ಉತ್ಸಾಹದಲ್ಲಿ.
ಆರ್ಥಿಕತೆ ವಿಚಾರಕ್ಕೆ ಸಂಬಂಧಪಟ್ಟಂತೆ ಒಬಾಮ
ಅವರ ಪ್ರಚಾರದಲ್ಲಿ ತುಸು ನಿರುತ್ಸಾಹ ಕಂಡು ಬರುತ್ತ್ತಿದೆ.
ಈ ತಿಂಗಳ ಮೊದಲು ಒಬಾಮ ಸೇಂಟ್ ಪೀಟರ್‍ಸ್‌ಬರ್ಗ್‌ನಲ್ಲಿ
ಆರ್ಥಿಕತೆಯ ಕುರಿತು ಮಾಡಿದ ಭಾಷಣದ ಸತ್ವಹೀನತೆಗೆ ನಿಜಕ್ಕೂ ದಂಗಾದೆ.
ಅದಕ್ಕೆ ಆರ್ಥಿಕ ವಿಚಾರಗಳನ್ನೇ
ಗುರಿಯಾಗಿಟ್ಟುಕೊಂಡಿದ್ದ ಮೊಟ್ಟಮೊದಲ ಭಾಷಣ ಎಂಬ ಹೆಗ್ಗಳಿಕೆ ಬೇರೆ ಇತ್ತು.
ಅವರು ನಿಜಕ್ಕೂ ಒಳ್ಳೆಯ ಮಾತುಗಾರರು
ಎಂಬುದರಲ್ಲಿ ಸಂಶಯವಿಲ್ಲ.
ಆದರೆ ಅಂದು ಮಾತ್ರ ಅಲ್ಲಿದ್ದ ಯಾರಿಗೂ ಯಾವ
ರೀತಿಯಿಂದಲೂ ಅರ್ಥವಾಗದ ಅಂಕಿ-ಅಂಶಗಳನ್ನು
ಪಠಿಸತೊಡಗಿದ್ದರು.
ರಾಜಕೀಯ ಅಂಶ ಪ್ರಸ್ತಾಪಿಸುವುದನ್ನು
ತಪ್ಪಿಸುವುದಕ್ಕೋಸ್ಕರ ಅವರು ತಮ್ಮ ವಿಚಾರಗಳನ್ನೇ ಕಲಸುಮೇಲೋಗರ ಮಾಡಿದ್ದು
ಪರಿಸ್ಥಿತಿಯನ್ನು ಇನ್ನಷ್ಟು ಅಸಹನೀಯವಾಗಿಸಿತ್ತು.
ಅಲ್ಲಿ ಅವರು ಜನರಿಗೆ ಆರ್ಥಿಕ ಅಂಶಗಳನ್ನು
ವಿವರಿಸುತ್ತಾ,
'1990ರ
ದಶಕದಲ್ಲಿ ನಿಮ್ಮ ಲಾಭಾಂಶ 6,000
ಡಾಲರ್‌ನಷ್ಟು ಹೆಚ್ಚಿತ್ತು ನಂತರ ಕಳೆದ ಕೆಲವು ವರ್ಷಗಳಲ್ಲಿ ಅದು
1,000
ಡಾಲರ್‌ನ್ನು ತಲುಪಿದೆ'
ಎಂದು ಹೇಳಿದರು.
ಇದು ಅವರು ತಿಳಿದುಕೊಂಡಂತಿಲ್ಲ.
ಲಾಭಾಂಶ
6,000
ಡಾಲರ್ ಹಂತ ತಲುಪಿದ್ದು
'1990'ರ ದಶಕದಲ್ಲ್ಲಿ ಅಲ್ಲ,
ಬದಲಿಗೆ ಮೊದಲ ಬುಷ್ ನಂತರ ಬಂದ ಕ್ಲಿಂಟನ್ ಅವರ
ಅಧಿಕಾರಾವಧಿಯಲ್ಲಿ.
ಅದು 1,000
ಡಾಲರ್ ಇಳಿಕೆ ಕಂಡು ಬಂದಿದ್ದು
'ಇತ್ತೀಚೆಗಿನ
ವರ್ಷ'ಗಳಲ್ಲಿ
ಅಲ್ಲ ಬದಲಿಗೆ ಜಾರ್ಜ್ ಬುಷ್ ಅವರ ಅಧಿಕಾರಾವಧಿಯಲ್ಲಿ,
ಅಂದರೆ
2005ರ
ಸ್ವಲ್ಪ ಮೊದಲು.
ಆದರೆ ಒಬಾಮ ಅವರ ಪ್ರತಿನಿಧಿಗಳು ಅವರ
ಸ್ನೇಹಿತರು ಪ್ರಾಥಮಿಕ ಅಂಶಗಳನ್ನು ನಿರ್ಲಕ್ಷಿಸುತ್ತಿದ್ದಾರೆ.
ಇತ್ತೀಚೆಗಿನ
'ವಾಲ್‌ಸ್ಟ್ರೀಟ್'
ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಒಬಾಮ ಅವರ ಇಬ್ಬರು ಸಲಹೆಗಾರರು
ಮತ್ತೊಂದಿಷ್ಟು ಅಂಕಿ-ಅಂಶಗಳ
ಪ್ರವಾಹ ಹರಿಯಬಿಟ್ಟಿದ್ದಾರೆ.
ಅವುಗಳ ಸಾರಾಂಶವಿಷ್ಟೇ,
ಮೆಕೇನ್ ಅವರ ನೀತಿಗಿಂತ ಒಬಾಮ ಅವರ ಆರ್ಥಿಕ
ನೀತಿಯಲ್ಲಿ ಅಮೆರಿಕದ ಜನತೆಯ ಮೇಲೆ ತೆರಿಗೆಯ ಭಾರ ಕಡಿಮೆ.
ಆರ್ಥಿಕ ವಿಚಾರಗಳಿಗೆ ಸಂಬಂಧಪಟ್ಟಂತೆ ತಮ್ಮ
ಮಹತ್ವಾಕಾಂಕ್ಷೆಯನ್ನು ಜನರಿಗೆ ತಲುಪಿಸುವಲ್ಲಿ ಯಾವುದೇ ತೊಂದರೆ
ಅನುಭವಿಸದೆ ಶ್ವೇತಭವನ ಹೊಕ್ಕ ಈ ಹಿಂದಿನ ಡೆಮಾಕ್ರಟ್ ಬಿಲ್ ಕ್ಲಿಂಟನ್
ಅವರ ಪ್ರಚಾರ ವೈಖರಿಗಿಂತ ಒಬಾಮ ಪ್ರಚಾರ ಭಿನ್ನವಾಗಿದೆ.
ಬಿಲ್ ಕ್ಲಿಂಟನ್
1992ರಲ್ಲಿ
ಪ್ರಮಾಣವಚನ ಸ್ವೀಕರಿಸಿದಾಗ ಅಮೆರಿಕದ ಆರ್ಥಿಕ ಪರಿಸ್ಥಿತಿ ಇಂದಿಗಿಂತ
ಭಿನ್ನವಾಗಿರಲಿಲ್ಲ.
ಆಗ ತಮ್ಮ ಪ್ರತಿಸ್ಪರ್ಧಿಯನ್ನು ಟೀಕಿಸುತ್ತಾ ಕ್ಲಿಂಟನ್,
'ದುರ್ಬಲ
ಆರ್ಥಿಕ ನೀತಿಗೆ ಜೋತು ಬಿದ್ದಿದ್ದೇ ಅವರ ಸೋಲಿಗೆ ಕಾರಣ'
ಎಂದಿದ್ದರು.
ಸೇಂಟ್ ಪೀಟರ್‍ಸ್‌ಬರ್ಗ್‌ನಲ್ಲಿ ಸಂಕ್ಷಿಪ್ತವಾಗಿ
ಮಾತನಾಡುತ್ತಾ ಒಬಾಮ,
ಕೆಲವು 'ಬೇಜವಾಬ್ದಾರಿ
ವ್ಯಕ್ತಿ'ಗಳು
ವ್ಯವಸ್ಥೆಯನ್ನು ಮನಬಂದಂತೆ ಆಡಿಸುತ್ತಿದ್ದಾರೆ.
ಆ ಕಾರಣದಿಂದಲೇ ನಾವು ಈ
'ಹೌಸಿಂಗ್'ನಂತಹ
ಸಂಕಷ್ಟವನ್ನು ಎದುರಿಸಬೇಕಾಗಿದೆ ಎಂದು ಹೇಳಿದ್ದರು.
ಅವರೇನು ಹೇಳುತ್ತಿದ್ದಾರೆ ಎಂದು ನನಗೆ
ಅರ್ಥವಾಗುತ್ತದೆ.
ಆದರೆ ಎಷ್ಟು ಜನ ಮತದಾರರಿಗೆ ಅದು ಅರ್ಥವಾಗುತ್ತದೆ?
'ಯಾರು
ನಿಯಮಗಳನ್ನು,
ಕಾನೂನನ್ನು ಪಾಲಿಸುತ್ತಾರೋ ಅವರಿಗೆ ಶಿಕ್ಷೆ;
ಯಾರು ಅಡ್ಡದಾರಿಯ ಮೂಲಕ ಪ್ರಯತ್ನಿಸುತ್ತಾರೋ
ಅವರಿಗೆ ಉಡುಗೊರೆ'
ಎಂದು ಕ್ಲಿಂಟನ್ ವ್ಯಂಗ್ಯದಿಂದ ಹೇಳಿದ್ದರು.
ಒಬಾಮಾ ಅವರ ಪ್ರಚಾರ ಇಂತಹ ಚಮತ್ಕಾರಿ,
ಜನಪ್ರಿಯ ಮಾತುಗಾರಿಕೆ ಇಲ್ಲದೇ ಸೊರಗಿದೆ.
ಒಬಾಮ ಅವರ ನಿಜವಾದ ಮಾತುಗಾರಿಕೆ ಇನ್ನೂ
ಹೊರ ಬರಬೇಕಿದೆ.
2000ದಲ್ಲಿ
ಅಲ್‌ಗೋರ್ ಜನಪ್ರಿಯತೆಯ ತುತ್ತತುದಿಯಲ್ಲಿದ್ದರು;
ಅವರ ಪ್ರಚಾರ ಭಾಷಣಕ್ಕೆ ಜನರು ಕಿಕ್ಕಿರಿದು
ಸೇರುತ್ತಿದ್ದರು.
ಇಂಥದೇ ಜನಪ್ರಿಯತೆ ಒಬಾಮಗೆ ಜಯ ತಂದುಕೊಡಬಲ್ಲದು.
ಆದರೆ ಅದು ಒಬಾಮ ಅವರನ್ನು ಅವಲಂಬಿಸಿದೆ.
ಆರ್ಥಿಕ ನೀತಿಗಳ ವಿಚಾರದಲ್ಲಿ ಈವರೆಗೆ ಅವರು
ಬೆಳೆಸಿಕೊಂಡು ಬಂದ ಉದಾಸೀನತೆಯನ್ನು ಕೈಬಿಡದಿದ್ದಲ್ಲಿ ಅದೇ ಅವರ
ಶ್ವೇತಭವನದ ಹಾದಿಗೆ ಮುಳ್ಳಾಗುವ ಎಲ್ಲಾ ಸಾಧ್ಯತೆಗಳೂ ಇವೆ.
ಟಿಎಸ್‌ಐ
|