ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೂರದೂರಿಂದ
 
 

ನೇಪಾಳ: ವಿದೇಶಾಂಗ ನೀತಿ

ಭಾರತದೊಂದಿಗಿನ ಮೈತ್ರಿ ಮುಗಿಯಿತೇ?

ಭಾರತದ ಪ್ರಾಮುಖ್ಯ ಅರಿಯುವಲ್ಲಿ ನೇಪಾಳದ ಮಾವೋವಾದಿ ಸರ್ಕಾರ ಎಡವಿದರೆ ಅಪಾಯ ತಪ್ಪಿದ್ದಲ್ಲ

ಅದು ನೇಪಾಳ ಕಂಡ ಮೊದಲ ಪ್ರಧಾನ ಮಂತ್ರಿಯ ಪ್ರಮಾಣ ವಚನ ಸ್ವೀಕಾರವೇನೂ ಆಗಿರಲಿಲ್ಲ. ಆದರೆ ಪ್ರಚಂಡ ಎಂಬ ಹೆಸರಿನಿಂದಲೇ ಖ್ಯಾತರಾದ ಪುಷ್ಪ ಕಮಲ್ ದಹಲ್ ಅವರ ಪ್ರಮಾಣ ವಚನ ಸ್ವೀಕಾರವನ್ನು ವೀಕ್ಷಿಸಿದವರಲ್ಲಿ ನೇಪಾಳದ ರಾಜಕಾರಣ ಶಾಶ್ವತವಾಗಿ ಬದಲಾಗಲಿದೆ ಎಂಬ ವಿಶ್ವಾಸ ಹುಟ್ಟಿದೆ. ನೇಪಾಳದ ಸಾಂಪ್ರದಾಯಿಕ ವ್ಯವಸ್ಥೆಯನ್ನೆಲ್ಲಾ ಮುರಿದು ಮುನ್ನುಗ್ಗುತ್ತಿರುವ ಪ್ರಚಂಡ, ತಮ್ಮ ಪ್ರಮಾಣ ವಚನ ಸ್ವೀಕಾರಕ್ಕೆ ನೇಪಾಳದ ರಾಷ್ಟ್ರೀಯ ಪೋಷಾಕು'ದೌರಾ ಸರುವಾಲ್' ಬದಲಿಗೆ'ಡಬಲ್ ಬ್ರೆಸ್ಟೆಡ್ ಸೂಟ್' ಧರಿಸಿ ಹಲವರ ಹುಬ್ಬೇರಿಸಿದ್ದರು. ಅದೂ ಉಪರಾಷ್ಟ್ರಪತಿ ಸಂಪ್ರದಾಯ ಮುರಿದು ನೇಪಾಳಿ ಭಾಷೆಯ ಬದಲಿಗೆ ಹಿಂದಿ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕಾರಣಕ್ಕೆ ಕ್ಷಮಾಪಣೆ ಕೇಳಿ ವಾರ ಕಳೆಯುವ ಮೊದಲೇ ಪ್ರಚಂಡ ತಮ್ಮ ವರಸೆ ಮೆರೆದಿದ್ದಾರೆ! ಸಂಪ್ರದಾಯದಂತೆ 'ಸತ್ಯದ ಹೆಸರಿನಲ್ಲಿ' ಅಥವಾ'ದೇವರ ಹೆಸರಿನಲ್ಲಿ' ಪ್ರಮಾಣ ವಚನ ಸ್ವೀಕರಿಸದೆ ಜನರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ, ರೂಢಿಗತ ಭಾರತದ ಪ್ರವಾಸಕ್ಕೆ ಸಜ್ಜಾಗುವ ಬದಲು ಪ್ರಚಂಡ ಚೀನಾದತ್ತ ಮುಖ ಮಾಡಿದಾಗ ನೇಪಾಳದ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಮ್ಮ'ಸೌತ್ ಬ್ಲಾಕ್' ಕಚೇರಿಯಲ್ಲಿ ಕುಳಿತು ಕೈ- ಕೈ ಹಿಸುಕಿಕೊಂಡರು. ನಿಜ, ನೇಪಾಳ ಹಿಂದಿನಂತಿರಲು ಸಾಧ್ಯವೇ ಇಲ್ಲ.

ನಾಲ್ಕು ತಿಂಗಳ ಕಾಲದ ರಾಜಕೀಯ ಗೊಂದಲಗಳ ನಂತರ ದಶಕಕ್ಕಿಂತಲೂ ಹೆಚ್ಚು ಕಾಲ ಮಾವೋವಾದಿ ನಾಯಕನಾಗಿ ಸೈ ಎನಿಸಿಕೊಂಡಿದ್ದ ಪ್ರಚಂಡ ಕೊನೆಗೂ ನೇಪಾಳದ ಪ್ರಧಾನಿ ಗದ್ದುಗೆಗೇರಿದ್ದಾರೆ. 601 ಸ್ಥಾನಬಲದ ಬಲಿಷ್ಠ ಸಂಸತ್ತಿನಲ್ಲಿ ಚಲಾವಣೆಯಾದ 557 ಮತಗಳ ಪೈಕಿ 464 ಮತಗಳಿಸುವ ಮೂಲಕ'ಪ್ರಚಂಡ' ಜಯಭೇರಿ ಬಾರಿಸಿದರು. 'ನೇಪಾಲ್ ಮಜ್ದೂರ್ ಕಿಸಾನ್ ಪಾರ್ಟಿ', 'ರಾಷ್ಟ್ರೀಯ ಜನ ಶಕ್ತಿ' ಮತ್ತು'ರಾಷ್ಟ್ರೀಯ ಜನಮೋರ್ಚಾ' ಎಂಬ ಮೂರು ರಾಜಕೀಯ ಪಕ್ಷಗಳು ಮತದಾನದಿಂದ ದೂರ ಉಳಿದಿದ್ದವು. ಪ್ರಚಂಡ ಅವರಿಗೆ ನೇಪಾಳದ ಎರಡು ಪ್ರಮುಖ ರಾಜಕೀಯ ಪಕ್ಷಗಳಾದ'ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಲ್ ಯೂನಿಫೈಡ್ ಮಾರ್ಕ್ಸ್‌ಸಿಸ್ಟ್ ಲೆನಿನಿಸ್ಟ್ (ಸಿಪಿಎನ್- ಯುಎಂಎಲ್)' ಹಾಗೂ'ಮಧೇಶಿ ಜನಾಧಿಕಾರ್ ಫೋರಂ(ಎಂಜೆಎಫ್)' ಮತ್ತು ಇತರೆ ಸಣ್ಣ ಪುಟ್ಟ ಕೆಲವು ಪಕ್ಷಗಳ ಬೆಂಬಲ ಬೆನ್ನಿಗಿತ್ತು. ಆದರೆ ಅವರ ಪ್ರಕಾರ 'ಈ ಗೆಲುವು ಕೇವಲ ಆರಂಭ' ಅಷ್ಟೇ! ಅಲ್ಲಿನ ಬೆಳವಣಿಗೆಗಳ ಬಗ್ಗೆ ಟಿಎಸ್‌ಐನೊಂದಿಗೆ ಮಾತನಾಡಿದ ನೇಪಾಳದ ಖ್ಯಾತ ರಾಜಕೀಯ ವಿಶ್ಲೇಷಕ ಸಿ.ಕೆ. ಲಾಲ್, ಪರಿಸ್ಥಿತಿ ಇನ್ನೂ ತಹಬಂದಿಗೆ ಬಂದಿಲ್ಲ. ರಾಷ್ಟ್ರದಲ್ಲಿ ರಾಜಕೀಯ ಸಾಮರಸ್ಯ ಇಲ್ಲದ ಕಾರಣ ಪ್ರಸಕ್ತ ಬೆಳವಣಿಗೆಗಳೆಲ್ಲವೂ ಗೊಂದಲಮಯವಾಗಿವೆ. ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕೂಡಾ ನಿರ್ಧಾರವಾಗಿಲ್ಲ ಎಂದು ಅಭಿಪ್ರಾಯ ಪಡುತ್ತಾರೆ.

239 ವರ್ಷದ ಹಿಂದೂ ಚಕ್ರಾಧಿಪತ್ಯಕ್ಕೆ ಇತಿಶ್ರೀ ಹಾಡಿ ನೇಪಾಳವನ್ನು ಸಂಯುಕ್ತ ಗಣರಾಜ್ಯ ಎಂದು ಘೋಷಿಸುವ ಮೂಲಕ ನೇಪಾಳದ ಮಾವೋವಾದಿಗಳು ತಮ್ಮ ಪ್ರಥಮ ಗುರಿ ಸಾಧಿಸಿದ್ದಾರೆ. ಆದರೆ ಅಷ್ಟಕ್ಕೇ ನಿಲ್ಲದ ಇತರೆ ಹಲವು ವಿಷಯಗಳ ಕಡೆಗೂ ಗಮನ ಕೇಂದ್ರೀಕರಿಸಿದ್ದಾರೆ. ಅವುಗಳೆಲ್ಲದರಲ್ಲಿ ಪ್ರಮುಖವಾದದ್ದು ಭದ್ರತಾ ಇಲಾಖೆಯ ಮೇಲಿನ ಸಂಪೂರ್ಣ ಹಿಡಿತ. ನಂತರ 19,000 ಮಾಜಿ ಮಾವೋವಾದಿ ಗೆರಿಲ್ಲಾಗಳ ಭವಿಷ್ಯ. ಅಲ್ಲದೆ ಸಂಪ್ರದಾಯವಾದಿಗಳ ವಿರೋಧ ಕಟ್ಟಿಕೊಳ್ಳಬೇಕಾದಂತಹ ಹಲವು ಆರ್ಥಿಕ ಬದಲಾವಣೆಗಳೂ ಈ ಮಾವೋವಾದಿ ಸರ್ಕಾರದ ಕಾರ್ಯಸೂಚಿಯಲ್ಲಿದೆ. ಪೀಪಲ್ಸ್ ಲಿಬರೇಷನ್ ಸೇನೆಯನ್ನು ನೇಪಾಳ ಸೇನೆಯಲ್ಲಿ ವಿಲೀನಗೊಳಿಸುವಾಗ ಹಲವು ವಾದ- ವಿವಾದಗಳಿಗೆ ಗ್ರಾಸವಾಗಬಹುದು. ಆರ್ಥಿಕ ವಲಯದಲ್ಲೂ ಭಾರೀ ಬದಲಾವಣೆಗಳನ್ನು ನಿರೀಕ್ಷಿಸಬಹುದು ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ ಕಾಠ್ಮಂಡು ಪೋಸ್ಟ್‌ನ ಖ್ಯಾತ ನೇಪಾಳಿ ರಾಜಕೀಯ ವಿಶ್ಲೇಷಕ ಅಮಿತ್ ಧಕಾಲ್.

ಈ ಎಲ್ಲಾ ಬದಲಾವಣೆಗಳ ಬಿಸಿತಟ್ಟುವುದು ಭಾರತಕ್ಕೆ ಎಂಬುದು ಗಮನಾರ್ಹ. ಭಾರತ ನೇಪಾಳದ ಕೆಲವು ಮಾಜಿ ಬಂಡಾಯಗಾರರೊಂದಿಗೆ ಸಂಬಂಧ ಕುದುರಿಸಿ ಇನ್ನೇನು ಸಂಬಂಧ ಸುಧಾರಣೆಯ ಹೊಸ ಮಾರ್ಗಗಳು ತೆರೆದುಕೊಂಡವು ಎನ್ನುವಷ್ಟರಲ್ಲೇ ಅವರಿಗಿರುವ ಚೀನಾದ ನಂಟು ಅಡ್ಡಗಾಲಾಗಿ ಪರಿಣಮಿಸಿದೆ. ನೆರೆ ರಾಷ್ಟ್ರಗಳೊಂದಿಗಿನ ತನ್ನ ಸಂಬಂಧದಲ್ಲಿ ನೇಪಾಳ ಸಮತೋಲಿತ ನಿಲುವು ತೆಗೆದುಕೊಳ್ಳಲಿದೆ ಎಂದು ಪ್ರಚಂಡ ಹಿಂದೆಯೇ ಹೇಳಿದ್ದರು. ಅದೇ ಅಲ್ಲದೆ 1950ರ ಭಾರತ-ನೇಪಾಳ ಸೌಹಾರ್ದ ಒಡಂಬಡಿಕೆಗೆ ತಮ್ಮ ವಿರೋಧವನ್ನೂ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕೆಲವು ವಾಣಿಜ್ಯ ಒಪ್ಪಂದಗಳೂ ಕೆಲವೇ ದಿನಗಳಲ್ಲಿ ಮುರಿದು ಬೀಳುವ ಸಾಧ್ಯತೆಗಳಿವೆ. ಇತ್ತೀಚೆಗಿನ ಬದಲಾವಣೆಗಳು ನೇಪಾಳದ ಮೇಲಿನ ಚೀನಾ ಪ್ರಭಾವಕ್ಕೆ ಹಿಡಿದ ಕನ್ನಡಿ. ಎರಡೂ ರಾಷ್ಟ್ರಗಳೂ ಅದಾಗಲೇ ಭಾರೀ ಆರ್ಥಿಕ ಸಹಕಾರದ ಬಗ್ಗೆ ಮಾತುಕತೆಗಳಿಗೆ ಚಾಲನೆ ನೀಡಿವೆ. ಹತ್ತು ಹೆದ್ದಾರಿಗಳು ಚೀನಾ ಹಾಗೂ ನೇಪಾಳವನ್ನು ಜೋಡಿಸುವ ಮೂಲಕ ಎರಡು ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ನೇಪಾಳ ಹಾಗೂ ಚೀನಾದ ಗಡಿಯಲ್ಲಿರುವ ಲ್ಹಾಸಾದಿಂದ ಖಾಸಾವರೆಗೆ ಐದು ವರ್ಷಗಳೊಳಗೆ ರೈಲ್ವೇ ಮಾರ್ಗ ನಿರ್ಮಿಸಲಾಗುವುದು ಎಂಬ ಸುದ್ದಿ ಭಾರತಕ್ಕೆ ಆಘಾತಕಾರಿಯಾಗಿ ಪರಿಣಮಿಸಿದೆ. ಅನುಜ್ ಮಿಶ್ರಾ ಮುಂತಾದ

ವಿಶ್ಲೇಷಕರ ಪ್ರಕಾರ ಭಾರತ ಅನಗತ್ಯವಾಗಿ ಭಯಬೀಳುತ್ತಿದೆ. ಭಾರತ ಭಯಪಡುವಂಥ ಯಾವುದೇ ಅವಶ್ಯಕತೆಯೂ ಇಲ್ಲ. ಮಾವೋವಾದಿಗಳ ಹೋರಾಟಕ್ಕೆ ಭಾರತದಲ್ಲಿರುವುದು ಸೀಮಿತ ಅವಕಾಶ ಮಾತ್ರ. ಅದೂ ಅಲ್ಲದೆ ಭಾರತ ಆ ಪ್ರದೇಶದಲ್ಲಿ ಅಸಾಮಾನ್ಯವಾದ ಆರ್ಥಿಕ ಹಿಡಿತ ಹೊಂದಿದೆ. ಮಾವೋವಾದಿಗಳು ಅದನ್ನು ಕಡೆಗಣಿಸಿ ಮುನ್ನಡೆದರೆ

ಅವರಿಗೇ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಅನುಜ್ ಮಿಶ್ರಾ. ಏನೇ ಆಗಲಿ ಚೀನಾದ ಕಾರ್ಯತಂತ್ರಗಳನ್ನು ನೋಡುತ್ತಾ ಕೈಕಟ್ಟಿ ಕೂರುವಷ್ಟು ಸಮಯ ಈಗ ಭಾರತದ ಬಳಿ ಇಲ್ಲ. ಪರಿಸ್ಥಿತಿ ಬದಲಾಗಿದೆ. ಕಟು ವಾಸ್ತವ ಎದುರಿಗೇ ಇದೆ. ಎಷ್ಟು ಬೇಗ ಭಾರತ ಪರಿಸ್ಥಿತಿಯನ್ನು ಅರಿತುಕೊಳ್ಳುತ್ತದೆ ಎಂಬುದರಲ್ಲಿದೆ ಯಶಸ್ಸಿನ ಗುಟ್ಟು.

ಟಿಎಸ್‌ಐ

ಮಾಯಾಂಕ್ ಸಿಂಗ್ & ಸೌರಭ್ ಕುಮಾರ್ ಶಾಹಿ

ಮಾಧ್ಯಮ: ತಾರತಮ್ಯ

ಚೀನಾ ವಿರುದ್ಧ ಪಾಶ್ಚಾತ್ಯ ದಾಳಿ

'ಇತರ ರಾಷ್ಟ್ರಗಳ ಉದಯ' ಪಾಶ್ಚಾತ್ಯ ರಾಷ್ಟ್ರಗಳಿಗೆ ನುಂಗಲಾರದ ತುತ್ತು

Farpavilion- The Sunday Indian- Kannada

ಲೇಖಕ ಫರೀದ್ ಝಕರಿಯಾ ಅವರು ತನ್ನ ಪ್ರಸಿದ್ಧ 'ದಿ ಪೋಸ್ಟ್ ಅಮೆರಿಕನ್ ವರ್ಲ್ಡ್' ಪುಸ್ತಕದಲ್ಲಿ'ಇತರ ರಾಷ್ಟ್ರಗಳ ಉದಯ'ದ ಬಗ್ಗೆ ಪ್ರಸ್ತಾಪಿಸಿದ್ದಾರೆ.ಕಳೆದ ಐನೂರು ವರ್ಷಗಳಲ್ಲಿ ಜಾಗತಿಕ ಬದಲಾವಣೆಗೆ ಕಾರಣವಾದ ಪ್ರಮುಖ ಮೂರು ಅಂಶಗಳ ಬಗ್ಗೆ ಅದರಲ್ಲಿ ಚರ್ಚಿಸಿದ್ದಾರೆ.ಮೊದಲನೆಯದು 'ಪಾಶ್ಚಾತ್ಯ ರಾಷ್ಟ್ರಗಳ ಉದಯ'; ಎರಡನೆಯದಾಗಿ'ಅಮೆರಿಕದ ಉದಯ' ಮತ್ತು ಮೂರನೆಯದಾಗಿ 'ಇತರ ರಾಷ್ಟ್ರಗಳ ಉದಯ'. ಜಗತ್ತಿನ ಭವಿಷ್ಯದ ದೃಷ್ಟಿಯಿಂದ 'ಇತರ ರಾಷ್ಟ್ರಗಳ ಉದಯ'ವನ್ನು ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಸ್ವಾಗತಿಸಬೇಕು ಎಂದು ಝಕರಿಯಾ ಸಲಹೆ ಮಾಡುತ್ತಾರೆ. ಆದರೆ ವಾಸ್ತವ ಮಾತ್ರ ಬೇರೆಯದೇ ಆಗಿದೆ. ಒಲಿಂಪಿಕ್ ಕ್ರೀಡಾಕೂಟದ ಸಂದರ್ಭದಲ್ಲಿ ಪಾಶ್ಚಾತ್ಯ ಸರ್ಕಾರಗಳು ಮತ್ತು ಪಾಶ್ಚಾತ್ಯ ಮಾಧ್ಯಮ ಬೀಜಿಂಗ್‌ನ್ನು ಅವಹೇಳನ ಮಾಡುತ್ತಿರುವುದನ್ನು ನೋಡಿದರೆ 'ಚೀನಾದ ಉದಯ' ಪಾಶ್ಚಾತ್ಯ ರಾಷ್ಟ್ರಗಳಿಗೆ ನುಂಗಲಾರದ ತುತ್ತಾಗಿದೆ ಎಂಬುದು ವೇದ್ಯವಾಗುತ್ತದೆ.

ಮಾನವ ಹಕ್ಕು ಉಲ್ಲಂಘನೆಗಾಗಿ ಚೀನಾವನ್ನು ಮಾಧ್ಯಮಗಳಲ್ಲಿ ವಾಚಾಮಗೋಚರವಾಗಿ ಖಂಡಿಸಲಾಗಿದೆ; ಅದನ್ನು ಎರಡನೇ ಮಹಾಯುದ್ಧಕ್ಕೂ ಮೊದಲಿನ ನಾಜಿ ಆಡಳಿತಕ್ಕೆ ಹೋಲಿಸಲಾಗಿದೆ; ಲಕ್ಷಾಂತರ ಮಂದಿ ನಾಗರಿಕರನ್ನು ಸ್ಥಳಾಂತರಿಸಿದ್ದಕ್ಕಾಗಿ ಅಷ್ಟೇ ಅಲ್ಲ, ಉದ್ಘಾಟನಾ ಸಮಾರಂಭದಲ್ಲಿ ಸಣ್ಣ ಬಾಲಕಿಯೊಬ್ಬಳಿಗೆ ಹಾಡಲು ಅವಕಾಶ ಕೊಟ್ಟಿದ್ದಕ್ಕೂ ವ್ಯಾಪಕವಾಗಿ ಟೀಕಿಸಲಾಗಿದೆ; ದೇಶದಲ್ಲಿನ ಇಸ್ಲಾಮಿ ಭಯೋತ್ಪಾದನೆ ಬಗ್ಗೆ ಮಾಧ್ಯಮಗಳಲ್ಲಿ ಸ್ವಲ್ಪ ಹೆಚ್ಚೇ ಬಿಂಬಿಸಲಾಗಿದೆ.

ನಿಜ, ಚೀನಾದಲ್ಲಿರುವುದು ದಯಾಮಯ ಆಡಳಿತವೇನೂ ಅಲ್ಲ. ಆದರೆ ಅದು ಅಧಿಕೃತ, ಶಿಸ್ತಿನ ಆಡಳಿತ ಎಂಬುದಂತೂ ನಿಜ. 1998ರ ಸಿಯೋಲ್ ಒಲಿಂಪಿಕ್ಸ್‌ನಲ್ಲೂ ದಕ್ಷಿಣ ಕೊರಿಯಾದ ಶಿಸ್ತಿನ ಆಡಳಿತ ತನ್ನ ನಾಗರಿಕರ ಪ್ರಜಾಸತ್ತಾತ್ಮಕ ಆಶೋತ್ತರಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸಿತ್ತು.ಆದರೂ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಮಾಧ್ಯಮಗಳು ವರದಿ ಮಾಡಿದಂತೆ ಆಗ ವರದಿಯಾಗಿರಲಿಲ್ಲ. ಬೀಜಿಂಗ್ ಒಲಿಂಪಿಕ್ಸ್ ಮತ್ತು ಚೀನಾ ವಿರುದ್ಧದ 'ದಾಳಿ'ಯನ್ನು ಗಮನಿಸಿದರೆ ಅಮೆರಿಕಕ್ಕೆ ಪ್ರತಿಸ್ಪರ್ಧಿಯಾಗಿ ಪ್ರಬಲವಾಗುವ ಯಾವುದೇ ಶಕ್ತಿಯನ್ನು ಪಾಶ್ಚಾತ್ಯ ಮಾಧ್ಯಮಗಳು ಸಹಿಸುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಆದರೆ ಚೀನಾ ಒಂದು ಸಂಕೀರ್ಣ ದೇಶ. ಇಂತಹ'ಅಸಹನೀಯತೆ' ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ ಅಷ್ಟೆ. ಮಾಧ್ಯಮಗಳ ಉತ್ಪ್ರೇಕ್ಷೆಯ ವರದಿಗಳು ಮತ್ತು ಟೀಕಾತ್ಮಕ ಹೇಳಿಕೆಗಳನ್ನೇ ಅಲ್ಲಿನ ಕಮ್ಯುನಿಸ್ಟ್ ಆಡಳಿತ

ರಾಷ್ಟ್ರೀಯ ಭಾವನೆಯ ಅಂಶವನ್ನಾಗಿ ಪರಿವರ್ತಿಸಿಕೊಳ್ಳಬಲ್ಲುದು ಎಂದು ಎಚ್ಚರಿಸುತ್ತಾರೆ ಬಿಬಿಸಿ ಸಂಸ್ಥೆಯ ಪೀಟರ್ ಫ್ಯೂಯಿಲ್ ಹೆರೇಡ್. ಅಂದ ಹಾಗೆ ಮನ ಬಂದಂತೆ ಹಣಿದುಬಿಡಲು ಚೀನಾ ಪನಾಮ ಅಥವಾ ಗ್ವಾಟೆಮಾಲ ಅಲ್ಲವಲ್ಲ!

ಟಿಎಸ್‌ಐ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .