|
ಕರಾಚಿ, 14 ಜುಲೈ 1927
ಪ್ರಿಯ ಇ.ಎಂ,
ತಮ್ಮ ಪುಸ್ತಕಗಳ ಬಗ್ಗೆ ಬರೆದಿದ್ದ ಹಿಂದಿನ
ಪತ್ರಕ್ಕೆ ನಾನೇಕೆ ಇನ್ನೂ ಉತ್ತರ ನೀಡಿಲ್ಲ ಎಂಬ ಪ್ರಶ್ನೆ ಈಗಾಗಲೇ
ನಿಮ್ಮನ್ನು ಕಾಡಿರಬಹುದು
ಬ್ರಿಟಿಷ್ ರಾಯಭಾರಿ ಕಚೇರಿಯ ಕೆಲಸಗಳಲ್ಲೇ ನಾನು
ಮುಳುಗಿಹೋಗಿದ್ದೆ
ಆದ್ದರಿಂದ ಇತರೆ ಕೆಲಸಗಳ ಕಡೆ ಗಮನಹರಿಸುವುದು
ಸಾಧ್ಯವಾಗಲಿಲ್ಲ
'ಪ್ಯಾಸೇಜ್ ಟು
ಇಂಡಿಯಾ'
ಹೊರತುಪಡಿಸಿ ನಿಮ್ಮ ಎಲ್ಲಾ ಪುಸ್ತಕಗಳನ್ನೂ ಓದಿದ್ದೇನೆ
ಅವು ನಿಜಕ್ಕೂ ದಂಗುಬಡಿಸುತ್ತವೆ
ಎಲ್ಲಾ ಕೃತಿಗಳಲ್ಲೂ ಬರುವ ಮಾತುಗಳು
(ಬೆಚ್ಚಿಬೀಳಿಸುವ),
ನನಗನಿಸಿದ ಪ್ರಕಾರ ನಿಮ್ಮ ಹೃದಯದಾಳದಿಂದ ಹೊರ
ಹೊಮ್ಮಿದವು ಹಾಗೂ ಅವು ನಿಮ್ಮ ವ್ಯಕ್ತಿತ್ವನ್ನು ಇಡಿಯಾಗಿ
ಪ್ರತಿನಿಧಿಸುತ್ತವೆ
ಆದರೆ,
ಆ ಎಲ್ಲಾ ಮಾತುಗಳನ್ನು ಒಟ್ಟಾಗಿ ನೋಡಿದಾಗ ಅವು
ಖಂಡಿತವಾಗಿಯೂ ನನ್ನೊಂದಿಗೆ ಕುಳಿತು ಚಹಾ ಸೇವಿಸಿದ ನಿಮ್ಮ ಚಿತ್ರವನ್ನು
ಕಟ್ಟಿಕೊಡಲಿಲ್ಲ
ಹೌದು ಚಹಾ ನಿಮ್ಮ ನೆಚ್ಚಿನ ಪೇಯವಾಗಿದ್ದರೆ,
ನೀರು ನನ್ನ ಮೆಚ್ಚಿನ ಪಾನೀಯ
ಚೆಸ್ಟರ್‌ಟನ್‌ಗೆ ಬಿಯರ್ ಹಾಗೂ ಬೆಲ್ಲಾಕ್‌ಗೆ
ಬರ್ಗ್ಯಾಂಡಿ ಎಂದರೆ ಅಚ್ಚುಮೆಚ್ಚು
ವಿಮರ್ಶೆ ಎನ್ನುವುದು ಎಷ್ಟು ಕಠಿಣ..!
ಇಂಗ್ಲೆಂಡ್ ಬಿಡುವುದಕ್ಕೂ ಮುಂಚೆ ನನ್ನ
ಮನಸ್ಸಿನಲ್ಲಿದ್ದ ವಿಷಯವೊಂದನ್ನು ಕೃತಿಯ ರೂಪಕ್ಕೆ ಇಳಿಸುವುದು ಸಾಧ್ಯವೇ
ಎಂಬ ಅನುಮಾನ ಮೂಡುತ್ತಿದೆ
ಭಾರತದ ಈ ಭೇಟಿಯ ಸಂದರ್ಭದ ನೌಕಾಘಾತದ ವಿಷಯವೇ ಆ
ಕೃತಿಯ ಭಾಗವಾಗಬಹುದು
'ಭಾರತದ ಭೇಟಿ'
ಅದು ಸರಿ ಹೊಂದಲಾರದು
ಏಕೆಂದರೆ,
ನಾನು ಇಲ್ಲಿನ ಶಿಬಿರದಿಂದ ಇನ್ನೂ ಒಂದಡಿ
ಹೊರಗಿಟ್ಟಿಲ್ಲ
ಭಾರತೀಯ ಮನೆಗಳು ಹೇಗಿರುತ್ತವೆ ಅಥವಾ ಭಾರತೀಯರು
ಹೇಗಿರುತ್ತಾರೆ ಎಂಬುದೂ ನನಗೆ ಗೊತ್ತಿಲ್ಲ
ನಮ್ಮ ಶಿಬಿರದಲ್ಲಿ ಸೇವಕರಾಗಿರುವ ಕೆಲವು
ದೇಶಭ್ರಷ್ಟ ಭಾರತೀಯರನ್ನು ಬಿಟ್ಟರೆ ಬೇರೆ ಭಾರತೀಯರನ್ನು ನಾನು ಈವರೆಗೆ
ಕಂಡಿಲ್ಲ
ಅಂದರೆ ಸದ್ಯಕ್ಕೆ ಇಲ್ಲಿಂದ ಹೊರ ಹೋಗಲಾರೆ ಎಂಬುದು ನನ್ನ
ಮಾತಿನ ಅರ್ಥ
ಹಾಗಾಗಿ ಆ ಕೃತಿಗೆ
'ಭಾರತದ ಭೇಟಿ'
ಎಂಬ'
ಹೆಸರಿಡಲಾರೆ
ಒಂದು ಚದರ ಮೈಲಿ ವಿಸ್ತೀರ್ಣವಿರುವ ಶುಭ್ರ
ಮರಳಿನ ಹಾಸಿನ ಲಘು ವಿಮಾನ ನಿಲ್ದಾಣದಲ್ಲಿ ಕುಳಿತಾಗ ಅಥವಾ ಅಲ್ಲೇ
ಅಡ್ಡಾಡುತ್ತಿರುವಾಗ ನಾನು ಏನಾದರೂ ಓದುತ್ತಿರುತ್ತೇನೆ ಇಲ್ಲವೇ ಗಹನವಾದ
ಚಿಂತನೆಗೆ ಮನಸ್ಸನ್ನು ಒಡ್ಡಿರುತ್ತೇನೆ
ರಾತ್ರಿ ಅಲ್ಲೇ ಅಂಗಾತ ಮಲಗಿ
'ಇಂಗ್ಲೆಂಡಿನಲ್ಲಿರುವ
ನಿಮ್ಮಲ್ಲಿ ಯಾರಾದರೂ ಒಬ್ಬರು ಕೆಲ ಗಂಟೆಗಳ ಬಳಿಕ ಇದೇ ನಕ್ಷತ್ರಗಳನ್ನು
ನೋಡಬಹುದು'
ಎಂಬ ವಿಚಿತ್ರ ಕಲ್ಪನೆಯಲ್ಲಿ ಆಕಾಶ ದಿಟ್ಟಿಸುತ್ತೇನೆ
ಒಂದು ರೀತಿಯ ಸಲಿಂಗಿ ಸಂಸಾರ!
ನಾನು
8 ಧ್ವನಿ ಸುರುಳಿಗಳನ್ನು ಖರೀದಿಸಿದ್ದೇನೆ
ಎಂಟೂ ಅದ್ಭುತವಾಗಿವೆ
ನಿಮ್ಮ ಸಹೋದ್ಯೋಗಿಗಳು
ಸುಧಾರಿಸಿಕೊಂಡಿದ್ದಾರೆಯೇ?
ಅವರ ಕಾಡು ಹರಟೆಗಳಿಂದ ನಿಮಗೆ ತಲೆಚಿಟ್ಟು
ಹಿಡಿಯಬಹುದು ಪಾಪ
ಇನ್ನು ನಿಮ್ಮ ವಿಮರ್ಶಾ ಉಪನ್ಯಾಸಗಳು?
ಅವು ಕೂಡ ಪ್ರಕಟವಾಗುತ್ತವೆ ತಾನೆ?
ನಿಮ್ಮ ವಿರುದ್ಧದ ಸಾಕ್ಷಿಗಳಾಗಿ ಅವುಗಳನ್ನು
ಕಾದಂಬರಿಗೆ ಸೇರಿಸುವ ಲೆಕ್ಕಾಚಾರ ನನ್ನದು
ನಿಮ್ಮ ಸಾಹಿತ್ಯ ಕೃಷಿಯನ್ನು ಜನ ಗುರುತಿಸಲು ಒಂದು
ಗುರುತಿನ ಪತಾಕೆಯನ್ನು ಹಾರಿಸುವುದು ನಿಮ್ಮ ಜವಾಬ್ದಾರಿ
(ಒಂದು ಪುಟ್ಟ
ಮೊಲದ ಮರಿ ಕೂಡ ಬೆದರಿ ಓಡುವಾಗಲೂ ಬಾಲ ನಿಮಿರಿಸಿ ತನ್ನ ದಾರಿಯನ್ನು
ತಿಳಿಸುತ್ತದೆ!)
ಇಲ್ಲದಿದ್ದರೆ ಮಹಾನ್ ಬೇಟೆಗಾರರಿಗೆ
(ವಿಮರ್ಶಕರು)
ನಿಮ್ಮ ಅಡಗುದಾಣ ಹೇಗೆ ತಾನೆ ಕಾಣಿಸೀತು?
ಲೇಖಕರ ರಕ್ಷಣೆಯ ಕವಚವಿಲ್ಲದೆ ವಿಮರ್ಶಕರು ಹೇಗೆ
ತಾನೆ ತಮ್ಮನ್ನು ತಾವು ಗಟ್ಟಿಗೊಳಿಸಬಲ್ಲರು?
ಲೇಖಕರು ನೀಡುವ ಸುಳಿವುಗಳಿಲ್ಲದೆ ಈ ಕಾಲಘಟ್ಟಕ್ಕೆ
ಪ್ರವೇಶಿಕೆಯ ಮಾತುಗಳನ್ನು ಆಡುವುದೆಂದರೆ ವಿಮರ್ಶಕರಿಗೆ ಕಷ್ಟವಲ್ಲವೇ?
ನಿಮ್ಮ ಟಿ.ಇ.ಎಲ್ |