|
| ಪ್ರೊ. ಡಾ. ಅರುಣಾ ಬ್ರೂಟಾ
|
ಕ್ಲಿನಿಕಲ್ ಸೈಕಾಲಜಿಸ್ಟ್
|
ತಮ್ಮ ಮಕ್ಕಳು ಹದಿಹರೆಯಕ್ಕೆ ಬರುತ್ತಾರೆ
ಎನ್ನುವಾಗ ಸಾಮಾನ್ಯವಾಗಿ ಹೆತ್ತವರಲ್ಲಿ ಕಾಣದ ತಳಮಳ ಇರುತ್ತದೆ.
ಹಾಗಿದ್ದಲ್ಲಿ ಹದಿಹರೆಯದವರಿಗೂ ಅಂತಹ ತಳಮಳ ಕಾಡುತ್ತಿರುತ್ತದೆಯೆ?
ಯುವಕರಲ್ಲಿ ಕಳವಳ ಇರುವುದಿಲ್ಲ,
ಬದಲಾಗಿ ಅವರು ತುಂಬಾ ಉತ್ಸುಕರಾಗಿರುತ್ತಾರೆ.
ಏಕೆಂದರೆ ಹದಿಹರೆಯ ಮನಸ್ಸಿನ ಇಚ್ಛೆಗೆ ಅನುಸಾರ ಕಾಲ ಕಳೆಯುವ ವಯಸ್ಸು.
ಅಂದರೆ ಹೆತ್ತವರು ಯುವಜನರ ಈ ಮನೋಭಾವ ಮತ್ತು ಹುಚ್ಚು ಆವೇಶದ ಬಗ್ಗೆ
ಭಯಭೀತರಾಗಿದ್ದಾರೇನು?ಇಲ್ಲ.
ನನಗೆ ಹಾಗನ್ನಿಸುತ್ತಿಲ್ಲ.ಒಂದು
ವಿಷಯ ನೆನಪಲ್ಲಿರಿಸಿಕೊಳ್ಳಬೇಕು.ಹರೆಯ
ಪ್ರೇಮ ಭಾವನೆಗಳು ಜಿಗಿತುಕೊಳ್ಳುವ ಪ್ರಾಯ.
ಇದಕ್ಕೇ ಹೆತ್ತವರು ಆತಂಕ ಪಡುತ್ತಾರೆ.
ಹಾಗೆಯೇ ಹುಡುಗರ ಹೆತ್ತವರು ತಮ್ಮ ಮಕ್ಕಳು ತಪ್ಪು ದಾರಿ ಹಿಡಿಯುತ್ತಾರೇನೋ
ಎಂಬ ಆತಂಕದಲ್ಲಿರುತ್ತಾರೆ.ಯುವತಿಯರ
ಹೆತ್ತವರಿಗೆ ತಮ್ಮ ಮಗಳ ಸುರಕ್ಷೆ ಮತ್ತು ಕನ್ಯತ್ವದ ಭಯವೇ ಹೆಚ್ಚೆನ್ನಬಹುದು.
ನಾನು ಒಂದು ಬಾರಿ ಆರನೇ ತರಗತಿ ವಿದ್ಯಾರ್ಥಿನಿ ನೇಹಾ
(11 ವರ್ಷ)
ಬಳಿ ಮಾತನಾಡಿದ್ದೆ.ಆಕೆ
ಪ್ರೌಢಶಾಲೆಗೆ ಪ್ರವೇಶಿಸುವ ಮುನ್ನ ತನ್ನ ಜೀವನದಲ್ಲಿ ಯಾವ ಬದಲಾವಣೆಗಳನ್ನು
ಎದುರಿಸಲಿದ್ದಾಳೆ ಎಂಬ ಕಾತುರತೆ ನನಗಿತ್ತು. "ಅದು
ಒಂದು ವಿಭಿನ್ನ ಪ್ರಪಂಚ.ಇನ್ನೂ ಹೆಚ್ಚಿನ
ಸ್ವಾತಂತ್ರ್ಯ ಸಿಗುತ್ತದೆ.ಅಧ್ಯಾಪಕರು
ನಮ್ಮನ್ನು ಭಿನ್ನವಾಗಿ ಕಾಣುತ್ತಾರೆ.ಅಲ್ಲಿ
ಚೆಂದ ಚೆಂದದ ಬೆಳೆದ ಹುಡುಗರಿರುತ್ತಾರೆ.
ಅವರನ್ನು ಅರ್ಥೈಸಿಕೊಳ್ಳಲು ಮತ್ತು ಅವರು ನನ್ನನ್ನು ಅರಿತುಕೊಳ್ಳಲು ಸ್ವಲ್ಪ
ಕಾಲ ಬೇಕಾಗಬಹುದು"ಎನ್ನುವುದು ನೇಹಾ
ಉತ್ತರವಾಗಿತ್ತು.ಖಂಡಿತಾ,
ಈ ಸಂಭಾಷಣೆ ಕೇಳಿದ ಯಾವುದೇ ಅಮ್ಮ ಕೂಡಾ ಭಯ ಬೀಳುವುದರಲ್ಲಿ ಸಂಶಯವೇ
ಇಲ್ಲ.ನಾನು ಅಲ್ಲೇ ನಿಂತಿದ್ದ ಅಂಕಿತ್‌ನನ್ನು
(13,
ಏಳನೇ ತರಗತಿ) "ನೀನು ನನ್ನ ಪುಟ್ಟ
ಗೆಳೆಯನಾಗುವೆಯಾ?"ಎಂದು ಪ್ರಶ್ನಿಸಿದ್ದೆ.
ಆತ ಕೂಡಲೇ ಉತ್ತರಿಸಿದ್ದ, "ಇಲ್ಲವೇ
ಇಲ್ಲ.ನೀವು ಯಾವ ಗ್ರಹದಿಂದ ಬಂದದ್ದು?
ನೀವು ನಮ್ಮಂತಹ ಹುಡುಗರ ವರ್ತನೆಗಳನ್ನು ವಿರೋಧಿಸುವುದೇಕೆ?
ಏನೂ ಇಲ್ಲದೆ ನೀವೆಲ್ಲಾ ಹಾಗೆ ದೊಡ್ಡ ವಿಷಯವಾಗಿ ಸುದ್ದಿ
ಹಬ್ಬಿಸುತ್ತೀರಿ.ಇದೇ ಕಾರಣಕ್ಕೆ ನಾನು ಯಾವ
ವಿಷಯವನ್ನೂ ನಮ್ಮ ಮನೆಯ ಹಿರಿಯರೊಡನೆ ಹಂಚಿಕೊಳ್ಳಲು ಹೋಗುವುದಿಲ್ಲ.
ನೇಹಾ ನೀನು ನಿಜಕ್ಕೂ ಮೂರ್ಖ ಹುಡುಗಿ.
ಸ್ವಲ್ಪ ಬುದ್ಧಿ ಬೆಳೆಸಿಕೊ.
ಹಿರಿಯರಿಗೆ ಏನು ಹೇಳಬೇಕು ಎನ್ನುವುದನ್ನು ಮೊದಲು ಕಲಿತುಕೋ.
ಇಲ್ಲದೆ ಹೋದಲ್ಲಿ ಪ್ರತಿ ಬಾರಿ ಸಮಸ್ಯೆಯಲ್ಲಿ ಸಿಲುಕಿ ಬೀಳುವೆ."
ಅಂಕಿತ್ ತನ್ನ ತಂದೆ-
ತಾಯಿ ಜೊತೆ ಅಲ್ಲಿಗೆ ಬಂದಿದ್ದ.ಅದು
ಹೆತ್ತವರು-ಅಧ್ಯಾಪಕರ ಸಭೆಯ ದಿನವಾಗಿತ್ತು.
ಅಂಕಿತ್‌ನ ಅಮ್ಮ ಕೂಡಲೇ ಗದರಿಸಿದಳು, "ಮೊದಲು
ಮಾತನಾಡೋ ರೀತಿ ಕಲಿ.ನಿನಗೆ ಯಾವುದರಲ್ಲೂ
ಒಂದು ಮಿತಿ ಎನ್ನುವುದಿಲ್ಲ.ಪ್ರೌಢಾವಸ್ಥೆಗೆ
ಬಂದದ್ದೇ ತಡ,ನಮಗಿಂತಲೂ ವಯಸ್ಸಾದ ಹಾಗೆ
ನಡೆದುಕೊಳ್ಳುವೆ.ನೀನಿನ್ನೂ ಹುಡುಗ
ಅನ್ನೋದನ್ನ ಮರೆಯಬೇಡ.ನೇಹಾ,
ನೀನೂ ಇವನ ಹಾಗೆ ನಡೆದುಕೊಳ್ಳುತ್ತಿ ಏನು?
ಅಥವಾ ನಿನ್ನ ಅಕ್ಕ-ಅಣ್ಣಂದಿರು
ಹೀಗೆ ನಡೆದುಕೊಳ್ಳುತ್ತಾರೆಯೇ?"ಎಂದಳು.
ಇದಕ್ಕೆ ಉತ್ತರವಾಗಿ ಅಂಕಿತ್, "ಅಮ್ಮಾ,
ಬಾಯಿಮುಚ್ಚು.ನನ್ನನ್ನು
ಎಲ್ಲರೆದುರು ಅವಮಾನ ಮಾಡಬೇಡ"ಎಂದ.
ಈ ಮಾತಿಗೆ ತಾಯಿ ನಿಜಕ್ಕೂ ವೇದನೆ ಪಟ್ಟುಕೊಂಡು,
"ಅಂಕಿತ್ ನಿನಗೆ ತಲೆ-ಗಿಲೆ
ಕೆಟ್ಟಿದೆಯೇನು?ನಾನು ನಿನ್ನ ಅಮ್ಮ"
ಎಂದಳು.ಜೊತೆಯಲ್ಲೇ ಅಂಕಿತ್ ತಂದೆಯೂ
ತರಾಟೆಗೆ ತೆಗೆದುಕೊಂಡರು.ಅಪ್ಪ ಅಂಕಿತ್‌ಗೆ
ಒಂದೇಟು ಬಡಿದರು.ಅಂಕಿತ್ ಆ ಜಾಗ ಬಿಟ್ಟು
ಹೊರಟು ಹೋದ.ರೋಷಾವೇಶದಿಂದ ಆತನ ಕಣ್ಣುಗಳು
ಕೆಂಪಗಾಗಿದ್ದವು.
ಈ ಎಲ್ಲಾ ತಮಾಷೆ ನಡೆಯುವಾಗ ಆ ಕಾರಿಡಾರ್‌ನಲ್ಲಿ
ಇನ್ನೂ ಅನೇಕರಿದ್ದರು.ಹದಿಹರೆಯದ ಮಕ್ಕಳನ್ನು
ತಾಂತ್ರಿಕವಾಗಿ ಮುಗ್ಧರು ಎನ್ನಲಾಗುತ್ತದೆ.
ಇದಕ್ಕೆ ಕಾರಣವಿದೆ.
13ರ ವಯಸ್ಸಿಗೆ ಮುನ್ನ ಅವರಲ್ಲಿ ದೈಹಿಕ-ಮಾನಸಿಕ
ಬದಲಾವಣೆ ಕಂಡು ಬರುತ್ತದೆ.ಆದರೆ ಈಗೀಗ ನಾವು
ರ ವಯಸ್ಸಿನ ಮಕ್ಕಳಲ್ಲೇ
ಬದಲಾವಣೆಗಳಾಗುವುದನ್ನು ಕಾಣುತ್ತೇವೆ.
ಹೀಗಾಗಿ ಜಾಗತಿಕವಾಗಿ ಹದಿಹರೆಯದ ವಯಸ್ಸು ಮಾನಸಿಕ-ಸಾಮಾಜಿಕ-
ವೈದ್ಯಕೀಯವಾಗಿ ಪ್ರಸ್ತುತವಾಗಿಲ್ಲ.
ಮಾಧ್ಯಮಗಳ ಪರಿಣಾಮದಿಂದಾಗಿ ಅವರ ಮೆದುಳು ಅತಿಹೆಚ್ಚು ಮಾಹಿತಿ
ಸಂಗ್ರಹಿಸಿಕೊಳ್ಳುತ್ತಿದೆ:ಅದು ಒಳ್ಳೆಯ
ಮಾಹಿತಿ ಇರಲಿ,ಕೆಟ್ಟದಿರಲಿ!
ನಮ್ಮ ಶಾಲಾ ಶಿಕ್ಷಣವೂ ಹಾಗೇ ಇದೆ.
ಮಕ್ಕಳನ್ನು ಸಾಧ್ಯವಾದಷ್ಟು ಬೇಗನೆ ಸ್ವತಂತ್ರವಾಗಿ ಬಾಳುವ ಗುರಿ ಪೂರೈಸುವ
ಉದ್ದೇಶ ಹೊಂದಿದೆ.ಅಲ್ಲದೆ ಬಹಳಷ್ಟು
ಪಠ್ಯೇತರ ಚಟುವಟಿಕೆಗಳನ್ನು ನಿಭಾಯಿಸುವ ಸಾಮರ್ಥ್ಯವೂ ಅವರಲ್ಲಿದೆ.
ಆದರೆ ಈ ಮುಗ್ಧ ಮಕ್ಕಳು ತಮ್ಮ ಪ್ರಾಯಕ್ಕೆ ತಕ್ಕಷ್ಟು
ಪ್ರಬುದ್ಧರಾಗಿರುತ್ತಾರೆಯೆ?ಅವರಿಗೆ
ಮಾಹಿತಿಗಳ ಕಣಜವೇ ಸಿಕ್ಕಿದೆ.ಆದರೆ ಆ
ಮಾಹಿತಿಯನ್ನು ಜ್ಞಾನವಾಗಿ ಪರಿವರ್ತಿಸಿಕೊಳ್ಳುವಲ್ಲಿ ಯಶಸ್ಸು
ಪಡೆದಿದ್ದಾರೆಯೆ?ಹಾಗೆಯೇ ಆ ಜ್ಞಾನವನ್ನು
ದೈನಂದಿನ ಜೀವನದಲ್ಲಿ ಬಳಸಿಕೊಂಡಿದ್ದಾರೆಯೆ?
ನಾನು ವೈಭವ್ (16
ವರ್ಷ)ಎನ್ನುವ ಹುಡುಗನನ್ನು ಬಲ್ಲೆ.
ಆತ ತನ್ನ ಸಹಪಾಠಿ ಹುಡುಗಿಯ ಜೊತೆ ಲೈಂಗಿಕ ಸಂಪರ್ಕ ನಡೆಸಿದ ಕಾರಣ
ಎಚ್‌ಐವಿ ರೋಗವನ್ನು ತಗಲಿಸಿಕೊಂಡಿದ್ದ!ಅದೂ
ಒಂದೇ ಬಾರಿ.ಆತನಿಗೆ ಎಚ್‌ಐವಿ ಬರಬಹುದು
ಎನ್ನುವ ಕುರಿತು ಮಾಹಿತಿ ಇತ್ತು.ಆದರೆ ಆ
ಜ್ಞಾನವನ್ನು ಆತ ಬಳಸಿಕೊಂಡಿರಲಿಲ್ಲ.ಯಾವುದೇ
ಸುರಕ್ಷಾ ಕ್ರಮವನ್ನು ಅಳವಡಿಸಿಕೊಂಡಿರಲಿಲ್ಲ.
ಆತ ಬಹಳ ಭಯ ಬಿದ್ದಿದ್ದ.ಯಾರಿಗೂ
ಹೇಳದೆಯೇ ರಕ್ತ ಪರೀಕ್ಷೆಗೆ ಹೋಗಿದ್ದ.ಅದು
ಪಾಸಿಟಿವ್ ಆಗಿರುವ ಮಾಹಿತಿ ಸಿಕ್ಕಿತ್ತು.
ಹಾಗೆಯೇ ಆರು ತಿಂಗಳು ಕಳೆದಿತ್ತು.ದಿನೇ
ದಿನೇ ಆತ ಏಕಾಗ್ರತೆ ಕಳೆದುಕೊಂಡ.ಆತನ
ಅಂಕಗಳು 'ಎ'ಯಿಂದ
'ಸಿ'ಗೆ
ಬಂದವು.12ನೇ
ತರಗತಿಯ ಅರ್ಧವಾರ್ಷಿಕ ಪರೀಕ್ಷೆಗಳಲ್ಲಿ ನಪಾಸಾದ.
ಕೊನೆಗೆ ಶಾಶ್ವತವಾಗಿ ಮನೆ ತೊರೆದ. "ವರ್ಷವಿಡೀ
ನನಗೆ ಪಾಠಗಳ ಕಡೆ ಗಮನ ಹರಿಸಲು ಸಾಧ್ಯವಾಗಲಿಲ್ಲ.
ಕೊನೆ ಕ್ಷಣದಲ್ಲಿ ನಾನು 12ನೇ
ತರಗತಿಯ ಅಂತಿಮ ಪರೀಕ್ಷೆಗೆ ಸಿದ್ಧ ಪಡಿಸಿಕೊಳ್ಳೋಣ ಎಂದುಕೊಂಡಿದ್ದೆ.
ಏಕೆಂದರೆ ವರುಷವಿಡೀ ನಾನು ಚಿಂತೆಯಿಂದಲೇ ಕಾಲ ತಳ್ಳಿದ್ದೆ.
ನನ್ನ ಅಮ್ಮ ನನ್ನ ಮೇಲೆ ಕಿರುಚಾಡುತ್ತಿದ್ದಳು.
ನಾನು ಆಕೆಯನ್ನು ದ್ವೇಷಿಸುತ್ತೇನೆ.
ನನ್ನ ತಂದೆ ನನಗೆ ಹೊಡೆಯುತ್ತಿದ್ದರು.ದಿನ
ಕಳೆದಂತೆ ಅದು ಸಾಮಾನ್ಯವಾಗಿ ಹೋಗಿತ್ತು.
ನನ್ನ ಅಜ್ಜಿಗೆ ನಾನೆಂದರೆ ಬಹಳ ಪ್ರೀತಿ.
ಆದರೆ ನಾನು ಆ ಬಗ್ಗೆ ಗಮನವೇ ಕೊಡಲಿಲ್ಲ.
ಸ್ವನಿರ್ಧಾರ ತೆಗೆದುಕೊಳ್ಳುವಷ್ಟು ವಯಸ್ಸು ನನಗಾಗಿದೆ ಎನ್ನುವುದು ನನ್ನ
ಕಲ್ಪನೆಯಾಗಿತ್ತು.ನಾನು ಚೆನ್ನಾಗಿ ಗಿಟಾರ್
ಭಾರಿಸುತ್ತಿದ್ದೆ.ಮನೆ ಬಿಟ್ಟ ನಂತರ ಗಿಟಾರ್
ಬಾರಿಸಿ ಅದರಲ್ಲೇ ಜೀವನ ಕಳೆಯಬಹುದು ಎನ್ನುವ ನಂಬಿಕೆ ನನಗಿತ್ತು.
ಆದರೆ ಅದರಲ್ಲೂ ಯಶ ಕಾಣಲಿಲ್ಲ.ಒಂದು
ದಿನ ನಾನು ಯಾರದೋ ಕಾರಿನೊಳಗೆ ನುಗ್ಗಿ ಹಣ ಕದಿಯಲು ಪ್ರಯತ್ನಿಸಿ ಸಿಕ್ಕಿ
ಬಿದ್ದೆ.ನನ್ನನ್ನು ಪೊಲೀಸರ ಬಳಿ ಕರೆದು
ತಂದರು.ಅವರು ನಮ್ಮ ಮನೆಯವರಿಗೆ ಸುದ್ದಿ
ಮುಟ್ಟಿಸಿದರು.ಈಗ ನಾನು ನನ್ನ
ಸಂಬಂಧಿಕರನ್ನು ಭೇಟಿಯಾಗಲೂ ನಾಚುತ್ತಿದ್ದೇನೆ.
ನಾನು ಮನೆಯಿಂದ ಓಡಿ ಹೋಗಿದ್ದೆ ಎಂದು ಅವರಿಗೆಲ್ಲಾ ತಿಳಿದಿದೆ.
ನನಗೆ ಹೆತ್ತವರ ನೆರವು ಬೇಕಿರಲಿಲ್ಲ.
ಹಾಗೆಯೇ ಶಾಲಾ ಕೌನ್ಸಿಲರ್ ನೆರವೂ ಬೇಡವಾಗಿತ್ತು.
ಮುಗ್ಧ ವಯಸ್ಸು ಎಂದರೆ ಇದೇ ಏನು?
ನನಗೆ ಅಚ್ಚರಿಯಾಗುತ್ತಿದೆ.ನಾವೇಕೆ
ಜೀವನವನ್ನು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
ನಮ್ಮಂತಹ ಕೆಲವರಿಗೆ ಏಕೆ ಹೀಗೆ ಅನಿಸುತ್ತಿದೆ?
ನಾನು ನಮ್ಮಂತಹ ಕೆಲವರು ಎಂದು ಬೇಕೆಂದೇ ಹೇಳುತ್ತಿದ್ದೇನೆ.
ಏಕೆಂದರೆ ಅನೇಕರು ಜೀವನದಲ್ಲಿ ಅತ್ಯುತ್ತಮ ಸಾಧನೆಗಳನ್ನು
ಮಾಡಿದ್ದಾರೆ.ಹೀಗಾಗಿ ಕೊಂಚ ಯೋಚನೆ ಮಾಡಿ.
ನಿಮ್ಮ ಒಳತೋಟಿಯನ್ನು ಅರಿತುಕೊಳ್ಳಿ"
ಎನ್ನುತ್ತಾನೆ ವೈಭವ್.
ಹಾಗಿದ್ದರೆ ನಾವು ಸುಮ್ಮನೆ ಕುಳಿತು ನಮ್ಮ
ಅಂತರಂಗದ ಮಾತುಗಳನ್ನು ಆಲಿಸಬೇಕಿದೆಯೆ?ಅದು
ನಿಜಕ್ಕೂ ಪ್ರಾಮಾಣಿಕ ಅಭಿಪ್ರಾಯವಾಗಿರುತ್ತದೆಯೇ?
ಅಥವಾ ನಾವು ಉಗ್ರಸ್ವರೂಪ ತಾಳಿ ಉಜ್ವಲ ಭವಿಷ್ಯವನ್ನು ನಾಶ
ಮಾಡಿಕೊಳ್ಳಬೇಕೆ?
ಟಿಎಸ್‌ಐ |