ನೇಟೊ: ಹೇಡಿತನ
ಪಾಠ ಕಲಿಯುವುದೆಂದು?
ಬಲಿಷ್ಠ ರಾಷ್ಟ್ರಗಳಿಗೆ ನೇಟೊ ಬೆದರುತ್ತದೆ ಎಂಬ ವಿಷಯ ಈಗ ಗುಟ್ಟಲ್ಲ!

ಅಮೆರಿಕದಲ್ಲೇ ತಮ್ಮ ವಿದ್ಯಾಭ್ಯಾಸ ಮುಗಿಸಿದ
ಜಾರ್ಜಿಯಾ ಅಧ್ಯಕ್ಷ ಮಿಖೈಲ್ ಸಾಕಶ್ವಿಲಿ ದಕ್ಷಿಣ ಒಸೆಟಿಯಾ ಮೇಲೆ ದಾಳಿ
ನಡೆಸಿದಾಗ,
ಒಂದು ವೇಳೆ ರಷ್ಯಾ ಪ್ರತಿ ದಾಳಿಗೆ ಮುಂದಾದರೆ ಅಮೆರಿಕ ಹಾಗೂ
ನೇಟೊ ಮಿತ್ರ ರಾಷ್ಟ್ರಗಳು ರಕ್ಷಣೆಗೆ ಬರುತ್ತವೆ ಎಂಬ ವಿಚಿತ್ರ ಭ್ರಮೆಯಲ್ಲೇ
ಇದ್ದರು.
ಇರಾಕ್ ತನ್ನ ಪ್ರಾಬಲ್ಯದ ಮೂಲಕ ಕುವೈತ್‌ನ್ನು ಆಕ್ರಮಿಸಿ
ತನ್ನ '9ನೇ
ಪ್ರಾಂತವನ್ನಾಗಿಸಲು ಮುಂದಾದಾಗ ನೇಟೊ ಮೂಗು ತೂರಿಸಿದ್ದು ಹಾಗೂ ಸರ್ಬಿಯಾ ಮೇಲೆ
ಆಕ್ರಮಣ ಮಾಡಿ ಕೊಸೊವೊ ಸ್ಥಾಪನೆಗೆ ನೇಟೊ ಕಾರಣವಾಗಿದ್ದು...
ಇವೆಲ್ಲವನ್ನೂ ತಾಳೆ ಹಾಕಿ ನೋಡಿದಾಗ ಬಹುಶಃ
ಸಾಕಶ್ವಿಲಿ ಅವರಿಗೆ ನೇಟೊ ತಮಗೂ ನೆರವು ನೀಡುವುದರಲ್ಲಿ ಅನುಮಾನವಿಲ್ಲ
ಎಂದೆನಿಸಿರಬಹುದು.
ಆದರೆ 'ರಷ್ಯಾ'
ಎಂಬುದು 'ಸರ್ಬಿಯಾ'
ಅಲ್ಲ ಎಂಬುದು ಸಾಕಶ್ವಿಲಿ ಅವರಿಗೆ ಮರೆತೇ ಹೋಗಿತ್ತು.
ಕಳೆದ ಬಾರಿ ಸರ್ಬಿಯಾ,
ಬಂಕರ್ ಬಸ್ಟರ್ ಹಾಗೂ ವೈಮಾನಿಕ ದಾಳಿ ನಡೆಸುವ ಎಫ್-
''7,
ಬಿ-
',
ಮತ್ತು ಬಿ-
2 ಬಾಂಬರ್
ಮುಂತಾದ ಅಮೆರಿಕದ ಸುಧಾರಿತ ಮಾರಕಾಸ್ತ್ರಗಳ ಪ್ರಯೋಗಶಾಲೆಯಾಗಿತ್ತು.
ಅವನ್ನೆಲ್ಲಾ ಎದುರಿಸುವ ಶಕ್ತಿ ಸರ್ಬಿಯಾಕ್ಕೆ ಇಲ್ಲ
ಎಂಬುದೂ ನೇಟೊ ರಾಷ್ಟ್ರಗಳಿಗೆ ಚೆನ್ನಾಗಿಯೇ ಗೊತ್ತಿತ್ತು.
ಅದೂ ಅಲ್ಲದೆ ಕುವೈತ್‌ನಂತೆ ಬಿಲಿಯನ್ ಡಾಲರ್‌ಗಟ್ಟಲೆ
ಆದಾಯ ಬರುವ ತೈಲ ನಿಕ್ಷೇಪ ಜಾರ್ಜಿಯಾದಲ್ಲಿ ಇಲ್ಲ ಎಂಬುದೂ ಸಾಕಶ್ವಿಲಿ
ಸಾಹೇಬರಿಗೆ ಹೊಳೆಯದೇ ಹೋಯಿತು!
ಹಾಗೆ ಇವುಗಳ ಪರಿಜ್ಞಾನವೇ ಇಲ್ಲದೆ ಸಾಕಶ್ವಿಲಿ
ದಕ್ಷಿಣ ಒಸೇಟಿಯಾದ ಮೇಲೆ ದಾಳಿ ನಡೆಸಿದಾಗ,
ವ್ಯಂಗ್ಯವೆಂಬಂತೆ ಅಂತರ್ಜಾಲದ ತುಂಬಾ ಪ್ರಾಣ
ಭಯದಿಂದ ಓಡಿಹೋಗುತ್ತಿರುವ ಜಾರ್ಜಿಯಾ ಸೈನಿಕರು,
ಧ್ವಂಸಗೊಂಡ ಕಟ್ಟಡಗಳು,
ನೂರಾರು ಜಾರ್ಜಿಯಾ ಪ್ರಜೆಗಳ ಶವಗಳ ಛಾಯಾಚಿತ್ರಗಳೇ
ತುಂಬಿ ಹೋಗಿದ್ದವು!
ಹೌದು,
ರಷ್ಯಾ ಸುಮ್ಮನಿರುತ್ತದೆಯೇ?
ತೀವ್ರ ವೈಮಾನಿಕ ದಾಳಿ ನಡೆಸಿ,
ಜಾರ್ಜಿಯಾ ನೆಲಕಚ್ಚುವಂತೆ ಮಾಡಿತ್ತು.
ಇತ್ತ ಅಮೆರಿಕ ಅಧ್ಯಕ್ಷ ಇದ್ಯಾವುದನ್ನೂ ತಲೆಗೆ
ಹಚ್ಚಿಕೊಳ್ಳದೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ತಮ್ಮ ಕ್ರೀಡಾಪಟುಗಳನ್ನು
ನೋಡುವುದರಲ್ಲಿ ಮೈಮರೆತಿದ್ದರು.
ಆದರೂ,
ಸಾಕಶ್ವಿಲಿ ಅವರ ತಪ್ಪುಗಳಿಂದ ಹಲವು ಲಾಭಗಳೂ ಇವೆ!
ಜಾರ್ಜಿಯಾದ ರಕ್ಷಣೆಗೆ ಧಾವಿಸುವಲ್ಲಿ ನೇಟೊ ತೋರಿದ
ಉದಾಸೀನ ಹಲವು ಮಧ್ಯ ಏಷ್ಯಾ ರಾಷ್ಟ್ರಗಳಿಗೆ ಹಾಗೂ ಕಕಾಸಸ್‌ನಿಂದ ಬೇರ್ಪಟ್ಟ
ಸೋವಿಯತ್ ರಾಷ್ಟ್ರಗಳಿಗೆ (ನೇಟೊ
ಸೇರಲು ತುದಿಗಾಲಿನಲ್ಲಿ ನಿಂತಿರುವ ರಾಷ್ಟ್ರಗಳು)
ತನ್ನ ಪರಾಕ್ರಮಗಳ ಬಗ್ಗೆ ಭಾರೀ ಭಾಷಣ ಬಿಗಿಯುವ ನೇಟೊ
ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಅಥವಾ ರಷ್ಯಾ,
ಇರಾನ್ ಮುಂತಾದ ಬಲಿಷ್ಠ ರಾಷ್ಟ್ರಗಳನ್ನು
ಎದುರಿಸುವಲ್ಲಿ ಅಕ್ಷರಶಃ ನಡುಗುತ್ತದೆ ಎಂಬುದನ್ನು ತೋರಿಸಿಕೊಟ್ಟಿತು.
ಅದೂ ಅಲ್ಲದೆ ನೇಟೊದ
'ವಿಸ್ತರಣಾ ಯೋಜನೆ'
ಹಿಂದೆ ಸ್ಥಾಪನೆಯಾದಾಗ ಹೇಗಿತ್ತೋ ಈಗಲೂ ಹಾಗೇ ಇದೆ.
ಅಂದರೆ ಪಶ್ಚಿಮ ಯುರೋಪ್ ರಾಷ್ಟ್ರಗಳ ಹಿತಾಸಕ್ತಿಯೇ
ನೇಟೊ ಪ್ರಥಮ ಆದ್ಯತೆ.
ಪಶ್ಚಿಮ ಯುರೋಪ್‌ನಲ್ಲಿ ಅಂಥದ್ದೇನಾದರೂ ಸಂಭವಿಸಿದ್ದರೆ ನೇಟೊ
ಪ್ರತಿಕ್ರಿಯೆ ಖಂಡಿತಾ ಭಿನ್ನವಾಗಿರುತ್ತಿತ್ತು.
ಮಧ್ಯ ಏಷ್ಯಾ ಎಂಬುದು ರಷ್ಯಾದ ಅಖಾಡ,
ಅಲ್ಲಿ ಏನೇನು ಮಾಡಿದರೂ ಸಿಗುವ ಪ್ರಯೋಜನ ಅಷ್ಟರಲ್ಲೇ
ಇದೆ ಎಂಬುದೇ ನೇಟೊ ಅಭಿಪ್ರಾಯ.
ಅದಾಗಲೇ ಧ್ವಂಸಗೊಂಡಿದ್ದ ಜಾರ್ಜಿಯಾದ ಮೇಲೆ ರಷ್ಯಾ
ನಡೆಸಿದ ಆಕ್ರಮಣ ಜಾರ್ಜಿಯಾವನ್ನು ಪುಡಿಗಟ್ಟಿತು ಎನ್ನುವುದಕ್ಕಿಂತ ಪೋಲಂಡ್,
ಉಕ್ರೇನ್,
ಟರ್ಕ್‌ಮೆನಿಸ್ತಾನ್ ಮುಂತಾದ ರಾಷ್ಟ್ರಗಳಿಗೆ ನೇಟೊ
ಅಥವಾ ಅಮೆರಿಕದೊಂದಿಗಿನ ತಮ್ಮ ಮೈತ್ರಿಯಿಂದ ಕೊನೆಗೆ ಸಿಗುವುದಾದರೂ ಏನು
ಎಂಬುದಕ್ಕೆ ಪ್ರಾತ್ಯಕ್ಷಿಕೆ ನೀಡುವುದರಲ್ಲಿ ಯಶಸ್ವಿಯಾಯಿತು ಎಂಬುದು ಹೆಚ್ಚು
ಸೂಕ್ತ.
ಆಪತ್ಕಾಲದಲ್ಲಿ ಕೈಕೊಡುವ ಅಮೆರಿಕ ಅಥವಾ
ನೇಟೊವನ್ನು ನೆಚ್ಚಿ ಕುಳಿತುಕೊಳ್ಳುವುದಕ್ಕಿಂತ ಭದ್ರತೆ ಹಾಗೂ ಶಕ್ತಿ ಪೂರೈಕೆ
ಖಚಿತವಿರುವ ರಷ್ಯಾಕ್ಕೆ ವಿಧೇಯರಾಗಿರುವುದೇ ಉತ್ತಮ ಎಂಬುದು ಅದಾಗಲೇ ಹಲವು
ರಾಷ್ಟ್ರಗಳಿಗೆ ಮನದಟ್ಟಾಗಿರಬಹುದು.
ಬೀಜಿಂಗ್‌ನಲ್ಲಿ ಕುಳಿತು ಒಲಿಂಪಿಕ್ಸ್‌ನಲ್ಲಿ
ಮೈಮರೆತಾಗ ತಮ್ಮ ಈ ನಡತೆ ರಷ್ಯಾ ನೇತೃತ್ವದಲ್ಲಿ ಸೋವಿಯತ್ ಮಾದರಿಯ ಕಾರ್ಯವೈಖರಿ
ಎಂಬ ಹೊಸ ಮೈತ್ರಿಕೂಟಕ್ಕೆ ನಾಂದಿ ಹಾಡಲಿದೆ ಎಂಬುದು ಬುಷ್ ಅವರಿಗೆ ಹೊಳೆಯದೇ
ಹೋಯಿತು!
ಐಐಪಿಎಂ
'ಥಿಂಕ್ ಟ್ಯಾಂಕ್
ಪಥಿಕೃತ್ ಪಾಯ್ನೆ
ವ್ಯವಸ್ಥೆ: ಸುಧಾರಣೆ
ವೇತನ ಹೆಚ್ಚಳದ ಹೊಸ ಗಿಮಿಕ್!
ವೃತ್ತಿಪರತೆ, ಸ್ಪರ್ಧಾತ್ಮಕತೆ ಇಲ್ಲದಿದ್ದರೆ ವೇತನ ಹೆಚ್ಚಳದ ಗಿಮಿಕ್ ಖಂಡಿತ ನೆಲಕಚ್ಚುತ್ತದೆ

ಮೇ
'1947,
ಮೊದಲ ವೇತನ ಆಯೋಗ.
ಆಗಸ್ಟ್
2228 ಆರನೇ
ವೇತನ ಆಯೋಗ.
ಮೊದಲ ವೇತನ ಆಯೋಗ ಕೇವಲ ನಾಮಕಾವಸ್ತೆಗೆ ಎಂಬಂತೆ ಇದ್ದರೆ
ಆರನೇ ವೇತನ ಆಯೋಗ ಕೇವಲ ಚುನಾವಣಾ ಗಿಮಿಕ್.
ಈಗಾಗಲೇ ಶ್ರೀಮಂತರಾಗಿರುವ
(ಮೇಜಿನ
ಕೆಳಗಿನ ವ್ಯವಹಾರಗಳಿಂದ)
ನೌಕರರು/ಅಧಿಕಾರಿಗಳ
ಪಾಲಿಗೆ ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯ ಉಡುಗೊರೆ ಅತಿ ದೊಡ್ಡ
ಪ್ರಮಾಣದ್ದೇ.
ಕಳೆದ ಕೆಲವು ವರ್ಷಗಳಿಂದ ತಮ್ಮ ವೇತನದ ಬಗ್ಗೆ ಅಸಮಾಧಾನ
ವ್ಯಕ್ತಪಡಿಸುತ್ತಿದ್ದ ನೌಕರರು/ಅಧಿಕಾರಿಗಳು
ಈಗ ಸಂತಸದ ನಗೆ ಬೀರುತ್ತಿದ್ದಾರೆ.
ಆದರೆ ನಮ್ಮ ವ್ಯವಸ್ಥೆಯ ಪಾಲಿಗೆ ಅದೊಂದು ಕೈಯಾರೆ
ಕಳೆದುಕೊಂಡ ಅವಕಾಶ ಎನ್ನಬಹುದು.
ಆರನೇ ವೇತನ ಆಯೋಗದ ಮೌಲ್ಯ
42,762
ಕೋಟಿ ರೂಪಾಯಿಗಳಿಗಿಂತಲೂ ಅಧಿಕ.
ಅಲ್ಲದೆ ಅಧಿಕೃತ ವರದಿಗಳ ಪ್ರಕಾರ ಕಳೆದ ವೇತನ
ಆಯೋಗಕ್ಕಿಂತ ಶೇ.
'೫'ರಷ್ಟು
ಅಧಿಕ.
ಸರ್ಕಾರಿ ಅಧಿಕಾರಿಗಳ ವೇತನದಲ್ಲಿ ಶೇ.
2'ರಿಂದ
ಶೇ.
7'.೫ರಷ್ಟು
ಹೆಚ್ಚಳವಾಯಿತು.
ಇದು ದೇಶದ ಹಣದುಬ್ಬರವನ್ನು ಮತ್ತಷ್ಟು ಹೆಚ್ಚಿಸುತ್ತದೆ
ಎಂಬುದನ್ನು ಅರ್ಥಶಾಸ್ತ್ರಜ್ಞರು ವಿವರಿಸಬೇಕೆಂದಿಲ್ಲ್ಲ!
ಒಂದು ಕಡೆ ಸರ್ಕಾರದ ಆರ್ಥಿಕತೆ ತೀವ್ರ
ಸಂಕಷ್ಟದಲ್ಲಿದೆ,
ಇನ್ನೊಂದು ಕಡೆ ಈ ಸ್ವಯಂ ಘೋಷಿತ
'ದೀಪಾವಳಿ
ವಿಶೇಷ ಉಡುಗೊರೆ'
ವರಮಾನ ಇಲಾಖೆಗೆ ಹೊರಲಾರದ ಭಾರವಾಗಿ ಪರಿಣಮಿಸಿದೆ.
ಅದೂ ಅಲ್ಲದೆ ಈ ವೇತನ ಹೆಚ್ಚಳ ವೇತನ ಮಸೂದೆಯನ್ನು
87,222
ಕೋಟಿ ರೂಪಾಯಿಯಾಗಿಸಿದ್ದರ ಜೊತೆಗೆ ಇದರಿಂದ ಕೇಂದ್ರ ಸರ್ಕಾರಕ್ಕೆ ಪ್ರತಿ
ವರ್ಷ '7,'98
ಕೋಟಿ ರೂಪಾಯಿಗಳಷ್ಟು ಖರ್ಚು ತಗಲುತ್ತದೆ.
ಏಕೆಂದರೆ ವೇತನದಲ್ಲಿ ಶೇ.
62ರಷ್ಟನ್ನು
ಕೇಂದ್ರ ಸರ್ಕಾರವೇ ಭರಿಸಬೇಕು!
ಇವೆಲ್ಲದರ ನಡುವೆ ಸರ್ಕಾರ ಘೋಷಿಸಿರುವ ಬಡ್ತಿ
ಹಾಗೂ ವೇತನ ಹೆಚ್ಚಳದ ಹಿಂದಿನ ತಾರ್ಕಿಕ ವಿವರಣೆಯನ್ನು ತಿಳಿದುಕೊಳ್ಳಲೇಬೇಕು.
ವೇತನ ಹೆಚ್ಚಳದ ಬಗ್ಗೆ ನಮ್ಮದೇನೂ ತಕರಾರಿಲ್ಲ.
ಆದರೆ ಹಣದುಬ್ಬರ ತಾರಕಕ್ಕೇರಿರುವ ಈ ಅವಸ್ಥೆಯಲ್ಲಿ
ವೇತನ ಹೆಚ್ಚಳ ಸರ್ಕಾರಕ್ಕೆ ತುಸು ತಲೆ ನೋವಿನ ವಿಷಯ ಎಂಬುದರಲ್ಲಿ
ಅನುಮಾನವಿಲ್ಲ.
ಆದರೆ ವೇತನ ಹೆಚ್ಚಳದೊಂದಿಗೆ ಸರ್ಕಾರಿ ಇಲಾಖೆಯಲ್ಲೂ
ತಿದ್ದುಪಡಿ ಅವಶ್ಯ.
ಬಡ್ತಿಗೆ ತಕ್ಕನಾದ ವಿದ್ಯಾರ್ಹತೆ ಆ
ಅಧಿಕಾರಿಗಿದೆಯೇ ಅಥವಾ ತನ್ನ ಕಾರ್ಯಕ್ಕೆ ಅಗತ್ಯವಾಗಿರುವ ತರಬೇತಿ
ಪಡೆದಿದ್ದಾನೆಯೇ ಎಂಬ ಮಾನದಂಡದ ಮೇಲೆ ಉದ್ಯೋಗಿಯೊಬ್ಬನಿಗೆ ಬಡ್ತಿ ನೀಡಬೇಕು
ಎಂಬ ಪ್ರಮುಖ ಹಾಗೂ ಕ್ರಾಂತಿಕಾರಕ ಸಲಹೆಯನ್ನೂ ಸರ್ಕಾರ ಕಡೆಗಣಿಸಿತು.
ಅಸಮರ್ಥ ಅಥವಾ
'ಇದ್ದೂ
ಇಲ್ಲದಂತಿರುವ'
ಉದ್ಯೋಗಿಗಳಿಗೆ 'ಗುಡ್
ಬೈ'
ಹೇಳಬೇಕು ಅಥವಾ ಸ್ವಯಂ ನಿವೃತ್ತಿ ಹೊಂದುವಂತೆ ಸೂಚಿಸಬೇಕು.
ಅಲ್ಲದೆ ಖಾಸಗಿ ವಲಯದ ಪಾತ್ರ ಹೆಚ್ಚಿಸುವ ಮೂಲಕ
ಸಿಬ್ಬಂದಿ ಸಂಖ್ಯೆಯನ್ನು ಗಣನೀಯವಾಗಿ ಇಳಿಸಬಹುದು.
ಆದರೆ ಸರ್ಕಾರಕ್ಕೆ ಇದನ್ನೆಲ್ಲಾ ಗಮನಿಸಲು ಸಮಯವೇ
ಇರಲಿಲ್ಲ!
ನೌಕರರ ಗುತ್ತಿಗೆಯ ವಿಷಯದಲ್ಲಿ ಸರ್ಕಾರ ಖಾಸಗೀ
ಕಂಪನಿಗಳನ್ನು ನೋಡಿ ಕಲಿಯುವಂಥದ್ದು ಬೇಕಾದಷ್ಟಿದೆ.
ಹೆಚ್ಚು ಸಮರ್ಥ,
ದಕ್ಷ ಹಾಗೂ ಉತ್ಪಾದಕ ಶಕ್ತಿ ಉಳ್ಳ ಸಿಬ್ಬಂದಿ
ವರ್ಗವನ್ನು ಆಯ್ಕೆ ಮಾಡಬೇಕು.
ವ್ಯವಸ್ಥೆಯನ್ನು ಹೆಚ್ಚು ವೃತ್ತಿಪರಗೊಳಿಸಲು ಹಾಗೂ
ಉತ್ಪಾದಕ ಶಕ್ತಿ ಹೆಚ್ಚಿಸಲು ಹೆಚ್ಚಿನ ವೇತನ ನೀಡುವ ಬದಲಿಗೆ
ಉತ್ತರದಾಯಿತ್ವವನ್ನು ಹೆಚ್ಚಿಸುವತ್ತ ಸರ್ಕಾರ ಗಮನಹರಿಸಬೇಕು.
ಷೇರು ಮಾರುಕಟ್ಟೆ ಆಧಾರಿತ ವೇತನ ಪದ್ಧತಿ ಹೆಚ್ಚು
ಪರಿಣಾಮಕಾರಿ ಹಾಗೂ ಪ್ರತಿಭಾವಂತ ಉದ್ಯೋಗಿಗಳನ್ನು ಆಕರ್ಷಿಸುತ್ತದೆ
ಎಂಬುದರಲ್ಲಿ ಅನುಮಾನವೇ ಇಲ್ಲ.
'ಭಾರಿ ತಿಳುವಳಿಕೆ'
ಹೊಂದಿರುವ ನಮ್ಮ ನೀತಿ ಪಾಲಕರು ಈಗಿರುವ ವ್ಯವಸ್ಥೆಯನ್ನು ಸುಧಾರಿಸುವ ಬದಲಿಗೆ
ಹಣಕಾಸಿನ ವಿಚಾರದತ್ತಲೇ ಹೆಚ್ಚಿನ ಗಮನ ಹರಿಸಿ ತೆರೆದಿದ್ದ ಅದೃಷ್ಟದ
ಬಾಗಿಲನ್ನು ಕೈಯಾರೆ ಮುಚ್ಚಿದ್ದಾರೆ.
ವೃತ್ತಿಪರತೆ ಹಾಗೂ ಪ್ರಬಲ ಸ್ಪರ್ಧಾತ್ಮಕತೆಯ
ಗಟ್ಟಿ ತಳಪಾಯವಿಲ್ಲದಿದ್ದರೆ ವೇತನ ಹೆಚ್ಚಳ ಎಂಬ ಗಿಮಿಕ್ ಖಂಡಿತವಾಗಿಯೂ
ನೆಲಕಚ್ಚುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಅದರಿಂದ ವೇತನ ಹೆಚ್ಚಳ ಹಾಗೂ ಉತ್ಪಾದಕತೆಯ
ಅನುಪಾತ ತಾಳೆಯಾಗುವುದೂ ಅಸಾಧ್ಯ.
ಐಐಪಿಎಂ
'ಥಿಂಕ್ ಟ್ಯಾಂಕ್'
ಸ್ರೇ ಅಗರ್‌ವಾಲ್
|