
ಕಳೆದ ವರ್ಷ
'ಸಿಎನ್‌ಎನ್
ಐಬಿಎನ್'
ಸುದ್ದಿವಾಹಿನಿಯಿಂದ 'ಅತೀ
ಜನಪ್ರಿಯ ಮಲಯಾಳಿ'
ಎಂಬ ಬಿರುದು ಪಡೆದ ಅದ್ಭುತ ನಟ ಮೋಹನ್‌ಲಾಲ್.
'ಕಾಲಾಪಾನಿ'
ಚಿತ್ರದಲ್ಲಿ ನೀವು ನಿಜವಾಗೂ ಅಮರೀಶ್ ಪುರಿ ಅವರ ಬೂಟ್‌ನ್ನು
ನೆಕ್ಕಿದ್ದೀರೇನು?
ಎಂದು 'ರೀಡರ್ಸ್
ಡೈಜೆಸ್ಟ್'
ಪತ್ರಿಕೆ ಒಂದು ಬಾರಿ ಅವರನ್ನು ಪ್ರಶ್ನಿಸಿತ್ತು.
"ಹೌದು,
ನಾನು ಅವರ ಬೂಟು ನೆಕ್ಕಿರುವೆ"
ಎನ್ನುವುದು ಈ ನಟನ ಅಚಲ ಉತ್ತರವಾಗಿತ್ತು.
ಹೇಳಿದ ಮಾತನ್ನು ಮಾಡಿ ತೋರಿಸುವ ವ್ಯಕ್ತಿ ಆತ.
'ಸ್ಟಾರ್ಟ್...
ಕೆಮರಾ...
ಆಕ್ಷನ್'
ಎನ್ನುವ ವಾಕ್ಯ ಕೇಳಿದ್ದೇ ತಡ ಯಾವುದೋ ಅದ್ಭುತ ಶಕ್ತಿಯೊಂದರ
ಆವಾಹನೆಯಾದಂತಾಗುತ್ತದೆ ಎಂದು ಮೋಹನ್‌ಲಾಲ್ ಅನೇಕ ಬಾರಿ ಹೇಳಿದ್ದಾರೆ.
"ಈ ವಾಕ್ಯ ಕೇಳಿದ ಕ್ಷಣದಲ್ಲಿ ಯಾವುದೋ ಅನೂಹ್ಯ
ಶಕ್ತಿ ನನ್ನನ್ನು ಆವರಿಸಿಬಿಡುತ್ತದೆ.
ಮುಂದಿನ ಕೆಲಸಗಳೆಲ್ಲ ನನ್ನಲ್ಲಿರುವ ಆ ಶಕ್ತಿಯೇ
ಮುಗಿಸಿಬಿಡುತ್ತದೆ.
ಆ ಶಕ್ತಿಯ ಆದೇಶವನ್ನು ಮೀರಿ ಏನನ್ನೂ ಹೇಳುವ ಸ್ಥಿತಿಯಲ್ಲಿ
ನಾನು ಇರುವುದಿಲ್ಲ"
ಎನ್ನುತ್ತಾರೆ ಲಾಲ್.
ಪ್ರಸ್ತುತ ಮೋಹನ್‌ಲಾಲ್ ಅವರ ನಟನಾ ಶಕ್ತಿಯ
ಹರವು ದಕ್ಷಿಣ ಭಾರತೀಯ ಚಿತ್ರರಂಗದ ಮಿತಿಯನ್ನು ಮೀರಿ ಬೆಳೆಯುತ್ತಿದೆ.
ಮಣಿರತ್ನಂ ಅವರು ಈ ಹಿಂದೆ ದ್ರಾವಿಡ ರಾಜಕೀಯ
ಇತಿಹಾಸ ಕುರಿತ 'ಇರುವರ್'
ನಿರ್ದೇಶಿಸಿದ್ದರು.
ಆಗ ಎಂಜಿಆರ್ ಅವರ ಪಾತ್ರವನ್ನು ಯಾರಿಗೆ ನೀಡಬೇಕು ಎನ್ನುವ
ಪ್ರಶ್ನೆ ಎದ್ದಿತ್ತು.
ತಮಿಳುನಾಡು ಜನಜೀವನ ಮತ್ತು ರಾಜಕೀಯದ ದಂತಕಥೆಯಾಗಿರುವ
ವ್ಯಕ್ತಿಯನ್ನು ದೃಶ್ಯರೂಪಕ್ಕೆ ತರಬಲ್ಲ ಸಮರ್ಥ ನಟನನ್ನು ಅರಸುವಾಗ ಮೋಹನ್‌ಲಾಲ್
ಅವರನ್ನು ಹೊರತು ಪಡಿಸಿ ಎರಡನೇ ಆಯ್ಕೆಯ ಬಗ್ಗೆ ಅವರು ಯೋಚಿಸಿರಲೇ ಇಲ್ಲ.
ತಮಿಳುನಾಡಿನ ಅತ್ಯಂತ ಪ್ರೀತಿಪಾತ್ರ
ರಾಜಕಾರಣಿ-ನಟನಾಗಿ
ಮೋಹನ್‌ಲಾಲ್ ಅವರು ಅದ್ಭುತ ಅಭಿನಯ ನೀಡುವಾಗ ಅವರಿಗೆ ಸಾಥ್ ನೀಡಿದವರು ತಮ್ಮ
ನಟನಾ ಜೀವನದ ಆರಂಭ ಹಂತದಲ್ಲಿದ್ದ ನಟಿ ಐಶ್ವರ್ಯಾ ರೈ.
ಹಾಗೆಯೇ
'ಕಂಪನಿ'
ಚಿತ್ರದ ಮೃದು ಪೊಲೀಸ್ ಅಧಿಕಾರಿಯಾಗಿ ಅವರ ಶ್ರೇಷ್ಠ ಅಭಿನಯ ಭಾಷೆಯ
ಮಿತಿಯನ್ನು ಮೀರಿ ಬೆಳೆದ ಮೋಹನ್‌ಲಾಲ್ ಅವರನ್ನು ಪರಿಚಯಿಸಿತ್ತು.
'ಭಾರತೀಯ
ಸಿನಿಮಾ ರಂಗದ ಪ್ರತಿಭಾವಂತ ನಟರಲ್ಲಿ ಮೋಹನ್‌ಲಾಲ್ ಅವರೂ ಒಬ್ಬರು'
ಎಂದು ಪ್ರಶಂಸಿಸಿರುವ ಬಿಗ್ ಬಿ ಅಮಿತಾಬ್ ಬಚ್ಚನ್ ಅವರೂ ಲಾಲ್ ಅಭಿಮಾನಿ
ವೃಂದದಲ್ಲಿ ಒಬ್ಬರು! "ಲಾಲ್
ಅವರು ಸಹಜ ನಟ.
ಅವರ ಹಾಗೆ ನೈಜ ಅಭಿನಯ ಪ್ರದರ್ಶಿಸುವ ನಟರು
ಬೆರಳೆಣಿಕೆಯಷ್ಟೇ.
ಅವರ ಅಭಿನಯದಲ್ಲಿ ಅದೇನೋ ಸರಳತೆ ಇದೆ.
ಕಣ್ಣು ಹುಬ್ಬುಗಳನ್ನು ಅತಿಯಾಗಿ ಏರಿಸುವ ಅಥವಾ
ರಕ್ತ ಕೆಂಪು ಕಣ್ಣುಗಳು,
ಭಾವಾತಿರೇಕಗಳಿಲ್ಲ.
ಇಂತಹ ಅದ್ಭುತ ಅಭಿನಯ ಇನ್ಯಾವ ನಟನಲ್ಲೂ ನಾನು
ಕಂಡಿಲ್ಲ"
ಎಂದು ಅಮಿತಾಬ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಅಂತರ್ ರಾಷ್ಟ್ರೀಯ ಮನ್ನಣೆ ಪಡೆದಿರುವ
ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರೂ ಅಮಿತಾಬ್ ಬಚ್ಚನ್ ಮಾತುಗಳನ್ನು
ಬೆಂಬಲಿಸುತ್ತಾರೆ. "ಅವರು
ಪ್ರಶಸ್ತಿ ಪಡೆದದ್ದು ಕಮರ್ಶಿಯಲ್ ಚಿತ್ರಗಳಿಗೆ.
ತಮ್ಮ ಅಭಿನಯವನ್ನು ಸಾಕ್ಷೀಕರಿಸಲು ಪ್ರಶಸ್ತಿಗಾಗಿ
ನಿರ್ಮಿಸುವ ಚಿತ್ರಗಳು ಅಥವಾ ಕಲಾತ್ಮಕ ಚಿತ್ರಗಳಲ್ಲಿ ನಟಿಸುವ ಅಗತ್ಯ ಅವರಿಗೆ
ಬರಲಿಲ್ಲ"
ಎನ್ನುತ್ತಾರೆ ಅಡೂರು.
'ಮಲಯಾಳಂನ
ಸೂಪರ್‌ಹಿಟ್ ಕಮರ್ಶಿಯಲ್ ಚಿತ್ರ
'ಕಿರೀದಂ'ನ
ಅಭಿನಯಕ್ಕಾಗಿ ವಿಶೇಷ ಜ್ಯೂರಿ ಸದಸ್ಯರ ಪ್ರಶಂಸೆಯ ರೂಪದಲ್ಲಿ ಮೊದಲ ಬಾರಿ
ರಾಷ್ಟ್ರೀಯ ಮನ್ನಣೆ ಪಡೆದಿದ್ದರು.
'ಅಬ್ದುಲ್ಲ'
ಮತ್ತು 'ವಾನಪ್ರಸ್ಥಂ'
ಚಿತ್ರದ ಅದ್ಭುತ ಅಭಿನಯಕ್ಕಾಗಿ ಅವರು ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ
ಪುರಸ್ಕೃತರಾಗಿದ್ದಾರೆ.
26 ವರ್ಷಗಳ
ಸುದೀರ್ಘ ಚಿತ್ರಜೀವನದಲ್ಲಿ ೭ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.
'ಇಬ್ಸೆನ್'ನಲ್ಲಿ
ಅಲ್ಬರ್ಟ್ ಸಾಮ್ಸನ್ ಮತ್ತು ಬಿಡುಗಡೆಗೆ ಸಿದ್ಧವಾಗಿರುವ ಜಪಾನೀ ಐತಿಹಾಸಿಕ
ಚಿತ್ರದಲ್ಲಿ ಜಾಕಿಚಾನ್ ಜೊತೆ ನಾಯರ್ ಸನ್ ಪಾತ್ರ ನಿರ್ವಹಿಸುತ್ತಿದ್ದೀರಿ.
ಅಲ್ಬರ್ಟ್ ಸಾಮ್ಸನ್ ನನ್ನ ವೃತ್ತಿ ಜೀವನದ
ಅಚ್ಚುಮೆಚ್ಚಿನ ಪಾತ್ರಗಳಲ್ಲಿ ಒಂದು.
ನನಗೆ ಇಬ್ಸೆನ್ ಹೀರೋ ಬಗ್ಗೆ ಅತೀವ ಆಸಕ್ತಿ ಇತ್ತು.
ಅಂತಹ ಶ್ರೇಷ್ಠ ವೀರನ ಪಾತ್ರ ನಿರ್ವಹಿಸುವ ಅವಕಾಶ
ಸಿಕ್ಕಿರುವುದು ಅದೃಷ್ಟ.
ನಾಯರ್ ಸನ್?
ನಾಯರ್ ಸನ್ ಜಪಾನ್‌ನ ಸ್ವಾತಂತ್ರ್ಯ
ಹೋರಾಟಗಾರ.
ಅವರ ಮೂಲ ಕೇರಳದ ತಿರುವನಂತಪುರ.
ಭಾರತದ ಸ್ವಾತಂತ್ರ್ಯ ಹೋರಾಟದ ನಿಮಿತ್ತ ಅವರು
ಜಪಾನ್‌ಗೆ ತೆರಳಿದ್ದರು ಮತ್ತು ಜಪಾನ್ ಚಳವಳಿಯಲ್ಲಿ ಭಾಗವಹಿಸಿದ್ದರು.
ಅವರ ಕುಟುಂಬದವರು ಇಂದಿಗೂ ಜಪಾನ್‌ನಲ್ಲಿದ್ದಾರೆ.
ಅವರ ಜೀವನ ಚರಿತ್ರೆಯೇ ಸಿನಿಮಾವಾಗುತ್ತಿದೆ.
ಅಲ್ಬರ್ಟ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರ
ಇಂಡೋ-
ಜಪಾನ್ ಯೋಜನೆ.
ಜಾಕಿಚಾನ್ ಅವರು ಮುಖ್ಯ ಪಾತ್ರದಲ್ಲಿರುತ್ತಾರೆ.
ಎ.ಆರ್.
ರೆಹಮಾನ್ ಸಂಗೀತ ನೀಡಿದ್ದಾರೆ.
ಬಿಡುಗಡೆಗೆ ಸಿದ್ಧವಾಗಿರುವ ಈ ಚಿತ್ರವನ್ನು ಜಪಾನ್
ಮತ್ತು ಮಂಗೋಲಿಯಾದಲ್ಲಿ ಚಿತ್ರೀಕರಿಸಲಾಗಿದೆ.
ಈ ನಿಬಿಡ ಕಾರ್ಯಪಟ್ಟಿಗಳನ್ನು ಹೇಗೆ ನಿಭಾಯಿಸುವಿರಿ.
ಹೊರೆ ಎನಿಸಿಲ್ಲವೆ?
ಹೊರೆ ಎನಿಸುವಷ್ಟು ಯೋಜನೆಗಳನ್ನು
ಹೊತ್ತುಕೊಂಡು ಅದನ್ನು ಪೂರೈಸುವುದೇ ನನ್ನ ಕನಸು.
ಆದರೆ ನನಗೆ ಅಂತಹ ಅವಕಾಶವೇ ಸಿಕ್ಕಿಲ್ಲ.
ಜನರ ಜೊತೆ ಬೆರೆಯುವುದು ಮತ್ತು ಅವರ ಸಂಗತಿಗಳನ್ನು
ಕೇಳುವುದೆಂದರೆ ನನಗಿಷ್ಟ.
ಆದರೆ ದುರದೃಷ್ಟವಶಾತ್ ಈಗ ಪುಸ್ತಕಗಳು ಮತ್ತು
ಬರಹಗಳ ಜೊತೆ ಪ್ರವಾಸ ಮಾಡುವುದೇ ಆಗಿದೆ.
ಕೆಲ ತಿಂಗಳ ಹಿಂದೆ ನಾನು ಕೈಲಾಸ ಪರ್ವತಕ್ಕೆ
ಪ್ರವಾಸ ಹೋಗಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದೆ.
ಆದರೆ ಅನಿರೀಕ್ಷಿತ ಕೆಲಸ ಬಂತು,
ಹೋಗಲಾಗಲಿಲ್ಲ.
ಮರೆಯಲಾಗದ ಪ್ರವಾಸ?
'ಕಾಲಾಪಾನಿ'
ಚಿತ್ರಕ್ಕಾಗಿ ಅಂಡಮಾನ್‌ಗೆ ಪ್ರವಾಸ ಹೊರಟದ್ದು.
ಅಲ್ಲಿ ನಾನು ಜಗತ್ತಿನ ಅತೀ ಪುಟ್ಟ ಜನಾಂಗ
'ಓಂಜಸ್'
ಸದಸ್ಯರನ್ನು ಭೇಟಿಯಾಗಿದ್ದೆ.
ಸಮುದ್ರದ ಮೂಲಕ ಏಳು ಗಂಟೆಗಳ ಕಾಲ ಪ್ರಯಾಣ ಮತ್ತು
ತೀರದಿಂದ ಹತ್ತು ಕಿ.ಮೀ.
ನಡೆದರೆ ಓಂಜ್‌ಗಳ ತಾಣ ಸಿಗುತ್ತದೆ.
ನಾವು ಅಲ್ಲಿಗೆ ತಲುಪಿದಾಗ
253 ಜನಸಂಖ್ಯೆ
ಇದ್ದ ಮೂಲನಿವಾಸಿಗಳು ನವಜಾತ ಶಿಶುವಿನ ಹುಟ್ಟು ಹಬ್ಬದ
ಸಂಭ್ರಮಾಚರಣೆಯಲ್ಲಿದ್ದರು.
ಜಗತ್ತಿನ ಅತಿ ಪುಟ್ಟ ಜನಾಂಗದ ಜೊತೆಗಿರುವುದು
ಮತ್ತು ಅವರ ಜೊತೆ ನಟಿಸಿದ ಆ ಕ್ಷಣಗಳು ನಿಜವಾಗೂ ಅದ್ಭುತ ಅನುಭವ.
ನನ್ನ ಜೊತೆ ನಟಿಸಿದ್ದ ಕಾಕ ಎನ್ನುವ ಓಂಜ್
ಮಹಿಳೆಯ ಜೊತೆಗಿನ ಅನುಭವ ಮರೆಯಲು ಸಾಧ್ಯವೇ ಇಲ್ಲ.
ಕಾಕ ನನ್ನ ಮುಖದ ಮೇಲೆ ಬಡಿಯುವ ಒಂದು ಸನ್ನಿವೇಶ
ಆ ಚಿತ್ರದಲ್ಲಿದೆ.
ಕಾಕಗೆ ನಟನೆ ಗೊತ್ತಿಲ್ಲ.
ಹೀಗಾಗಿ ಆಕೆ ನನ್ನ ಕೆನ್ನೆ ಮೇಲೆ ಬಲವಾಗೇ
ಹೊಡೆದಿದ್ದಳು.
ವಿನಾಶದಂಚಿನಲ್ಲಿರುವ ಜನಾಂಗವೊಂದರ ಮಹಿಳೆಯಿಂದ ಏಟು ತಿಂದ
ಮೊದಲ ನಟ ಎಂಬ ನನ್ನ ದಾಖಲೆಯನ್ನು ಜಗತ್ತಿನ ಇನ್ಯಾವ ನಟನೂ ಮುರಿಯಲು
ಸಾಧ್ಯವಿಲ್ಲ!
'ಪ್ರೇಮ'ಕ್ಕೆ
ಸಂಬಂಧಿಸಿದಂತೆ ನೀವು ಓಶೋ ಅಭಿಮಾನಿಯೆ?
ಪ್ರೇಮ ಎಂದರೆ ಸಮರ್ಪಣೆ ಎನ್ನುವುದು ನನ್ನ
ವಿಶ್ವಾಸ.
ನಿಜವಾದ ಪ್ರೀತಿಯಲ್ಲಿ ಆಕಾಂಕ್ಷೆಗಳಿರುವುದಿಲ್ಲ.
ಪ್ರೀತಿಯಲ್ಲಿ ಷರತ್ತುಗಳಿರಬಾರದು.
ಆದರೆ ಬೇಷರತ್ ಪ್ರೇಮ ತುಂಬಾ ಕಷ್ಟಸಾಧ್ಯ.
ನಾನು ಅಂತಹ ಪ್ರೀತಿಯನ್ನು ಗೌರವಿಸುತ್ತೇನೆ.
ಪ್ರಸ್ತುತ
'ಪ್ರೇಮ'
ಎನ್ನುವ ಶಬ್ದವೇ ಕ್ಲೀಷೆ.
ಒಂದು ಕಾಲದಲ್ಲಿ ಭಾವನೆಗಳ ಅಭಿವ್ಯಕ್ತಿಯಾಗಿದ್ದ
'ನಾನು
ನಿನ್ನನ್ನು ಪ್ರೀತಿಸುತ್ತೇನೆ'
ಎನ್ನುವ ವಾಕ್ಯ ಈಗ ಹಳಸಲಾಗಿದೆ.
'ಪ್ರೀತಿ'
ಈಗ ಅತೀ ಅಪನಂಬಿಕೆಯ ಭಾವನೆಯಾಗಿ ಹೋಗಿದೆ.
ಗಾಸಿಪ್‌ಗಳು ಇಂದಿಗೂ ನಿಮಗೆ ಕಿರಿಕಿರಿ
ಎನಿಸುತ್ತವೆಯೆ?
ನಾನು ಕಳೆದ
26 ವರ್ಷಗಳಿಂದ
ಚಿತ್ರರಂಗದಲ್ಲಿದ್ದೇನೆ.
ಹೀಗಾಗಿ ಗಾಸಿಪ್‌ಗಳು ತಮ್ಮ ಮೊನಚನ್ನು ಕಳೆದುಕೊಂಡಿರಬಹುದು.
ನನ್ನ ಜೀವನದ ಹಾದಿಯಲ್ಲಿ ಇನ್ನೇನು ರಹಸ್ಯಗಳು
ಉಳಿದಿಲ್ಲ.
ನನ್ನ ಬಗ್ಗೆ ಇನ್ನೇನಾದರೂ ಬರೆಯಬೇಕೆಂದರೆ ಮಿತಿ ಮೀರಿದ
ಕಲ್ಪನೆಗಳನ್ನೇ ಮಾಡಬೇಕು.
ಗಾಸಿಪ್‌ಗಳನ್ನು ಸಹಿಸಿ ಬದುಕುವುದನ್ನು
ಕಲಿತಿದ್ದೇನೆ.
ಜೀವನ ಸಿದ್ಧಾಂತವನ್ನು ಹಂಚಿಕೊಳ್ಳುವಿರಾ?
ಜೀವನ ಎಂದರೆ ಸಂಭ್ರಮಾಚರಣೆ.
ತಮಿಳುನಾಡಿನಲ್ಲಿ ಮರಣವನ್ನೂ ನೃತ್ಯ,
ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ
ಸಂಭ್ರಮಾಚರಣೆಯಿಂದ ಸ್ವಾಗತಿಸಲಾಗುತ್ತದೆ.
ನಮ್ಮಲ್ಲಿ ಸಂಭ್ರಮಾಚರಣೆಯ ಸಂಸ್ಕೃತಿ ಇದೆ.
ಹೀಗಾಗಿ ಜೀವನದಲ್ಲಿ ಪ್ರತಿಯೊಂದನ್ನೂ
ಸಂಭ್ರಮದಿಂದ ಕಳೆದು ಸಾಧ್ಯವಾದಷ್ಟು ಸಂತೋಷವನ್ನು ಸೂರೆ
ಮಾಡಿಕೊಳ್ಳಬೇಕೆಂಬುದೇ ನನ್ನ ಸಿದ್ಧಾಂತ.
ನೀವು ಸಂತೋಷವಾಗಿದ್ದೀರೇನು?
ಹೌದು.
ನಿಮ್ಮ ಮುಂದಿನ ಯೋಜನೆ ಏನು ಎಂದು ಕೇಳಿದರೆ?
ನಾನು ಈ ಕ್ಷಣದ ಬಗ್ಗೆ ಮಾತ್ರ ಚಿಂತಿಸುತ್ತೇನೆ.
ಪ್ರತಿದಿನವನ್ನು ಹೇಗೆ ಬರುತ್ತದೆಯೋ ಹಾಗೆಯೇ
ಸ್ವೀಕರಿಸುತ್ತೇನೆ.
ಅದು ಮೋಹನ್‌ಲಾಲ್ ಸಿದ್ಧಾಂತ.
ಜೀವನದ ಪ್ರತಿ ಕ್ಷಣವನ್ನು ಬಂದ ಹಾಗೇ
ಸ್ವೀಕರಿಸುವುದು ಮತ್ತು ಸಂತೋಷದಿಂದಿರುವುದು.
ಜೀವನವನ್ನು ಆಸ್ವಾದಿಸುತ್ತಾ,
ಎಲ್ಲರೊಂದಿಗೆ ಪ್ರೀತಿಯಿಂದ ಬದುಕುವುದು.
ಅವರಲ್ಲಿ ನಿಮಗೆ ಓಶೋ ಅಭಿಮಾನಿ ಕಂಡರೆ?
ಹಾಗಿದ್ದಲ್ಲಿ ಅವರನ್ನು ಹಾಗೆಯೆ ಕಲ್ಪಿಸಿಕೊಂಡು
ಆನಂದಿಸಿ.
ಟಿಎಸ್‌ಐ
ಕೆ.ಪಿ. ಜಯಕುಮಾರ್