ಇದು ನಮ್ಮ ವಿಶೇಷ ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

Letters- The Sunday Indian - Kannada

ಸಬಲೀಕರಣಕ್ಕೆ ಸಹಕರಿಸಿ

'ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?' ಎನ್ನುವ ಪ್ರಶ್ನೆಯತ್ತ ದೃಷ್ಟಿ ಹರಿಸುವ ಕಾಲ ಬಂದಿದೆ. ಮೇಲ್ನೋಟಕ್ಕೆ ಕಾಶ್ಮೀರಿಗಳೆಲ್ಲರೂ ಭಾರತೀಯರನ್ನು ತೊಲಗಲು ಹೇಳುತ್ತಿದ್ದಾರೆ ಮತ್ತು ಸ್ವಾತಂತ್ರ್ಯವನ್ನು ಬಯಸುತ್ತಿದ್ದಾರೆ ಎಂದೇ ತೋರುತ್ತದೆ. ಆದರೆ ಈ ಧ್ವನಿಯೆತ್ತಿದವರು ಕೆಲವೇ ಕಾಶ್ಮೀರಿಗಳು ಎಲ್ಲರೂ ಅಲ್ಲ ಎನ್ನುವುದನ್ನು ನೆನಪಿಡಬೇಕು. ಸರಾಸರಿ ಕಾಶ್ಮೀರಿಗಳು ಶಾಂತಿ ಮತ್ತು ಉತ್ತಮ ಜೀವನ ಮಟ್ಟ ಬಯಸುತ್ತಿದ್ದಾರೆ. ಕಾಶ್ಮೀರದ ಜನಸಾಮಾನ್ಯರು ಮನೆಗಳಿಂದ ಹೊರ ಬಂದು ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರ ವಿರುದ್ಧ ಕೂಗುವ ಸಾಮರ್ಥ್ಯ ಪಡೆದಿಲ್ಲ. 20 ವರ್ಷಗಳಿಗೂ ಅಧಿಕ ಅವಧಿಯವರೆಗೆ ಕಾಶ್ಮೀರ ಬಾಹ್ಯಶಕ್ತಿಗಳ ಪ್ರಚೋದನೆಯಲ್ಲಿ ನಲುಗಿತ್ತು. ಸರ್ಕಾರವೂ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಸ್ಥಳೀಯ ಸರ್ಕಾರದ ಸಬಲೀಕರಣಕ್ಕೆ ಸಹಕರಿಸಬೇಕು. ಜಮ್ಮು ಮತ್ತು ಲಡಾಖ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು. ಹಾಗೆ ಬಾಹ್ಯ ಶಕ್ತಿಗಳ ಪ್ರಚೋದನೆಗೆ ನೀರೆರೆದರೆ ಅರುಣಾಚಲ ಪ್ರದೇಶದ ಒಂದು ಭಾಗ ಬೇರೆ ದೇಶಕ್ಕೆ ಮತ್ತು ಅಸ್ಸಾಂನ ಒಂದು ಭಾಗ ಬಾಂಗ್ಲಾದೇಶಕ್ಕೆ ಹೋಗಬಹುದು. ಹಾಗೆಯೇ ದೇಶದ ಎಲ್ಲಾ ರಾಜ್ಯಗಳ ಸೇರ್ಪಡೆಯನ್ನೂ ಮತ್ತೆ ಪರಿಶೀಲಿಸಬೇಕಾದೀತು. ನಮ್ಮ ನೆಲವನ್ನು ವಾಪಾಸು ಪಡೆಯಲು ವಿಶ್ವಸಂಸ್ಥೆಗೆ ಹೋದದ್ದೇ ಮೊದಲ ತಪ್ಪು. ಬಾರಾಮುಲ್ಲದಲ್ಲಿ ಸನ್ಯಾಸಿನಿಯರ ಮೇಲೆ ಆಕ್ರಮಣ ಮಾಡಿದ್ದು ಬಾಹ್ಯ ಶಕ್ತಿಗಳು ಎನ್ನುವ ಸತ್ಯವನ್ನು ಕಾಶ್ಮೀರಿಗಳು ಅರಿಯುತ್ತಾರೆ ಎನ್ನುವ ನಂಬಿಕೆ ನಮ್ಮದಾಗಿತ್ತು. ಪಂಡಿತರನ್ನು ಅವರ ಮನೆಗಳಿಂದ ಓಡಿಸಿದಾಗಲೂ ನಾವು ಸೊಲ್ಲೆತ್ತಿರಲಿಲ್ಲ. ಆಕ್ರಮಣಕಾರರು ತಮಗೆ ಸಿಕ್ಕ ಜಾಗದಲ್ಲಿ ನೆಲೆಯೂರಿದರು. ಒಂದು ಭಾಗವನ್ನು ತಮ್ಮ ದೇಶಕ್ಕೆ ಸೇರಿಸಿಕೊಂಡರು. ಉಳಿದ ಭಾಗವನ್ನು ಚೀನಾಗೆ ಬಿಟ್ಟುಕೊಟ್ಟರು. ಕಾಶ್ಮೀರಿಗಳು ಇದಕ್ಕೆ ಅಡ್ಡಿ ಪಡಿಸಲಿಲ್ಲ. ಅವರ ಭೂಮಿಯನ್ನು ಭಯೋತ್ಪಾದಕರು ಆಕ್ರಮಿಸಿ ಸಮರ ಹೂಡಿದಾಗಲೂ ಸುಮ್ಮನಿದ್ದರು. ಯಾವುದೇ ಭಾರತೀಯನೂ ಸಾವಿರಾರು ಸೈನಿಕರು ಬಲಿದಾನದ ಮೂಲಕ ಮಾಡಿರುವ ಪ್ರಯತ್ನವನ್ನು ನೀರ ಮೇಲೆ ಹೋಮವಾಗಲು ಬಿಡಲಾರರು.

ಜಿ. ವೆಂಕಟರಾಮನ್
ಮುಂಬಯಿ

ಕಾಳಜಿ ಅಗತ್ಯ

'ಅಭಿನವ್‌ಗೆ ಸನ್ಮಾನ ಆದರೂ ಭಾರತಕ್ಕೆ ಅವಮಾನ' ಲೇಖನ ಬಹಳ ವಿಶೇಷವಾಗಿತ್ತು. ಅಭಿನವ್ ಬಿಂದ್ರಾ ಅವರದು ವೈಯಕ್ತಿಕ ಸಾಧನೆ. ಇದರಲ್ಲಿ ದೇಶದ ಹಾಗೂ ಸರ್ಕಾರದ ಸಹಾಯ ಸ್ವಲ್ಪವೂ ಇಲ್ಲ. ಭಾರತದಲ್ಲಿ ಕ್ರೀಡೆ ಎಂದರೆ ಕ್ರಿಕೆಟ್. ಒಲಿಂಪಿಕ್ಸ್‌ಗೆ ಹೋದ ಭಾರತದ ಕ್ರೀಡಾ ಪಟುಗಳಲ್ಲಿ ಪದಕದ ನಿರೀಕ್ಷೆ ಇದ್ದದ್ದು ಟೆನಿಸ್, ಬಾಕ್ಸಿಂಗ್, ಶೂಟಿಂಗ್‌ಗಳಲ್ಲಿ. ಕಳೆದ ಬಾರಿ ಭಾರತಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದ ರಾಜ್ಯವರ್ಧನ್ ರಾಥೋಡ್ ಮೇಲೆ ಭರವಸೆ ಇತ್ತು. ಆ ನಿರೀಕ್ಷೆಗಳೆಲ್ಲ ತಲೆ ಕೆಳಗಾಗಿ ಶೂಟಿಂಗ್‌ನಲ್ಲಿ ಬಿಂದ್ರಾ ಸ್ವರ್ಣ ಗೆದ್ದರು. ಪ್ರತಿಬಾರಿಯೂ ಚೀನಾ, ಅಮೆರಿಕ, ಆಸ್ಟ್ರೇಲಿಯ, ಜಪಾನ್ ಹಾಗೂ ಕೆಲ ಪುಟ್ಟ ರಾಷ್ಟ್ರಗಳು ಸಾಧನೆ ಮೆರೆಯುತ್ತಲೇ ಇವೆ. ನಮ್ಮಲ್ಲೂ ಅಭಿನವ್ ಅವರಂತಹ ಬಹಳಷ್ಟು ಪ್ರತಿಭಾವಂತರಿದ್ದಾರೆ. ಆದರೆ ತರಬೇತಿ ಪಡೆಯಲೂ ಸಾಧ್ಯವಿಲ್ಲದ ಅಸಹಾಯಕ ಸ್ಥಿತಿ ಅವರದು. ಸರ್ಕಾರ ಇತ್ತ ಗಮನ ಹರಿಸಬೇಕಾಗಿರುವುದು ಇಂದಿನ ತುರ್ತು.

ಅಭಿನಯ ಶಂಕರ್
ನಂದಿಪುರ, ಹಾಸನ ಜಿಲ್ಲೆ

ಸಹಾಯ ಹಸ್ತ ಅನಿವಾರ್ಯ

Letters- The Sunday Indian - Kannada

ಅಭಿನವ್ ಕುರಿತ ಲೇಖನ ಒಪ್ಪಲೇ ಬೇಕಾದ ಸಂಗತಿ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ತಮ್ಮ ಸ್ಥಾನ ಭದ್ರ ಪಡಿಸಿಕೊಳ್ಳುವುದೇ ಮುಖ್ಯ. ಹಾಗಿರುವಾಗ ಪ್ರೊತ್ಸಾಹ ಅಥವಾ ಸಹಾಯ ಹಸ್ತ ನೀಡುವ ನಿರೀಕ್ಷೆ ದೂರವೇ ಉಳಿಯಿತು ಬಿಡಿ. ಭಾರತದ ಕ್ರೀಡಾಲೋಕದ ಕಪ್ಪು ಪರದೆಗೆ ಸ್ವರ್ಣದ ರೇಖೆ ಎಳೆದ ಅಭಿನವ್ ಬಿಂದ್ರಾ ಸಾಧನೆ ನಿಜಕ್ಕೂ ರೋಮಾಂಚನವನ್ನು ಉಂಟುಮಾಡಿದೆ. ಎಲೆ ಮರೆ ಕಾಯಿಯಂತಿರುವ ಇನ್ನೂ ಅನೇಕ ಕ್ರೀಡಾ ಪ್ರತಿಭೆಗಳು ಜಾತಕ ಪಕ್ಷಿಯಂತೆ ಅವಕಾಶಕ್ಕಾಗಿ ನಿರೀಕ್ಷಿಸುತ್ತಿದ್ದರೂ, ಸೂಕ್ತ ಸೌಕರ್ಯಗಳು ದೊರೆಯದೆ ಹಾಗೇ ಕಮರಿ ಹೋಗುತ್ತಿರುವುದು ವಿಷಾದನೀಯ. ಸರ್ಕಾರವೇನೋ ರಾಷ್ಟ್ರದ ಕ್ರೀಡಾಭಿವೃದ್ದಿಗೆ ಹಲವು ಯೋಜನೆಗಳನ್ನು ಪ್ರಕಟಿಸುತ್ತಲೇ ಇದೆ. ಆದರೆ ಕ್ರೀಡಾ ಸಂಸ್ಥೆಗಳು ಕಾಳಜಿ ವಹಿಸುತ್ತಿಲ್ಲ. ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಭಾರತ ಖ್ಯಾತಿ ಪಡೆಯಬೇಕಾದರೆ ಕ್ರೀಡಾರಂಗಕ್ಕೆ ಸಂಬಂಧ ಪಟ್ಟ ಪ್ರತಿಯೊಬ್ಬ ಅಧಿಕಾರಿಯೂ ಆತ್ಮ ವಿಮರ್ಶೆ ಮಾಡಿಕೊಂಡು ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಬೇಕು. ಯಾವುದೇ ಕ್ರೀಡೆಯಲ್ಲೂ ವಿವಾದ ಇಲ್ಲದ ಆಯ್ಕೆಗಳು ನಡೆಯುವುದೇ ಇಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಂತೂ ಹಾಗೆ ಉಳಿದಿದೆ.

ವೈ.ಎಂ. ಸಿದ್ದಲಿಂಗಸ್ವಾಮಿ
ರಾಯಚೂರು

ನಗ್ನ ಸತ್ಯ

'ಅಭಿನವ್ ಪದಕ ಸ್ವಂತ ಸಾಧನೆ, ಅದರಲ್ಲಿ ದೇಶದ ಪಾಲೇನೂ ಇಲ್ಲ' ಸಂಪಾದಕೀಯ (ಅರಿಂದಮ್ ಚೌಧುರಿ) ಭಾರತದ ಕಥೆ-ವ್ಯಥೆಯನ್ನು ಅರ್ಥಪೂರ್ಣವಾಗಿ ಮಂಡಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಭಾರತೀಯ ಕ್ರೀಡಾಪಟುಗಳು ತೋರಿದ ಅಶಿಸ್ತು, ಕ್ರೀಡಾಪಟುಗಳಿಗಿಂತ ಪುಕ್ಕಟೆ ಮನೋರಂಜನೆ ಪಡೆಯಲು ಬಂದ ಅಧಿಕಾರಿಗಳ ದಂಡು, ಮೋನಿಕಾದೇವಿಯ ಉದ್ದೀಪನ ಸೇವನೆ ಪ್ರಕರಣ, ಅರ್ಹತಾ ಸುತ್ತಿನಲ್ಲೇ ವಿಫಲವಾದ ಭಾರತೀಯ ಹಾಕಿತಂಡ ಎಲ್ಲವೂ ಭಾರತೀಯ ರಾಜಕಾರಣದ ಪ್ರತಿಫಲನದ ಕನ್ನಡಿಯಂತೆ ಕಂಡುಬಂದವು. ಇಷ್ಟೆಲ್ಲ ನ್ಯೂನತೆಗಳ ನಡುವೆ ಅಭಿನವ ಬಿಂದ್ರಾ ಭಾರತಕ್ಕೆ ಸ್ವರ್ಣ ಪದಕ ತಂದುಕೊಟ್ಟಿದ್ದಾರೆ. ಭಾರತೀಯ ಒಲಿಂಪಿಕ್ಸ್ ಇತಿಹಾಸದಲ್ಲೇ ಪ್ರಥಮ ವೈಯಕ್ತಿಕ ಪದಕ ಇದಾಗಿದೆ. ಬಿಂದ್ರ್ರಾ ತಮ್ಮ ಸ್ವಂತ ಹಣ- ಪರಿಶ್ರಮದಿಂದ ಗೆಲುವು ಪಡೆದಿದ್ದಾರೆ ಎಂಬುದು ನೂರು ಕೋಟಿ ಭಾರತೀಯರು ಒಪ್ಪಲೇ ಬೇಕಾದ ಮಾತು. ಇದಕ್ಕೆ ಮೊದಲೇ ಕ್ರೀಡೆಗಳ ಬಗ್ಗೆ ಕ್ರೀಡಾಪಟುಗಳ ಬಗ್ಗೆ ಆಸಕ್ತಿವಹಿಸಿದ್ದರೆ, ಇನ್ನೂ ಹಲವಾರು ಪದಕಗಳು ಭಾರತ ಮಾತೆಯ ಮಡಿಲಿಗೆ ಬೀಳುತ್ತಿದ್ದವು.

ಎಚ್. ಆನಂದ್ ಕುಮಾರ್
ಚಿತ್ರದುರ್ಗ

ಇನ್ನೂ ತಡವಾಗಿಲ್ಲ!

'ಅಬಿನವ್ ಪದಕ ಸ್ವಂತ ಸಾಧನೆ, ಅದರಲ್ಲಿ ದೇಶದ ಪಾಲೇನೂ ಇಲ್ಲ' ಚಿಂತನಾರ್ಹ ಸಂಪಾದಕೀಯ (ಅರಿಂದಮ್ ಚೌಧುರಿ). ಭಾರತೀಯ ಕ್ರೀಡಾಪಟುಗಳು ಪ್ರತಿಭಾವಂತರು. ಆದರೆ ಆ ಕ್ರೀಡಾಪಟುಗಳಿಗೆ ಪೂರಕ ಮೂಲಭೂತ ವ್ಯವಸ್ಥೆಗಳನ್ನು ಒದಗಿಸುವ ಜವಾಬ್ದಾರಿಯನ್ನು ಯಾರಾದರೂ ಹೊರಬೇಕಾದುದು ಅತ್ಯಗತ್ಯ ಒಂದೊಂದು ಕ್ರೀಡೆಯನ್ನು ಇಂತಹ ಒಬ್ಬೊಬ್ಬ ಉದ್ಯಮಿ, ಒಂದೊಂದು ಕಂಪನಿ ಆರ್ಥಿಕವಾಗಿ ಪೋಷಿಸಿ ಬೆಳೆಸುವ ಜವಾಬ್ದಾರಿ ಹೊರಬಾರದೇಕೆ? 2012 ಅಲ್ಲದಿದ್ದರೂ 2016ಕ್ಕೆ ಈಗಿಂದೀಗಲೇ ತಯಾರಿ ನಡೆಸಬಹುದಲ್ಲವೇ?

ಆತ್ರಾಡಿ ಸುರೇಶ್ ಹೆಗ್ಡೆ
ಇ-ಮೇಲ್ ಮೂಲಕ

ಅಭಿನಂದನೆ

ಅಭಿನವ್ ಕುರಿತ ಮುಖಪುಟದ ಲೇಖನ ಭಾರತೀಯ ಕ್ರೀಡಾ ಲೋಕದ ಆಳಕ್ಕಿಳಿದು ಅವಲೋಕಿಸಿದಂತೆಯೇ ಸಾಧಕನ ಸಾಧನೆಯನ್ನೂ ವಿಶ್ಲೇಷಿಸಿದೆ. ಒಲಿಂಪಿಕ್ಸ್ ಕ್ರೀಡೆಗಳ ಕುರಿತ ಭಾರತದ ಅಸಡ್ಡೆಯನ್ನು ವಿಶ್ಲೇಷಿಸಿದ ಲೇಖನ ನಿಜಕ್ಕೂ ಅತ್ಯಂತ ಅರ್ಥಪೂರ್ಣ! ವಸ್ತುನಿಷ್ಠ ವಿಮರ್ಶಾತ್ಮಕ ಲೇಖನ.

ಜಿ.ಕೆ. ನಾಗಲಿಂಗಪ್ಪ
ತುಮಕೂರು

ಸ್ವಾತಂತ್ರ್ಯ ಹೋರಾಟಗಾರರ ಕಥೆ-ವ್ಯಥೆ

62ನೇ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ 'ಹೀಗೊಂದು ಸ್ವಾತಂತ್ರ್ಯಗಾಥೆ' (ಕೆ. ರಾಘವ ಶರ್ಮ, ಸುನಿಲ್ ಕೆ. ಹೆಗ್ಡೆ) ಲೇಖನ ಸ್ವಾತಂತ್ಯ್ರ ಹೋರಾಟಗಾರರ ವ್ಯಥೆಯನ್ನು ಹೇಳಿದೆ. ನಮ್ಮ ಸರ್ಕಾರಗಳು ಸ್ವಾತಂತ್ರ ಹೋರಾಟಗಾರರ ಕುರಿತು ತೋರುವ ಕಾಳಜಿಗೆ ನಿದರ್ಶನವಿದು. ಈ ಹೋರಾಟಗಾರು ತಮ್ಮವರ ಹಿತ ಮರೆತು ದೇಶಕ್ಕಾಗಿ ಹೋರಾಡಿದ್ದಕ್ಕೆ ಸಿಕ್ಕ ಫಲ ಇದೇ ಏನು?

ಕೆ.ಪಿ. ಗಿರಿರಾಜ್
ಚಿತ್ರದುರ್ಗ

ವೈವಿಧ್ಯತೆಗೆ ಸಂಭ್ರಮಿಸಬೇಕು

ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬೇಕಾದ ಕಾರಣಗಳೆಲ್ಲ ಸಮಂಜಸವೆಂದು ಕಾಣಬಹುದು. ಆದರೆ ಪ್ರತ್ಯೇಕ 'ಮರಾಠಿ' ರಾಷ್ಟ್ರದ ಕನಸು ಕಾಣುತ್ತಿರುವ ಮಹಾರಾಷ್ಟ್ರ ಕೂಡ ಇದೇ ಹಾದಿ ಹಿಡಿದರೆ? ಪ್ರತಿ ರಾಜ್ಯವೂ ಪ್ರತ್ಯೇಕ ರಾಷ್ಟ್ರದ ಬೇಡಿಕೆ ಒಡ್ಡಬಹುದು. ನಮ್ಮಲ್ಲಿ ದೇಶದ ನಾಗರಿಕನಾಗಿರುವುದಕ್ಕಿಂತ ಒಂದು ಸಮುದಾಯದ ಅನನ್ಯತೆಯೇ ಮುಖ್ಯ. ಆಂತರ್ಯದಲ್ಲಿ ಸ್ಥಳೀಯರಾಗಿರುವ ನಾವು ಭಾರತೀಯರಾಗಲು ಹೆಣಗಾಡುತ್ತಿದ್ದೇವೆ. ನಾವು ಇಬ್ಭಾಗವನ್ನು ಪ್ರೋತ್ಸಾಹಿಸುವ ಬದಲಾಗಿ ವೈವಿಧ್ಯತೆಗೆ ಸಂಭ್ರಮಿಸಬೇಕು.

ಅಮಿತ್ ಮೋಟ್ವಾನಿ
ಪುಣೆ

ಎಸ್‌ಎಂಎಸ್ ಸೇವೆಯೂ ಇಲ್ಲ

ನಿಮ್ಮ ನಿಲುವು ನನ್ನ ಮನಸ್ಸನ್ನು ತಟ್ಟಿತು. ಕಾಶ್ಮೀರಿಗಳ ಪರವಾಗಿ ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಕಾಶ್ಮೀರದಲ್ಲಿ ಇಂತಹ ಲೇಖನಗಳನ್ನು ಓದುವ ಅವಕಾಶವೂ ಜನಸಾಮಾನ್ಯರಿಗಿಲ್ಲ. ಎಸ್‌ಎಂಎಸ್ ಸೇವೆಯೂ ಸ್ಥಗಿತಗೊಳಿಸಲಾಗಿದೆ. ನಾನು ದೆಹಲಿಯಲ್ಲಿರುವ ಕಾರಣ ಲೇಖನ ಓದಿ ಪ್ರತಿಕ್ರಿಯೆ ನೀಡುತ್ತಿದ್ದೇನೆ.

ಮಹಮ್ಮದ್ ಯೂನಸ್
ಐಐಟಿ, ದೆಹಲಿ

 

ಒಡಂಬಡಿಕೆ ಸಿದ್ಧವಾಗಬೇಕು

ಜಮ್ಮು- ಕಾಶ್ಮೀರ ಭಾರತಕ್ಕೆ ಸೇರಿದಂದಿನಿಂದ ಸ್ವಾತಂತ್ರ್ಯದ ಬೇಡಿಕೆ ಕೇಳಿ ಬರುತ್ತಲೇ ಇದೆ. ಕಾಶ್ಮೀರಕ್ಕೆ ವಿಶೇಷ ಅಧಿಕಾರ ಕಲ್ಪಿಸುವ 370ನೇ ವಿಧಿ ಬಿಜೆಪಿಯ ರಾಜಕೀಯ ಅಸ್ತ್ರವಾಗಿ ಬದಲಾಗಿದೆ. ಅಮರನಾಥ ಜಮೀನು ವಿವಾದ ಮತ್ತು ಆರ್ಥಿಕ ದಿಗ್ಬಂಧನ ಸ್ವಾತಂತ್ರ್ಯದ ಬೇಡಿಕೆಗೆ ಇಂಬು ನೀಡಿದೆ. ಭಾರತೀಯ ಸಂವಿಧಾನ ಸ್ವರೂಪದೊಳಗೇ ಕಾಶ್ಮೀರಕ್ಕೆ ವಸ್ತುಶಃ ಸ್ವಾಯತ್ತತೆ ನೀಡುವ ಒಡಂಬಡಿಕೆ ಸಿದ್ಧವಾಗಬೇಕಿದೆ.

ಶುಭಂ ಸಿಂಗ್
ಅಲಹಾಬಾದ್

ಸಾಮರ್ಥ್ಯವಿದೆ

ನಾನು ಕಾಶ್ಮೀರ ಕುರಿತ ನಿಮ್ಮ ಅಭಿಪ್ರಾಯವನ್ನು ಬೆಂಬಲಿಸುತ್ತೇನೆ. ಕಾಶ್ಮೀರದಲ್ಲಿ ಪ್ರವಾಸೋದ್ಯಮ, ವಿದ್ಯುತ್, ವಿಸ್ತೃತ ಕೃಷಿ ಭೂಮಿ, ಗುಡಿ ಕೈಗಾರಿಕೆಗಳು, ಲವಣಗಳು, ಪುಷ್ಪೋದ್ಯಮಗಳು ಬೆಳೆಯಲು ಭಾರತ ಬೆಂಬಲವಾಗಿ ನಿಂತರೆ ಅದು ತನ್ನದೇ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವನ್ನು ಪಡೆದಿದೆ.

ಫಹದ್
ದೆಹಲಿ

 

ಶಾಂತಿ ನೆಲೆಯೂರಲಿ

ಭಾರತದ ಪ್ರತಿ ರಾಜ್ಯವೂ ಪರಸ್ಪರರನ್ನು ಅವಲಂಭಿಸಿದೆ. ಕಾಶ್ಮೀರ ನಮ್ಮ ದೇಶದ ಮುಕುಟವಿದ್ದಂತೆ, ಪ್ರತಿ ಭಾರತೀಯನಂತೆ ನಾನೂ ಕಾಶ್ಮೀರ ಕಣಿವೆಯನ್ನು ಕಳೆದುಕೊಳ್ಳಬಯಸುವುದಿಲ್ಲ. ಅಲ್ಲಿ ಶಾಂತಿ-ನೆಮ್ಮದಿ ನೆಲೆಯೂರಲಿ ಎಂದು ಪ್ರಾರ್ಥಿಸುವೆ.

94429588**

ನಿರಾಶ್ರಿತರ ಜೀವನ

ಕಾಶ್ಮೀರಿಗಳೆಲ್ಲಾ ಕಾಶ್ಮೀರ ಬಿಡುವ ಒತ್ತಡದಲ್ಲಿದ್ದಾರೆ. ಅವರೆಲ್ಲಾ ಭಾರತದಲ್ಲಿ ನಿರಾಶ್ರಿತರಂತೆ ಬದುಕುತ್ತಿದ್ದಾರೆ. ಅವರಿಗೆ ಒಂದು ನೆಲೆ ಕಾಣಿಸುವಿರಾ? ನಾನೊಬ್ಬನೇ ಅಲ್ಲ, ನಿಜವಾದ ಭಾರತೀಯರೆಲ್ಲರೂ 370ನೇ ವಿಧಿಯನ್ನು ತೆಗೆದು ಹಾಕಲು ಬಯಸುತ್ತಾರೆ. ಅದನ್ನು ತೆಗೆದುಹಾಕಿ. ಬದಲಾವಣೆ ಗಮನಿಸಿ.

98118514**

ಸಮಾನತೆ

ಮುಸ್ಲಿಂ ಬಹುಸಂಖ್ಯಾತ ರಾಜ್ಯವೆಂಬ ಕಾರಣಕ್ಕೆ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿದಲ್ಲಿ ದೇಶದ ಪ್ರತಿ ರಾಜ್ಯವೂ ಒಂದಲ್ಲ ಒಂದು ಕಾರಣ ನೀಡಿ ಸ್ವತಂತ್ರ ರಾಷ್ಟ್ರವಾಗುವ ಬೇಡಿಕೆ ಇಡಬಹುದು. ಎಲ್ಲಾ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಿದೆ.

94112645**

ಅವಿಭಾಜ್ಯ ಅಂಗ

ಜಮ್ಮು- ಕಾಶ್ಮೀರವನ್ನು ಜಮ್ಮು, ಕಾಶ್ಮೀರ ಹಾಗೂ ಲಡಾಖ್ ಹೀಗೆ ಮೂರು ಪ್ರತ್ಯೇಕ ರಾಜ್ಯಗಳಾಗಿ ವಿಂಗಡಿಸುವ ನಿಮ್ಮ ಸಲಹೆಯನ್ನು ನಾನು ಬೆಂಬಲಿಸುತ್ತೇನೆ. ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಭಾರತದ ಸಂವಿಧಾನದಲ್ಲಿ ಹೇಳಲಾಗಿದೆ. ಜಮ್ಮು-ಕಾಶ್ಮೀರದ ಸಂವಿಧಾನವೂ ಇದಕ್ಕೆ ತಿದ್ದುಪಡಿಯನ್ನು ನಿರಾಕರಿಸಿದೆ. ಎಲ್ಲಾ ಪ್ರತ್ಯೇಕತಾವಾದಿ ನಾಯಕರನ್ನು ಪಾಕಿಸ್ತಾನಕ್ಕೆ ಕಳುಹಿಸಿ.

99382498**

ಜ್ವಲಂತ ಸಮಸ್ಯೆ

ನಿಮ್ಮ ಅಭಿಪ್ರಾಯವನ್ನು ನಾನು ಒಪ್ಪುವುದಿಲ್ಲ. ಕಾಶ್ಮೀರ ಒಂದು ಜ್ವಲಂತ ಸಮಸ್ಯೆ. ಕಾಶ್ಮೀರಿಗಳು ಸ್ವಾತಂತ್ರ್ಯ ಬಯಸುತ್ತಾರೆ ಎನ್ನುತ್ತೀರಿ. ಆದರೆ ಅದು ಅಸಾಧ್ಯ ಎನ್ನುತ್ತೇನೆ ನಾನು.

98872918**

ಗಮನಾರ್ಹ ಚಿಂತನೆ

ಕಣ್ಣು ತೆರೆಸಿದ ಲೇಖನ. ಕೇಲವು ಗಮನಾರ್ಹ ಚಿಂತನೆಗೆ ಎಡೆಮಾಡಿಕೊಟ್ಟಿತು. ಸಂಗ್ರಹಯೋಗ್ಯ ಸಂಚಿಕೆ.

98735682**

ಚಿಂತನಾರ್ಹ

'ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?' ಚಿಂತನಾರ್ಹ ಲೇಖನ.

92454519**

ಬಹುಮಾನಿತ ಪತ್ರಗಳು

ಸ್ವಾತಂತ್ರ್ಯ ಪರ ಧ್ವನಿ

Letters- The Sunday Indian - Kannadaಭೂಲೋಕದ ಸ್ವರ್ಗದಲ್ಲಿ ಮತ್ತೆ ದ್ವೇಷಾಗ್ನಿ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ 'ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಬಾರದೇಕೆ?' ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆ ಮತ್ತೆ ಎದ್ದಿದೆ. ಸ್ವಾತಂತ್ರ್ಯ ಪರ ಧ್ವನಿ ತಾರಕಕ್ಕೇರಿದೆ. ಅಬ್ದುಲ್ಲಾ ಮತ್ತು ಮುಫ್ತಿ ಮೊದಲಾದ ರಾಜಕೀಯ ಗೊಸುಂಬೆಗಳು ಮತ್ತೆ ಬಣ್ಣ ಬದಲಾಯಿಸಿದ್ದಾರೆ. ಇತ್ತೀಚೆಗಿನವರೆಗೂ ಏಕಭಾರತದ ಕುರಿತು ಮಾತನಾಡುತ್ತಿದ್ದ ಇವರೆಲ್ಲ ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಕೂಗು ಕೇಳಿದ್ದೇ ತಡ, ಅದೇ ಮಂತ್ರ ಪಠಿಸಲಾರಂಭಿಸಿದ್ದಾರೆ. ಅಲ್ಲದೆ ಪ್ರತ್ಯೇಕತಾವಾದಿಗಳ ಹೆಗಲಿಗೆ ಕೈ ಹಾಕಿ ನಡೆಯುತ್ತಿದ್ದಾರೆ. ದೆಹಲಿಯಲ್ಲಿರುವ ಕೆಲವು ರಾಜಕಾರಣಿಗಳೂ ಇದೇ ಆಟವನ್ನು ಆಡುತ್ತಿದ್ದಾರೆ ಮತ್ತು ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವುದೇ ಪರಿಹಾರ ಎನ್ನುತ್ತಿದ್ದಾರೆ. ಹೀಗಾಗಿ ಸ್ವಾಯತ್ತತೆ ಮತ್ತು ಸ್ವ ಆಡಳಿತ ಪ್ರಸ್ತಾಪಗಳು ಬರಬಹುದು. ಆದರೆ ಈಗಿನ ಪರಿಸ್ಥಿತಿಯನ್ನೇ ಮುಂದುವರಿಸಿದರೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗುತ್ತದೆ. ಸಾಂಘ್ವಿ, ಸ್ವಾಮಿನಾಥನ್, ಮಲಯ್ ಚೌಧುರಿ, ಅರಿಂದಮ್, ಜಗ್ ಅವರ ಮಾತುಗಳನ್ನು ಆಲಿಸಬೇಕಿದೆ. ಅವರು ವಾದಗಳಲ್ಲಿ ಸತ್ವವಿದೆ. ಅವರ ಚಿಂತನೆ 'ಭಾರತದ ಕಲ್ಪನೆ'ಗೆ ಭಿನ್ನವಿರಬಹುದು. ಆದರೆ ಸಾವಿರಾರು ಕಾಶ್ಮೀರಿಗಳು ವಿರೋಧಿಸುವ ಕಲ್ಪನೆಯನ್ನು ಅವರ ಮೇಲೆ ಹೇರುವುದೂ ಸರಿಯಲ್ಲ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ತಕ್ಕುದಾದುದಲ್ಲ.

ಸೈಯದ್ ಜಫರ್ ಮೆಹ್ದಿ
ದೆಹಲಿ

ಕಾಶ್ಮೀರಿಗಳು ನಿರ್ಧರಿಸಲಿ

ಕಾಶ್ಮೀರದ ಸಮಸ್ಯೆ ಮತ್ತು ಹೋರಾಟಕ್ಕೆ ದೊಡ್ಡ ಇತಿಹಾಸವೇ ಇದೆ. ಬ್ರಿಟಿಷರು ನಮ್ಮನ್ನು ತೊರೆದು ಹೋದಾಗ ಅವರು ಭಾರತವನ್ನು ವಿಭಾಗಿಸಿದ ರೀತಿಯಿಂದಾಗಿ ಇಂದು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸಮಸ್ಯೆಗಳ ಕೂಪದೊಳಗೆ ನರಳುತ್ತಿವೆ. ನಾನೊಬ್ಬ ಬಾಂಗ್ಲಾದೇಶಿ. ನಮ್ಮನ್ನು ಅನೇಕರು ಆಳಿದ್ದಾರೆ. ಆದರೆ ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದೇವೆ. ಏಕೆಂದರೆ ಪ್ರತಿ ಮನುಷ್ಯನೂ ಸ್ವತಂತ್ರನಾಗಿ ಬದುಕಲೆಂದೇ ಹುಟ್ಟಿದ್ದಾನೆ. ಕಾಶ್ಮೀರಿಗಳ ಅಂತರಂಗ ಹೊಕ್ಕು ಸಮಸ್ಯೆಯನ್ನು ಅರಿತುಕೊಳ್ಳಲು ಪ್ರಯತ್ನಿಸಿ. ಭಾರತ ಅಥವಾ ಪಾಕಿಸ್ತಾನದ ಪ್ರಜೆಯಾಗಿ ಅಲ್ಲ. ಈ ವಿಷಯವನ್ನು ಕಾಶ್ಮೀರದ ಜನತೆಗೇ ಬಿಟ್ಟು ಬಿಡಬೇಕು. ಅವರು ತಮ್ಮಿಚ್ಛೆಯ ದೇಶ ಸೇರಲು ಬಿಡಬೇಕು. ಇಲ್ಲವೇ ಸ್ವಾತಂತ್ರ್ಯ ಬಯಸಿದಲ್ಲಿ ಅದನ್ನೇ ಕೊಡಬೇಕು. ದಯವಿಟ್ಟು ಈ ಸಮಸ್ಯೆಯನ್ನು ಕಾಶ್ಮೀರಿಗಳ ದೃಷ್ಟಿಕೋನದಲ್ಲಿ ಗಮನಿಸಿ.

ದಿವಾಕರ್ ಕೌಶಿಕ್
ಇ-ಮೇಲ್ ಮೂಲಕ

ವ್ಯತಿರಿಕ್ತ ಪರಿಣಾಮ

ಸಂಪಾದಕೀಯದಲ್ಲಿ ಮೂಲಭೂತವಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಆದರೆ ಕಾಲಿಗೆ ಮುಳ್ಳು ಚುಚ್ಚಿದರೆ ಕಾಲನ್ನೇ ಕತ್ತರಿಸುವುದೆ? ಕಾಶ್ಮೀರ ಭಾರತಕ್ಕೆ ತಗಲಿದ ಮುಳ್ಳು. ಅದನ್ನು ನಾಜೂಕಾಗಿ ತೆಗೆಯಬೇಕಾಗಿದೆ. ರಾಜಕಾರಣಿಗಳು ಹೇಳುವ ಹಾಗೆ ಕಾಶ್ಮೀರ ಭಾರತದ ಜಾತ್ಯತೀತ ಮನೋಭಾವದ ಮುಕುಟವಲ್ಲ. 61 ವರ್ಷ ಕಳೆದರೂ ಭಾರತದೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ರಾಜ್ಯ ಇನ್ನು ಬದಲಾಗಬಹುದೆ? ಬದಲಾಗಬಹುದು. ಸ್ವಾತಂತ್ರ್ಯದ ಮಾತಿಲ್ಲದೆ ಬದಲಾವಣೆ ತರಬಹುದು. ಪ್ರಗತಿಪರ ಶಸ್ತ್ರಚಿಕಿತ್ಸೆ ಮೂಲಕ. ಆದರೆ ಧೋರಣೆ ವಿಭಿನ್ನವಾಗಿರಬೇಕು. ಮೊದಲನೇ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಮೂರು ಪ್ರತ್ಯೇಕ ರಾಜ್ಯ ಅಂದರೆ ಜಮ್ಮು, ಕಾಶ್ಮೀರ, ಲಡಾಖ್‌ಗಳಾಗಿ ವಿಂಗಡಿಸಬೇಕು. ಹೀಗಾದ ಕೂಡಲೇ ಜಮ್ಮು ಹಾಗೂ ಲಡಾಖ್ ಜನರು ಕಾಶ್ಮೀರದ ಹಿಡಿತದಿಂದ ತಪ್ಪಿಸಿಕೊಳ್ಳಬಹುದು. ಇದರಿಂದ ಎರಡೂ ಪ್ರಾಂತಗಳಲ್ಲಿ ಏಕತೆ ಮೂಡುತ್ತದೆ. ನಂತರದ ಹೆಜ್ಜೆಯಲ್ಲಿ ಕಾಶ್ಮೀರದಿಂದ ವಲಸೆ ಹೋದ ಕಾಶ್ಮೀರಿ ಪಂಡಿತರನ್ನು ಇತರ ರಾಜ್ಯಗಳಿಂದ ವಾಪಾಸು ಕರೆಸಿಕೊಳ್ಳಬೇಕು. ಇದರ ಹೊರತಾಗಿ ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡಿದಲ್ಲಿ ಭಾರತದ ಮೇಲೆ ವ್ಯತಿರಿಕ್ತ ಪರಿಣಾಮಗಳು ಆಗುವ ಸಾಧ್ಯತೆ ಇದೆ. ಭಾರತದಾದ್ಯಂತ ಮುಸ್ಲಿಮರ ತಲೆಗಳು ಉರುಳಬಹುದು. ಇದಕ್ಕೆ ಪ್ರತಿರೋಧವಾಗಿ ಮುಸ್ಲಿಮರೂ ಕತ್ತಿ ಹಿಡಿಯಬಹುದು. ಒಟ್ಟಾರೆ ದೇಶವಿಡೀ ಕೋಮುದಳ್ಳುರಿಯಲ್ಲಿ ನಲುಗಬೇಕಾದೀತು. ಮತ್ತೊಂದು ಗೋಧ್ರಾ ಅಥವಾ ಮಹಾರಾಷ್ಟ್ರವನ್ನು ನಾವು ಎದುರು ನೋಡಬೇಕಾದೀತು.

ಪ್ರಿಯಾಂಕ
ಚಂಡೀಗಢ

ನಿಮ್ಮ ಅಭಿಪ್ರಾಯವನ್ನು ಈ ಕೆಳಗೆ ನಮೂದಿಸಿ | Write your opinion here
.

 
Name *  
Your Feedback Please *
Email*  
Native Place *
Current Location
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .