|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಅಂತಿಮವಾಗಿ ಆರನೇ ವೇತನ ಆಯೋಗ ಸರ್ಕಾರಿ
ಸಿಬ್ಬಂದಿಗೆ ಆರ್ಥಿಕ ಶ್ರೀರಕ್ಷೆಯಾಗುವ ಹಾಗಿದೆ.
ಯಾಕಾಗಬಾರದು?
ಪ್ರಸ್ತುತ ವೇತನ ಆಯೋಗ ರೂ.30621
ಕೋಟಿ ಮೊತ್ತವನ್ನು ಕೊಡುಗೆಯಾಗಿ ನೀಡಿದೆ!
ಹಿಂದಿನ ಆಯೋಗಕ್ಕೆ ಹೋಲಿಸಿದರೆ ಸುಮಾರು ಶೇ.
151ರಷ್ಟು
ಹೆಚ್ಚು.
ಆದರೆ ದುರದೃಷ್ಟ್ಟವಶಾತ್ ಈ ವೇತನ ಆಯೋಗವೂ ಹಿಂದಿನ
ವೇತನ ಆಯೋಗಗಳಂತೆ ಕ್ರಿಯಾಶೀಲ ಆಡಳಿತ ವ್ಯವಸ್ಥೆ ರೂಪಿಸುವ ಪ್ರಯತ್ನಕ್ಕೆ
ಕೈ ಹಾಕಿಲ್ಲ.
ಸಾರ್ವಜನಿಕ ವಲಯದ ಭ್ರಷ್ಟಾಚಾರ,
ಉತ್ಪಾದನೆ ಮತ್ತು ಪ್ರತಿಭಾ ನಿರ್ವಹಣೆಗೆ
ಸಂಬಂಧಿಸಿದಂತೆ ವಿಸ್ತೃತ ಆಡಳಿತ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ
ಯಾವುದೇ ಕ್ರಮ ಕೈಗೊಂಡಿಲ್ಲ.
ಆಯೋಗದ ಪರ ವಾದ ಮಂಡಿಸಿದವರೆಲ್ಲ ವೇತನ
ಹೆಚ್ಚಳದಿಂದ ಪ್ರತಿಭಾವಂತರನ್ನು ಉಳಿಸಿಕೊಳ್ಳುವುದು ಮತ್ತು ಉತ್ಪಾದನೆ
ವೃದ್ಧಿ ಸಾಧ್ಯ ಎಂದು ಸಮರ್ಥಿಸಿಕೊಂಡಿದ್ದಾರೆ.
ಖಾಸಗಿ ವಲಯಗಳಿಗೆ ಹೋಲಿಸಿದಲ್ಲಿ ಸ್ಪರ್ಧಾತ್ಮಕ
ವೇತನ ಅನುಷ್ಠಾನವಾಗುವ ಅಗತ್ಯವನ್ನು ಎತ್ತಿ ಹಿಡಿಯುತ್ತಾರೆ.
ವೇತನ ಹೆಚ್ಚಳದಿಂದ ಕಾರ್ಯದಕ್ಷತೆ
ಹೆಚ್ಚಾಗುತ್ತದೆ ಎನ್ನುವ ನಿರೀಕ್ಷೆ ಸುಳ್ಳು ಎಂದು ಈಗಾಗಲೇ ಸಾಕಷ್ಟು ಬಾರಿ
ಸಾಬೀತಾಗಿದೆ.
ಇದರ ಹೊರತಾಗಿಯೂ ಸಿಬ್ಬಂದಿಗಳ ನೇಮಕ ಮತ್ತು ವಜಾ
ವ್ಯವಸ್ಥೆಗೆ ಯಾವುದೇ ನೀಲನಕ್ಷೆ ಇಲ್ಲದ ಶೇ.
40ರಷ್ಟು
ವೇತನ ಹೆಚ್ಚಳ ಅರ್ಥವಿಲ್ಲದ್ದು.
ಸರ್ಕಾರಿ ಸಿಬ್ಬಂದಿ ವೇತನವನ್ನು ಖಾಸಗಿ
ವಲಯದ ಮಟ್ಟಕ್ಕೆ ತರುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿರುವ ಆಯೋಗ
ಅಲ್ಲಿನ ವೇತನ ಮಾದರಿಯ ಮುಖ್ಯ ತತ್ವಗಳನ್ನೇ ನಿರ್ಲಕ್ಷಿಸಿದೆ.
ಖಾಸಗಿ ವಲಯದ ವಿಭಿನ್ನ ಉದ್ಯಮಗಳಲ್ಲಿ
ಕಾರ್ಯದಕ್ಷತೆ ಮತ್ತು ನಿಗದಿತ ಗುರಿಸಾಧನೆ ಅನುಸರಿಸಿ ನಿರ್ದಿಷ್ಟ ಮೊತ್ತದ
ಕೂಲಿ ಮತ್ತು ವೇತನ ನೀಡಲಾಗುತ್ತಿದೆ.
ಅಲ್ಲಿ ಕರ್ತವ್ಯಬದ್ಧತೆಗೆ ಕೊಡುಗೆಯ ರೂಪದಲ್ಲಿ
ಹೆಚ್ಚುವರಿ ವೇತನ ನೀಡಲಾಗುತ್ತಿದೆಯೇ ವಿನಾ ಸಾರ್ವಜನಿಕ ವಲಯದಂತಲ್ಲ.
ಸಾಧನೆ-ಉತ್ಪಾದನೆಗೆ
ನೇರವಾಗಿ ಸಂಬಂಧ ಪಡದ ಹುದ್ದೆಗಳಲ್ಲಿ ವೇತನ ಹೆಚ್ಚಳ ವರ್ಷಾಂತ್ಯದ
ಲಾಭವನ್ನು ಆಧರಿಸಿದೆ.
ಹೀಗಾಗಿ ವಸ್ತುನಿಷ್ಠ,
ವೈಜ್ಞಾನಿಕ ಮತ್ತು ಸರಳವಾಗಿ ಸಿಬ್ಬಂದಿಯ
ಸಾಮರ್ಥ್ಯ ಅಳೆಯಬಹುದಾದ ಮಾದರಿಯೊಂದನ್ನು ವೇತನಾ ಆಯೋಗ
ಅಭಿವೃದ್ಧಿಪಡಿಸಬಹುದಾಗಿತ್ತು.
ಇಂತಹ ನಿಲುವಿನಿಂದ ಸಾರ್ವಜನಿಕ ವಲಯದ
ವೇತನದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗುವ ಜೊತೆಯಲ್ಲೇ ಸಾಮಾಜಿಕ-
ಆರ್ಥಿಕ ತಾರತಮ್ಯ ಸಮಸ್ಯೆಯನ್ನೂ
ಪರಿಶೀಲಿಸಬಹುದಿತ್ತು.
ಪ್ರಸ್ತುತ ಮಾದರಿ ಸ್ಥಿರ ವೇತನ ವೆಚ್ಚವನ್ನು
ಏರಿಸಿದ್ದಲ್ಲದೆ ಹಣದುಬ್ಬರದ ಒತ್ತಡದ ಹೊರೆಯನ್ನು ವೃದ್ಧಿಸಿದೆ.
ಭಾರತೀಯ ಕಾರ್ಮಿಕ ಅರ್ಥವ್ಯವಸ್ಥೆ ಕುರಿತ ನನ್ನ
ತಿಳಿವಿನ ಪ್ರಕಾರ ಈ ವಿಸ್ತೃತ ವಿಷಯಗಳನ್ನು ವಿಶ್ಲೇಷಿಸುವ ಹಲವು
ಅಧ್ಯಯನಗಳು ನಡೆದಿವೆಯಾದರೂ ಯಾವುವೂ ನಿರ್ದಿಷ್ಟವಾಗಿ ಈ ವಿಚಾರವನ್ನು
ಚರ್ಚಿಸಿಲ್ಲ.
ಆದರೆ ನನ್ನ ಅನುಭವದಿಂದ ಹೇಳುವುದಾದಲ್ಲಿ ಕೊಡುಗೆ
ಆಧಾರಿತ ವೇತನ ಮತ್ತು ಸ್ಥಿರ ವೇತನದ ನಡುವೆ ಅಜಗಜಾಂತರ ವ್ಯತ್ಯಾಸವಿದೆ.
ಅರ್ಥವ್ಯವಸ್ಥೆಯ ಸ್ವರೂಪದಲ್ಲಿ ಕೊಡುಗೆ
ಆಧಾರಿತ ವೇತನವನ್ನು ಅತಿ ಪರಿಶ್ರಮದ ಆದಾಯವೆಂದೇ ಪರಿಗಣಿಸಲಾಗಿದೆ.
ಅಂತಹ ಆದಾಯವನ್ನು ವ್ಯಯಿಸುವಾಗ ಎಲ್ಲರೂ ಹೆಚ್ಚು
ಜಾಗರೂಕರಾಗಿರುತ್ತಾರೆ.
ಆದರೆ ಸ್ಥಿರ ವೇತನ ಖರ್ಚು ಮಾಡುವಾಗ ಅಷ್ಟು
ಎಚ್ಚರ ವಹಿಸುವುದಿಲ್ಲ!
ಹೀಗಾಗಿ ಹಣದುಬ್ಬರದ ಒತ್ತಡವನ್ನು ಕಡಿಮೆ ಮಾಡಲು
ಆದಾಯದ ಒಂದು ಭಾಗವನ್ನು ಕೊಡುಗೆ ಆಧಾರಿತ ವೇತನವಾಗಿಸುವುದು ಉತ್ತಮ ಉಪಾಯ!
ಮತ್ತೊಂದು ಕುತೂಹಲದ ಸಂಗತಿ ಎಂದರೆ,
ಕಡಿಮೆ ಆದಾಯ ಪಡೆಯುವ ವರ್ಗದ ಸರ್ಕಾರಿ
ಸಿಬ್ಬಂದಿಗಳು ತಮ್ಮ ಖಾಸಗಿ ವಲಯದ ಸ್ಪರ್ಧಿಗಳಿಗಿಂತ ಅಧಿಕ ವೇತನ
ಪಡೆಯುತ್ತಿದ್ದಾರೆ.
ಅದು ಪ್ರಾಥಮಿಕ ಶಾಲಾ ಶಿಕ್ಷಕನೇ ಆಗಿರಲಿ ಅಥವಾ
ಕಾರ್ಖಾನೆ ನೌಕರನೇ ಆಗಿರಲಿ.
ವಾಷಿಂಗ್ಟನ್ ಮೂಲದ ವೇತನ ಸಂಸ್ಥೆ ಸಂಗ್ರಹಿಸಿದ
ಮಾಹಿತಿ ಪ್ರಕಾರ ಭಾರತದಲ್ಲಿ ಒಂದು ವರ್ಷ ಅನುಭವವಿರುವ ಕೇಂದ್ರ ಸರ್ಕಾರಿ
ಸಿಬ್ಬಂದಿಗಳು ಪಡೆಯುವ ಸರಾಸರಿ ವೇತನ ವಾರ್ಷಿಕ ರೂ.
,12,424.
ಆದರೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ರೂ.
,08,962.
(ಇದು ಸಂಘಟಿತ ವಲಯಕ್ಕೆ ಮಾತ್ರ ಅನ್ವಯಿಸುತ್ತದೆ
ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು!)
ಚುನಾವಣಾ ಪೂರ್ವದಲ್ಲಿ ಸರ್ಕಾರ ಜನಪ್ರಿಯ
ಒತ್ತಡಕ್ಕೆ ತಲೆಬಾಗಿದ್ದು ಇದೇ ಮೊದಲಲ್ಲ ಬಿಡಿ.
ತಾತ್ಕಾಲಿಕವಾಗಿ ತೃಪ್ತಿಕರ ಫಲಿತಾಂಶ ನೀಡಬಲ್ಲ
ನಿರ್ಧಾರಗಳಿಗೆ ಅಸ್ತು ಎನ್ನಲಾಗಿದೆ.
ಆದರೆ ದೀರ್ಘಕಾಲದಲ್ಲಿ ಇದರಿಂದ ಒಟ್ಟು
ಅರ್ಥವ್ಯವಸ್ಥೆಯೇ ಅಪಾಯ ಎದುರಿಸಬೇಕಾದೀತು.
ಇದೆಲ್ಲವನ್ನು ಗಮನಿಸಿದರೆ ಸರ್ಕಾರಕ್ಕೆ
ಕರ್ತವ್ಯನಿಷ್ಠೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರುವ ಅವಕಾಶವಿತ್ತು.
ಹಾಗೇ ಸಾಧಾರಣ ವೇತನ ವ್ಯವಸ್ಥೆಯಲ್ಲಿ ಒಂದು
ವಿಧದ ಪರಿಶುದ್ಧತೆ ತರಬಹುದಾಗಿತ್ತು.
ಕೆಲವು ಲಕ್ಷ ಮಂದಿಯ ಬೇಡಿಕೆ ಈಡೇರಿಸಲು ಹಲವು
ಲಕ್ಷ ಮಂದಿ ತೆರಿಗೆದಾರರ ಹಣವನ್ನು ವೃಥಾ ವ್ಯಯಿಸುವುದು ಅನ್ಯಾಯ ಎಂದು
ಸರ್ಕಾರ ಅರಿತುಕೊಳ್ಳುವ ಕಾಲ ಬಂದಿದೆ!
ಐಐಪಿಎಂ
'ಥಿಂಕ್ ಟ್ಯಾಂಕ್'
|