|
ಸಂಭಾಷಣಾಕಾರರಾಗಿ ಚಿತ್ರರಂಗ ಪ್ರವೇಶಿಸಿದಿರಿ.
ನಟನೆಯತ್ತ ಹೊರಳಲು ಕಾರಣ?
ನಟನಾಗಬೇಕೆಂಬ ಉದ್ದೇಶದಿಂದಲೇ ಚಿತ್ರರಂಗ
ಪ್ರವೇಶಿಸಿದೆ.
ಆದರೆ ಆರಂಭದಲ್ಲಿ ಅವಕಾಶ ದೊರೆಯಲಿಲ್ಲ,
ಹೀಗಾಗಿ ಸಂಭಾಷಣಾಕಾರನಾದೆ.
ಹಾಸ್ಯ ನಟನಾಗಿ ಎದುರಿಸಿದ ಸವಾಲು?
ಹಾಸ್ಯ ಯಾವತ್ತೂ ಹದವಾಗಿರಬೇಕು.
ಅತಿಯಾದರೆ ಓವರ್ ಆಕ್ಟಿಂಗ್ ಆಗಿಬಿಡುತ್ತದೆ.
ಕಡಿಮೆಯಾದರೆ ಜನರನ್ನು ತಲುಪಲು
ಸಾಧ್ಯವಾಗುವುದಿಲ್ಲ.
ಕೀಳು ಅಭಿರುಚಿಯ ಹಾಸ್ಯ ಹೆಚ್ಚುತ್ತಿರುವುದರ ಕುರಿತು...
ಸಮಸ್ಯೆ ಇರುವುದು ಚಿತ್ರಕಥೆಯಲ್ಲಿ.
ನಿರ್ಮಾಪಕ,
ನಿರ್ದೇಶಕರ ಧೋರಣೆ ಹೇಗಿದೆ ಎನ್ನುವುದರ ಮೇಲೆ ಇದು
ಅವಲಂಬಿತ.
ಕನ್ನಡ ಚಿತ್ರರಂಗದಲ್ಲಿ ಸಂಭಾಷಣಾಕಾರರ ಸ್ಥಾನಮಾನ?
ನಮ್ಮಲ್ಲಿ
'ಹಿತ್ತಲ ಗಿಡ
ಮದ್ದಲ್ಲ'
ಎಂಬ ಸ್ಥಿತಿ ಇದೆ.
ರಿಮೇಕ್ ಹಕ್ಕು ಪಡೆಯಲು
15ಲಕ್ಷ
ಕೊಡುತ್ತಾರೆ.
ಅದರಲ್ಲೇ ಶೇ.
50ರಷ್ಟನ್ನು
ಚಿತ್ರಕಥೆ ಬರೆಯುವವರಿಗೆ ಕೊಟ್ಟರೂ ಹೊಸ ಕಥೆಗಳೇ ಹುಟ್ಟಿಕೊಳ್ಳುತ್ತವೆ.
ನೀವು ನಿರ್ದೇಶಿಸುತ್ತಿರುವ ಚಿತ್ರಗಳ ಕುರಿತು..
ಎರಡು ಚಿತ್ರಗಳನ್ನು ನಿರ್ದೇಶಿಸುತ್ತಿದ್ದೇನೆ.
ಅಕ್ಟೋಬರ್ ವೇಳೆಗೆ ಇವೆರಡಕ್ಕೂ ರೂಪ ಸಿಗುತ್ತದೆ.
ಟಿಎಸ್‌ಐ
ಡಿ.ಎಸ್. ಶ್ರೀಕಲಾ
|