|

ಸ್ಥಿರತೆಯ ಹೆಸರಿನ
'ಆಪರೇಷನ್ ಕಮಲ'
ನಿಮ್ಮ ಪಕ್ಷದ ಬಲವನ್ನು ಎಷ್ಟರಮಟ್ಟಿಗೆ ಹೆಚ್ಚಿಸುತ್ತಿದೆ?
ಈ ಕಾರ್ಯಾಚರಣೆ ನಮಗೇನೂ ಅಂತಹ ಸಮಾಧಾನ ತಂದಿರುವ
ಸಂಗತಿಯಲ್ಲ.
ನಮಗೆ ಸ್ಪಷ್ಟ ಬಹುಮತ ಬಂದಿದ್ದರೆ ನಾವು ಇಂತಹ ಕಾರ್ಯಾಚರಣೆ
ಮಾಡುವ ಅಗತ್ಯವಿರಲಿಲ್ಲ.
ನಮಗೆ ಜನ 110
ಸ್ಥಾನಗಳನ್ನು ನೀಡಿದಾಗ ಪಕ್ಷೇತರರ ಬೆಂಬಲ ಪಡೆಯುವುದು ಅನಿವಾರ್ಯವಾಯಿತು.
ಆದರೆ,
ಕೆಲವರು ಆ ಪಕ್ಷೇತರರನ್ನು ಬಳಸಿಕೊಂಡು ಸರ್ಕಾರವನ್ನು
ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಆರಂಭಿಸಿದಾಗ ನಮಗೆ ಸುಭದ್ರ ಸರ್ಕಾರ
ಕೊಡುವುದಕ್ಕಾಗಿ ಆಪರೇಷನ್ ಕಮಲ ಅನಿವಾರ್ಯವಾಯಿತು.
ಅದೇನೂ ನಮಗೆ ಹೆಮ್ಮೆಯ ವಿಷಯವಲ್ಲ,
ಬೇಸರದ ವಿಷಯವೇ.
ಆದರೂ ಅನಿವಾರ್ಯವಾಗಿತ್ತು.
ಆ ಕಾರಣದಿಂದ ಕೆಲವು ರಾಜಕೀಯ ನಡೆಗಳನ್ನು
ಕೈಗೊಂಡಿದ್ದೇವೆ.
ಆದರೆ,
ಇಲ್ಲಿ ರಾಜಕೀಯ ನೈತಿಕತೆಯ ಪ್ರಶ್ನೆಯೂ ಇದೆಯಲ್ಲವೇ?
ಇರಬಹುದು.
ಆದರೆ,
ರಾಜಕೀಯ ಸ್ಥಿರತೆಗೆ ಭಂಗ ತರುವ ಪ್ರಯತ್ನಗಳನ್ನು
ನಮ್ಮ ಕೆಲವು ಸ್ನೇಹಿತರು ಮಾಡಿದಾಗ ನಾವು ಎಚ್ಚರಿಕೆ ವಹಿಸಬೇಕಾಯಿತು.
ಜನರ ಹಿತದೃಷ್ಟಿಯಿಂದ ಸ್ಥಿರ ಸರ್ಕಾರ ನೀಡಲು,
ಅಭಿವೃದ್ಧಿಗೆ ಕೈಜೋಡಿಸಲು ನಮ್ಮ ಜೊತೆಗೆ
ಆತ್ಮೀಯತೆಯಿಂದ ಬರಲು ಸಿದ್ಧರಾದ ಶಾಸಕರನ್ನು ಸೇರಿಸಿಕೊಳ್ಳಬೇಕಾಯಿತು.
ಹಾಗಾಗಿ ಇದು ನೈತಿಕತೆಗಿಂತಲೂ ನಮಗೆ ಸರ್ಕಾರದ ಅಳಿವು-
ಉಳಿವಿನ ಪ್ರಶ್ನೆಯಾಗಿತ್ತು.
ಈಗ ಪಕ್ಷಕ್ಕೆ ಸಾಕಷ್ಟು ಬಲ ಬಂದಿದೆ.
ಹಾಗಾಗಿ ಆಪರೇಷನ್ ಕಮಲವನ್ನು ಮುಂದುವರಿಸುವ
ಅಗತ್ಯವಿಲ್ಲ ಎಂದುಕೊಂಡಿದ್ದೇವೆ.
ಆದರೆ,
ಬಿಜೆಪಿಯಂತಹ ನೈತಿಕತೆ ಮಾತನಾಡುವ ಪಕ್ಷಕ್ಕೆ,
ಮೂರು ದಶಕದಿಂದ ಪ್ರತಿಪಕ್ಷದ ಸ್ಥಾನದಲ್ಲೇ
ಕೂತಿದ್ದರೂ ಸಿದ್ಧಾಂತದ ರಾಜಕೀಯ ನಂಬಿಕೊಂಡು ಬಂದ ನಿಮಗೆ ಈಗ ಮತದಾರರಿಗೆ
ದ್ರೋಹ ಬಗೆಯುವ ಶಾಸಕರ ಈ ವರಸೆ ಸರಿಯೆನಿಸುತ್ತದೆಯೇ?
ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳು,
ಜನಪರ ಕಾಳಜಿ ಮೆಚ್ಚಿ ಇಂತಹ ಸರ್ಕಾರಕ್ಕೆ ಬಲ
ನೀಡಬೇಕು ಎಂದುಕೊಂಡು ಕೆಲವು ಶಾಸಕ ಮಿತ್ರರು ತಾವಾಗಿಯೇ ಬಂದಾಗ ಬೇಡ
ಎನ್ನಲಾಗುವುದಿಲ್ಲವಲ್ಲ.
ಮತ್ತೊಂದು ಮಧ್ಯಂತರ ಚುನಾವಣೆ ಬೇಡ ಎಂದುಕೊಂಡವರು,
ನಮ್ಮ ವಿಚಾರಧಾರೆಗಳನ್ನು ಮೆಚ್ಚಿಕೊಂಡು ಬಂದವರೂ
ಇದ್ದಾರೆ.
ದೇಶದ ರಾಜಕಾರಣದಲ್ಲಿ ಸಾವಿರಾರು ಜನ ಪಕ್ಷಾಂತರ ಮಾಡಿರಬಹುದು.
ಆದರೆ,
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದಿರುವುದು ಇದೇ
ಮೊದಲು.
ಮಂತ್ರಿ ಸ್ಥಾನ,
ನಿಗಮ-
ಮಂಡಳಿ ಸ್ಥಾನಕ್ಕೆ ಆಸೆ ಪಟ್ಟು ಬರುವುದಾದರೆ ಅದು
ಶಾಶ್ವತವಲ್ಲ ಎಂಬುದು ಅವರಿಗೂ ಅರಿವಿರುತ್ತದೆ ಅಲ್ಲವೇ?
ಹಾಗಾಗಿ ಕ್ಷೇತ್ರದಲ್ಲಿ ಬಿಜೆಪಿ ಸೇರಿ ಎಂಬ ಒತ್ತಡ,
ನಮ್ಮ ಮೇಲಿನ ನಂಬಿಕೆ-
ವಿಶ್ವಾಸ ಹಾಗೂ ನಾವು ಈವತ್ತು ಮಾಡುತ್ತಿರುವ
ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಇಂತಹ ಸರ್ಕಾರ ಬೀಳಬಾರದು,
ಅದರ ಸ್ಥಿರತೆಗೆ ನಾವೇನಾದರೂ ಕೊಡುಗೆ ನೀಡಬೇಕು
ಎಂದುಕೊಂಡು ಶಾಸಕರು ಬರುತ್ತಿದ್ದಾರೆ.
ಹಾಗಾಗಿ ಮತದಾರರಿಗೆ ದ್ರೋಹ ಮಾಡಿದ ಪ್ರಶ್ನೆಯೇ
ಬರುವುದಿಲ್ಲ.
ಆದರೆ,
ಶಾಸಕರಿಗೆ ಆಮಿಷವೊಡ್ಡಿ ಪಕ್ಷಕ್ಕೆ
ಸೆಳೆದುಕೊಳ್ಳಲಾಗುತ್ತಿದೆ ಎಂಬ ಆರೋಪಗಳಿಗೆ ಏನೆನ್ನುತ್ತೀರಿ?
ಹಾಗೆ ಟೀಕಿಸುವವರು ಇತ್ತೀಚೆಗೆ ಲೋಕಸಭೆಯ
ವಿಶ್ವಾಸಮತ ಸಾಬೀತಿನ ವೇಳೆ ಹೇಗೆ ನಡೆದುಕೊಂಡರು ಎಂಬುದು ಇಡೀ ಜಗತ್ತಿಗೇ
ಗೊತ್ತಿದೆ.
ಆ ರೀತಿ ಯಾರಿಗೂ ಆಮಿಷ ತೋರಿಸಿಲ್ಲ.
ಅಭಿವೃದ್ಧಿಯನ್ನೇ ಗಮನದಲ್ಲಿಟ್ಟುಕೊಂಡು ಬಂದಿದ್ದಾರೆ.
ಅದನ್ನು ಆಮಿಷ ಎನ್ನಲು ಆಗುವುದಿಲ್ಲ ಅಲ್ಲವೇ..
ಯಾರಿಗೂ ಆಮಿಷ ತೋರಿಸಿಲ್ಲ ಎನ್ನುವ ನೀವೇ,
ಪಕ್ಷಕ್ಕೆ ಬಂದವರಿಗೆ ಅವಕಾಶ ಮಾಡಿಕೊಡಲು ಎಂತಹ
ತ್ಯಾಗಕ್ಕೂ ಸಿದ್ಧರಾಗಿ ಎಂದು ಶಾಸಕರಿಗೆ ಕರೆ ನೀಡುತ್ತೀರಲ್ಲ?
ಪಕ್ಷಕ್ಕೆ,
ಸರ್ಕಾರಕ್ಕೆ ಬೆಂಬಲ ಸೂಚಿಸಿ ತಮ್ಮ ಶಾಸಕ ಸ್ಥಾನಕ್ಕೆ
ರಾಜೀನಾಮೆ ನೀಡಿ ಬಂದವರಿಗೆ ನಾವು ಗೌರವ ನೀಡಬೇಕಲ್ಲವೇ?
ಅದನ್ನೂ ಒಂದು ರೀತಿಯಲ್ಲಿ ಆಮಿಷ ಎನ್ನುವವರು
ಇರಬಹುದು.
ಆದರೆ,
ಸರ್ಕಾರಕ್ಕೆ ಬೆಂಬಲ ನೀಡುವುದಕ್ಕಾಗಿ ಬಂದವರಿಗೆ ಯೋಗ್ಯತೆಗೆ
ತಕ್ಕಂತೆ ಏನಾದರೂ ಒಂದು ಸ್ಥಾನಮಾನ ನೀಡಿದರೆ ಅದನ್ನು ಖಂಡಿತವಾಗಿಯೂ ಆಮಿಷ
ಎನ್ನಲಾಗದು.
ಅಂತಹ ತ್ಯಾಗದ ಬಗ್ಗೆ ಬಿಜೆಪಿಯಲ್ಲೇ ಪ್ರತಿರೋಧ
ವ್ಯಕ್ತವಾಗುತ್ತಿದೆಯಲ್ಲವೇ?
ಇಲ್ಲ,
ಅಂತಹ ಅಸಮಾಧಾನದ ಉದಾಹರಣೆಗಳಿಲ್ಲ.
ನಮ್ಮದು ಶ್ರೇಣಿಯಾಧಾರಿತ ಪಕ್ಷ.
ಅಲ್ಲಿ ಅಸಮಾಧಾನಗಳಿಗೆ ಅವಕಾಶವಿಲ್ಲ.
ಮಾಧ್ಯಮಗಳು ಹೇಳುವಂತೆ ಯಾವುದೇ ಬಗೆಯ ಅಸಮಾಧಾನವೂ
ಪಕ್ಷದೊಳಗೆ ಇಲ್ಲ.
ಎಲ್ಲರನ್ನೂ ಒಮ್ಮತದ ತೀರ್ಮಾನದ ನಂತರ ಪಕ್ಷಕ್ಕೆ
ಸೇರಿಸಿಕೊಳ್ಳಲಾಗಿದೆ.
ಹಾಗೆ ಬಂದವರಿಗೆ ಸೂಕ್ತ ಸ್ಥಾನಮಾನ ನೀಡಲಾಗಿದೆ.
ಈ ವಿಷಯದ ಕುರಿತು ಪಕ್ಷದ ಒಳಗೆ ಯಾವುದೇ ಗೊಂದಲ
ಇಲ್ಲ.
ಆದರೆ,
ಬೆಳ್ಳುಬ್ಬಿಯವರ ಪ್ರಕರಣದಲ್ಲಿ ಅಸಮಾಧಾನ
ಬಹಿರಂಗವಾಗಿಯೇ ವ್ಯಕ್ತವಾಗಿದೆಯಲ್ಲವೇ?
ನೋಡಿ,
ಬೆಳ್ಳುಬ್ಬಿ ಪ್ರಕರಣದಲ್ಲಿ ಉಂಟಾಗಿರುವುದು
ಅಸಮಾಧಾನ ಅಲ್ಲ.
ಅವರು ಒಪ್ಪಿಯೇ ಸಚಿವ ಸ್ಥಾನ ತ್ಯಾಗ ಮಾಡುತ್ತಿದ್ದಾರೆ
ಎಂಬುದನ್ನು ಅವರ ಕ್ಷೇತ್ರದ ಕಾರ್ಯಕರ್ತರು ಅರಿಯಲಿಲ್ಲ.
ನಮ್ಮ ಕಡೆಯಿಂದ ಕೂಡ ತಪ್ಪಾಯಿತು.
ಅವರೇ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ನೀಡಿದ್ದಾರೆ
ಎಂಬ ಸಂದೇಶವನ್ನು ಸಕಾಲದಲ್ಲಿ ಕ್ಷೇತ್ರದ ಕಾರ್ಯಕರ್ತರಿಗೆ ತಲುಪಿಸುವಲ್ಲಿ ಆದ
ವ್ಯತ್ಯಯದಿಂದಾಗಿ ಅದೆಲ್ಲಾ ನಡೆಯಿತು.
ಹಾಗಾಗಿಯೇ ಕಾರ್ಯಕರ್ತರು ರಾಜೀನಾಮೆಗೆ
ಬೆಳ್ಳುಬ್ಬಿಯವರ ಒಪ್ಪಿಗೆ ಇಲ್ಲವೆಂದು ತಪ್ಪಾಗಿ ಭಾವಿಸಿ ಪ್ರತಿಭಟನೆ
ನಡೆಸಿದ್ದಾರೆ.
ಈಗ ವಿಷಯ ಗೊತ್ತಾಗಿರುವುದರಿಂದ ಎಲ್ಲರೂ ತಣ್ಣಗಾಗಿದ್ದಾರೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಗೆ
ಸೇರುತ್ತಿರುವವರೆಲ್ಲಾ ನೀಡುತ್ತಿರುವ ಸಮರ್ಥನೆಯೆಂದರೆ,
ವಿರೋಧ ಪಕ್ಷದಲ್ಲಿದ್ದರೆ ಕ್ಷೇತ್ರದ ಅಭಿವೃದ್ಧಿ
ಸಾಧ್ಯವಿಲ್ಲ ಎಂಬುದು.
ಅದರರ್ಥ ಸರ್ಕಾರ ಆಡಳಿತ ಪಕ್ಷದವರ ಕ್ಷೇತ್ರಗಳ ಅಭಿವೃದ್ಧಿಗೆ
ಮಾತ್ರ ನಿರ್ಧರಿಸಿದೆ ಎಂದೇ?
ಹಾಗೇನಿಲ್ಲ.
ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದ ಮೇಲೆ ಒತ್ತಡ
ಹಾಕಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದು ಸಾಧ್ಯ.
ಆಡಳಿತ ಪಕ್ಷದಲ್ಲಿದ್ದವರ ಕ್ಷೇತ್ರಗಳಿಗೆ ತುಸು
ಹೆಚ್ಚು ಅಭಿವೃದ್ಧಿ ಅನುದಾನ ಹರಿದುಹೋಗಬಹುದು.
ಹಾಗೆ ಅಭಿವೃದ್ಧಿ ಆಗುವುದೇ ಇಲ್ಲ ಎಂದೇನೂ ಇಲ್ಲ.
ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವುದು.
ಆದರೆ,
ಚಿಕ್ಕಬಳ್ಳಾಪುರದ ಶಾಸಕರು ನಿಮ್ಮ ಪಕ್ಷವನ್ನು
ಸೇರಿದಾಗ ಮುಖ್ಯಮಂತ್ರಿಗಳು ಕ್ಷೇತ್ರದ ಅಭಿವೃದ್ಧಿಗೆ ಹಣ ನೀಡುವುದಾಗಿ ಹೇಳಿದರು,
ಹಾಗಾಗಿ ಬಿಜೆಪಿ ಸೇರಿದೆ ಎಂದಿದ್ದಾರಲ್ಲ?
ಅದು ಅವರ ವೈಯಕ್ತಿಕ ಅಭಿಪ್ರಾಯ.
ಅಲ್ಲಿನ ಜನ ಅಭಿವೃದ್ಧಿ ಕಾರ್ಯದ ಬಗ್ಗೆ ಅವರಿಗೆ
ಒತ್ತಡ ಹಾಕಿದಾಗ ಅದನ್ನು ನಮ್ಮ ಬಳಿ ಪ್ರಸ್ತಾಪಿಸಿದಾಗ ಒಬ್ಬ ಮುಖ್ಯಮಂತ್ರಿಯಾಗಿ
ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವ ಮಾತನಾಡಿರಬಹುದು.
ಆದರೆ,
ಅದನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗದು.
ಎಲ್ಲಾ ಶಾಸಕರು ಅಭಿವೃದ್ಧಿಪರ ಸರ್ಕಾರಕ್ಕೆ ನಾವೂ
ಏನಾದರೂ ಕೊಡುಗೆ ಕೊಡಬೇಕು ಎಂದುಕೊಂಡೇ ಬರುತ್ತಿದ್ದಾರೆ.
ಅದಕ್ಕೆ ಅವರವರ ಕ್ಷೇತ್ರದ ಜನತೆಯ ಒತ್ತಾಸೆಯೂ
ಕಾರಣವಿರಬಹುದು.
ಪಕ್ಷೇತರರು ಕೂಡ ಬೆಂಬಲ ನೀಡಿರುವುದರ ಹಿಂದೆಯೂ ಇದೇ
ಉದ್ದೇಶವಿದೆ ವಿನಃ ಆಮಿಷವಾಗಲೀ,
ಪಕ್ಷಕ್ಕೆ ಸೇರಿದವರ ಕ್ಷೇತ್ರಗಳಿಗೆ ಮಾತ್ರ
ಅಭಿವೃದ್ಧಿ ಎಂಬುದಾಗಲೀ ಅಲ್ಲ.
ನಮ್ಮ ಸರ್ಕಾರದ ಪಾಲಿಗೆ ರಾಜ್ಯದಲ್ಲಿರುವ
ಪ್ರತಿಯೊಂದೂ ಕ್ಷೇತ್ರವೂ ಅಭಿವೃದ್ಧಿಯ ದೃಷ್ಟಿಯಲ್ಲಿ ಒಂದೇ ಆಗಿದೆ.
ಆ ಬಗ್ಗೆ ಮತದಾರರು ಯೋಚಿಸುವ ಅಗತ್ಯವಿಲ್ಲ.
ಹಾಗೇ,
ನಿಮ್ಮ ಸರ್ಕಾರದಲ್ಲಿ ರೆಡ್ಡಿ ಬ್ರದರ್ಸ್ ಸೂಪರ್
ಸಿಎಂಗಳಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ...
ನೋಡಿ,
ಇಂತಹ ಮಾತುಗಳು ಸರ್ಕಾರ ಅಸ್ತಿತ್ವಕ್ಕೆ ಬರುವ
ಮುಂಚೆಯಿಂದಲೂ ಕೇಳಿಬರುತ್ತಿದ್ದವು.
ಇವೇನು ಹೊಸ ಆರೋಪಗಳಲ್ಲ.
ಹಾಗೇನಾದರೂ ಅದು ನಿಜವಾಗಿದ್ದರೆ ಗಣಿಗಾರಿಕೆಯ ಬಗ್ಗೆ
ನಮ್ಮ ಸರ್ಕಾರ ಅಷ್ಟೊಂದು ಕಠಿಣ ನಿರ್ಧಾರ ಕೈಗೊಳ್ಳಲು ಸಾಧ್ಯವಿತ್ತೇ?
ಯಾರೂ ನಿರೀಕ್ಷೆ ಮಾಡಿರದ ರೀತಿಯಲ್ಲಿ ನಾವು
ಗಣಿಗಾರಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.
ಬಳ್ಳಾರಿಯವರು,
ಮುಖ್ಯಮಂತ್ರಿಗಳು ಸೇರಿಕೊಂಡು ಏನೋ ಮಾಡುತ್ತಿದ್ದಾರೆ
ಎಂದುಕೊಂಡಿದ್ದರು.
ಆದರೆ,
ಈಗ ಕಳೆದ ಮೂರು ತಿಂಗಳಿಂದ ನಾವು ಒಂದೇ ಒಂದು ಗಣಿಗಾರಿಕೆ
ಪರವಾನಗಿ ನೀಡಿಲ್ಲ,
ಜೊತೆಗೆ ಯಾವುದನ್ನೂ ನವೀಕರಿಸಿಲ್ಲ ಕೂಡ.
ಹಾಗಾದರೆ,
ಅಂತಹ ಮಾತುಗಳಿಗೆ ಏನು ಅರ್ಥ?
ಇಲ್ಲಿ ಎಲ್ಲ ರೀತಿಯ ಹೊಂದಾಣಿಕೆ ಇದೆ.
ಇವರಿಗೆ ರಾಜ್ಯಕ್ಕಿಂತ ಪಕ್ಷವೇ ಮುಖ್ಯ
'ಆಪರೇಷನ್
ಕಮಲ'ಕ್ಕೆ ಕಾಂಗ್ರೆಸ್
ಪಕ್ಷದಿಂದ ಈಗಾಗಲೇ ಮೂವರು ಶಾಸಕರು ಬಲಿಯಾಗಿದ್ದಾರೆ.
ಇನ್ನೂ ಕೆಲವರು ಅದೇ ಹಾದಿಯಲ್ಲಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಮುಖಂಡ ಮತ್ತು ವಿರೋಧ ಪಕ್ಷದ ನಾಯಕ
ಮಲ್ಲಿಕಾರ್ಜುನ ಖರ್ಗೆ ಟಿಎಸ್‌ಐನ ಬಿ.ಎಸ್.ನಾರಾಯಣಸ್ವಾಮಿ
ಜೊತೆ ನಡೆಸಿದ ಮಾತುಕತೆ
'ಆಪರೇಷನ್ ಕಮಲ'ದ
ಬಗ್ಗೆ ಏನು ಹೇಳುತ್ತೀರಿ?
ಬಿಜೆಪಿ ಈಗ ಮಾಡುತ್ತಿರುವುದು ಪ್ರಜಾಪ್ರಭುತ್ವದ
ಮೌಲ್ಯಗಳಿಗೆ ಮಾರಕ ಉಂಟು ಮಾಡುವಂತಹ ಬೆಳವಣಿಗೆ.
ಅಧಿಕಾರ,
ಹಣದ ಆಮಿಷ ತೋರಿಸಿ ಹೀಗೆ ಶಾಸಕರನ್ನು ಸೆಳೆಯುವುದೇ
ಬಿಜೆಪಿ 'ತತ್ವ
ಸಿದ್ಧಾಂತ'
ಎಂಬುದನ್ನು ತಾವೇ ಬಹಿರಂಗಪಡಿಸಿದ್ದಾರೆ.
ಇನ್ನು,
ಬೇರೆ ಪಕ್ಷದಿಂದ ಸೆಳೆದ ಶಾಸಕರಿಗೆ ಅಧಿಕಾರ ನೀಡಲು
ತಮ್ಮ ಪಕ್ಷದ ಸಚಿವರನ್ನೇ 'ತ್ಯಾಗ'
ಮಾಡಲು ಕರೆ ನೀಡಿದ್ದಾರೆ.
ಅದು ಎಂಥ ಬಗೆಯ 'ತ್ಯಾಗ'?
ಕರ್ನಾಟಕದ ರಾಜಕಾರಣ ಹಿಂದೆಂದೂ ಇಷ್ಟು ಅಧೋಗತಿಗೆ
ಇಳಿದಿರಲಿಲ್ಲ.
ಕಾಂಗ್ರೆಸ್ ಈಗಾಗಲೇ ಮೂವರು ಶಾಸಕರನ್ನು ಕಳೆದು
ಕೊಂಡಿದೆ.
ಜೊತೆಗೆ ಶಾಸಕರಾದ ನಾಗಮಾರಪಲ್ಲಿ,
ಸೋಮಣ್ಣ ಅವರು ಕೂಡಾ
'ಕಮಲ'ದ
ಹಾದಿಯಲ್ಲಿದ್ದಾರಂತಲ್ಲಾ?
ಅದೆಲ್ಲಾ ವದಂತಿಗಳಷ್ಟೇ.
ಕಾಂಗ್ರೆಸ್‌ನ ಇನ್ನಾವ ಶಾಸಕರೂ ಅತ್ತ ಸಾಗುವುದಿಲ್ಲ.
ನಿಜ ಸಂಗತಿಗೆ ನೀವು ಬೇಕಾದರೆ ಸಂಬಂಧಪಟ್ಟ
ಶಾಸಕರನ್ನೇ ಕೇಳಬಹುದು.
ವಿರೋಧ ಪಕ್ಷದ ಶಾಸಕರಾಗಿದ್ದರೆ ಕ್ಷೇತ್ರದ ಅಭಿವೃದ್ಧಿ
ಮಾಡುವುದು ಸಾಧ್ಯವಿಲ್ಲವೇ?
ಇದು ಪಕ್ಷಾಂತರ ಮಾಡುತ್ತಿರುವ ಶಾಸಕರು ಜನರ
ಕಣ್ಣಿಗೆ ಮಣ್ಣೆರಚಲು ಹೇಳುತ್ತಿರುವ ಮಾತಷ್ಟೇ.
ಕಾಂಗ್ರೆಸ್ ಪಕ್ಷ ಕಳೆದ ೪0
ವರ್ಷಗಳಲ್ಲಿ ಅಧಿಕಾರದಲ್ಲಿದ್ದಾಗ ಹೀಗೆ ವಿರೋಧ ಪಕ್ಷದ ಯಾವ ಸದಸ್ಯರೂ
ಹೇಳಿರಲಿಲ್ಲ.
ಅಂದರೆ ಏನರ್ಥ?
ಕಾಂಗ್ರೆಸ್ ಪಕ್ಷ ಎಲ್ಲಾ ಕ್ಷೇತ್ರದ
ಅಭಿವೃದ್ಧಿಯನ್ನೂ ಸಮಾನ ದೃಷ್ಟಿಯಿಂದ ನೋಡುತ್ತದೆ;
ಬಿಜೆಪಿ ವಿರೋಧ ಪಕ್ಷಗಳ ಸದಸ್ಯರ ಕ್ಷೇತ್ರಗಳನ್ನು
ಮಲತಾಯಿ ಧೋರಣೆಯಿಂದ ನೋಡುತ್ತದೆ ಎಂದರ್ಥ ಅಲ್ಲವೇ?
ಇದಕ್ಕೆ ಮುಖ್ಯಮಂತ್ರಿಗಳೇ ಉತ್ತರ ಹೇಳಬೇಕು.
ಪಕ್ಷದ ಶಾಸಕರನ್ನು ಆಡಳಿತ ಪಕ್ಷ
ಸೆಳೆದುಕೊಳ್ಳುತ್ತಿದ್ದರೂ ಅಂತಹ ಷಡ್ಯಂತ್ರಗಳನ್ನು ವಿಫಲಗೊಳಿಸುವ ನಿಟ್ಟಿನಲ್ಲಿ
ಕಾಂಗ್ರೆಸ್ ಮುಂದೆ ಯಾವುದೇ ಕಾರ್ಯತಂತ್ರವಿದ್ದಂತೆ ಇಲ್ಲವಲ್ಲ?
ಅದು ಅಂಥಾ ಷಡ್ಯಂತ್ರ,
ತಂತ್ರವೇನೂ ಅಲ್ಲ.
ಅವರ (ಬಿಜೆಪಿ)
ಬಳಿ ಅಧಿಕಾರ ಇದೆ.
ಹೀಗಾಗಿ ಇವರೆಲ್ಲಾ ಹೋಗುತ್ತಿದ್ದಾರೆ.
ನಮ್ಮಲ್ಲೇ ಅಧಿಕಾರ ಇದ್ದಿದ್ದರೆ ಹೀಗೆ ಅವರು
ಹೋಗುತ್ತಿದ್ದರೇ?
ಪಕ್ಷಾಂತರಿಗಳಿಗೆ ಛೀ ಥೂ ಎಂದು ಉಗಿಯುವಂತೆ ಕರೆಕೊಟ್ಟ
ನೀವು,
ಕೆಲವು ದಿನಗಳ ಹಿಂದೆ ನಿಮ್ಮದೇ ಯುಪಿಎ ಸರ್ಕಾರ ಅಧಿಕಾರದಲ್ಲಿ ಉಳಿದುಕೊಳ್ಳಲು
ಮಾಡಿದ ಸರ್ಕಸ್ಸನ್ನು ಹೇಗೆ ವಿಶ್ಲೇಷಿಸುತ್ತೀರಿ?
ಇಂಥ ಆರೋಪವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರೂ
ಮಾಡಿದ್ದಾರೆ.
ರಾಜ್ಯದಲ್ಲಿ ಆಗುತ್ತಿರುವ ಪಕ್ಷಾಂತರ ಬೆಳವಣಿಗೆಗೂ ಕೇಂದ್ರದ
ಬೆಳವಣಿಗೆಗೂ ತುಂಬಾ ವ್ಯತ್ಯಾಸವಿದೆ.
ರಾಜ್ಯದಲ್ಲಿನ ಹಾಗೆ ಕೇಂದ್ರದಲ್ಲಿ ಯಾವುದೇ ಇತರ
ಪಕ್ಷದ ಸಂಸದರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಂಡಿಲ್ಲ;
ಸಚಿವರನ್ನಾಗಿ ಮಾಡುವ ಆಮಿಷವನ್ನೂ ಒಡ್ಡಿಲ್ಲ.
ವಿರೋಧ ಪಕ್ಷಗಳ ಕೆಲವು ಸದಸ್ಯರು ಅಣು ಒಪ್ಪಂದವನ್ನು
ಬೆಂಬಲಿಸಿ ಸ್ವಇಚ್ಛೆಯಿಂದ ಸರ್ಕಾರದ ಪರ ಮತ ಚಲಾಯಿಸಿದ್ದಾರೆ.
ಇನ್ನು ಭಾರಿ ಮೊತ್ತದ ಲಂಚ ನೀಡಿದ ಆರೋಪ;
ಅದರ ಕುರಿತು ಸಭಾಪತಿಯವರು ತನಿಖೆ ನಡೆಸುತ್ತಿದ್ದಾರೆ.
ಒಂದು ವೇಳೆ ಯುಪಿಎ ಸರ್ಕಾರ ತಪ್ಪೆಸಗಿದ್ದಾಗಿ
ಸಾಬೀತಾದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ.
ಹಾಗೊಂದು ವೇಳೆ ಯುಪಿಎ ಆರೋಪಮುಕ್ತವಾದರೆ ಬಿ.ಎಸ್.
ಯಡಿಯೂರಪ್ಪ ಅವರು ಅವರ ಸ್ಥಾನಕ್ಕೆ ರಾಜೀನಾಮೆ
ನೀಡುತ್ತಾರೆಯೇ?
ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಅಷ್ಟೇಕೆ ಗೊಂದಲದಲ್ಲಿದೆ?
ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯಕ್ಕೆ
ಅಷ್ಟೊಂದು ಪ್ರಾಮುಖ್ಯತೆ ಕೊಡುವ ಅಗತ್ಯ ಇಲ್ಲ.
ಈಗ ನಾನು ರಾಜೀನಾಮೆ ಕೊಟ್ಟಿದ್ದರಿಂದ ಆ ವಿಷಯ
ಚರ್ಚೆಗೆ ಬಂದಿದೆ.
ರಾಜೀನಾಮೆ ಕೊಡದೇ ಇದ್ದಿದ್ದರೆ ಏನಾಗುತ್ತಿತ್ತು?
ಪಕ್ಷದ ಹೈಕಮಾಂಡ್ ಈ ಬಗ್ಗೆ ಚರ್ಚಿಸುತ್ತಿದೆ.
ಇನ್ನು
15 ದಿನಗಳೊಳಗೆ ಕೆಪಿಸಿಸಿ ನೂತನ ಅಧ್ಯಕ್ಷರನ್ನು
ಘೋಷಿಸಲಾಗುತ್ತದೆ.
ಬಿಜೆಪಿ ಆಡಳಿತ ವೈಖರಿ ತೃಪ್ತಿ ನೀಡಿದೆಯೇ?
ಅವರ ಆಡಳಿತ ಹೇಗೆ ಸಾಗುತ್ತಿದೆ ಎಂಬುದರ ಬಗ್ಗೆ
ಜನರೇ ಆಡಿಕೊಳ್ಳುತ್ತಿದ್ದಾರೆ.
ಯಾವುದೇ ವಿವೇಚನೆ ಇಲ್ಲದೆ ಯೋಜನೆಗಳಿಗೆ ಹಣ ನಿಗದಿ
ಮಾಡುತ್ತಿದ್ದಾರೆ.
ಬಿಜೆಪಿ ಸರ್ಕಾರದವರು ಅಭಿವೃದ್ಧಿಗೆ ಕವಡೆ ಕಿಮ್ಮತ್ತೂ ಕೊಡದೆ
'ಆಪರೇಷನ್
ಕಮಲ'ದತ್ತಲೇ
ಗಮನ ಕೊಟ್ಟಿದ್ದಾರೆ.
ರಾಜ್ಯದ ಹಿತಾಸಕ್ತಿಗಿಂತ ಪಕ್ಷದ ಹಿತಾಸಕ್ತಿಯೇ ಇವರಿಗೆ ಬಹಳ
ಮುಖ್ಯವಾಗಿ ಬಿಟ್ಟಿದೆ.
ಟಿಎಸ್‌ಐ
|