|
| ಪ್ರಶಾಂತೊ ಬ್ಯಾನರ್ಜಿ |
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್
|
ಸಾರಿಸ್ಕಾದ ರಾಷ್ಟ್ರೀಯ ಉದ್ಯಾನವನದ
ಕಟ್ಟಕಡೆಯ ಹುಲಿಯನ್ನು ಬೇಟೆಯಾಡಿ ಕೊಂದುಹಾಕಿ ಇದೀಗ ಹಲವು ಮಳೆಗಾಲಗಳು
ಕಳೆದುಹೋಗಿವೆ.
ಕೆಲವರ ಪ್ರಕಾರ ಹಾಗೆ ಬಲಿಯಾದ ಹುಲಿ ಒಂಟಿ ಕಣ್ಣಿನ
'ರಾಣಾ
ಸಂಗ'.
ಈ ಹಿಂದೆ ಇತರ ಗಂಡು ಹುಲಿಗಳೊಂದಿಗಿನ
ಪ್ರಾಸಂಗಿಕ ಹೋರಾಟಗಳಿಂದಾಗಿ ಎದೆಗುಂದಿದ್ದರೂ ಉದ್ಯಾನವನದ
'ಅನಭಿಷಕ್ತ
ದೊರೆ'
ಎಂಬ ಅದರ ಪಟ್ಟಕ್ಕೆ ಚ್ಯುತಿ ಬಂದಿರಲಿಲ್ಲ.
ಆದರೆ
2004ರ
ಹೊತ್ತಿಗೆಲ್ಲಾ ರಾಣಾನ ಘರ್ಜನೆ ಉಡುಗಿಹೋಯಿತು.
"ನಾನು ಇಲ್ಲಿಗೆ ವರ್ಗಾವಣೆಯಾಗಿ ಬಂದಾಗ,
ಬಹುಶಃ ರಾಣಾ ಅಲ್ಲೆಲ್ಲೋ ದೂರದಲ್ಲಿ,
ಚೀನಾದ ಸೂಪ್ ತಟ್ಟೆಯಲ್ಲಿ ಕರಗಿಹೋಗಿದ್ದನೇನೋ...
ಆದರೆ ನಾನು ದೇವಾಲಯದಿಂದ ನನ್ನ ಠಾಣೆಗೆ
ನಡೆದುಕೊಂಡು ಬರುವಾಗ ಅವನು ಇಲ್ಲಿಯೇ,
ನನ್ನ ಅಕ್ಕ-
ಪಕ್ಕ ಸಂಚರಿಸುವಂತೆ ಭಾಸವಾಗುತ್ತಿತ್ತು...
ಆದರೆ ಇಂದು...."
ಘೆವಾರ್‌ಚಂದ್ ಅಸಹಾಯಕತೆಯಿಂದ ಕಣ್ಣು ಕಿರಿದು
ಮಾಡಿದರು. "ಇವತ್ತು
ಆ ಹುಲಿಯ ಭೂತ ಕೂಡ ಇಲ್ಲಿ ಸುಳಿಯಲಾರದೇನೋ",
ಎನ್ನುತ್ತಾ ಕುಸಿದ ಚಂದ್‌ನ ಒಳಗಿನ ತಲ್ಲಣ,
ಮಡುಗಟ್ಟಿರುವ ಅಸಹಾಯಕತೆ,
ನೋವು,
ನನಗೆ ಅರ್ಥವಾಗದೇ ಇರಲಿಲ್ಲ.
ಅವರನ್ನು ನೋಡಿ ಅವರದ್ದು ಬಳಲಿಕೆಯೇ,
ನಿದ್ದೆಯ ಮಂಪರೇ ಅಥವಾ ಅವರ ಕಣ್ಣುಗಳು ನನ್ನ
ಕಣ್ಣುಗಳಂತೆಯೇ ಉರಿಯುತ್ತಿದ್ದವೇ...
ನನಗೆ ಆಶ್ಚರ್ಯವಾಯಿತು.
'ಸಾರಿಸ್ಕಾ'
ನಾನು ಜಗತ್ತಿನಲ್ಲಿ ಅತೀ ಹೆಚ್ಚು ಇಷ್ಟಪಡುವ ವನ್ಯಜೀವಿಗಳ ತಾಣ.
ಅಂದು ನಾನು ಸಾರಿಸ್ಕಾ ಉದ್ಯಾನವನಕ್ಕೆ
ರಣತಂಬೋರ್‌ನಿಂದ ಹೊಸದಾಗಿ ಬಂದ ಹುಲಿಗಳು ಅಲ್ಲಿ ತಾಂಡವವಾಡುತ್ತಿದ್ದ
ಭ್ರಷ್ಟಾಚಾರ,
ಹಣದ ದಾಹ,
ಉಪೇಕ್ಷೆಗಳ ನಡುವೆ ಅದು ಹೇಗೆ
ಬದುಕುತ್ತಿದ್ದಾವೆ ಎಂಬ ಕುತೂಹಲದೊಂದಿಗೆ ಭೇಟಿ ಕೊಟ್ಟಿದ್ದೆ.
ಅವುಗಳ ಪೂರ್ವಿಕರು ವ್ಯವಸ್ಥೆಯ ಅನಿಷ್ಟಗಳಿಗೆ
ಬಲಿಯಾಗಿದ್ದು ನನ್ನ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತ್ತು.
ಉದ್ಯಾನವನದಲ್ಲಿ ಒಂದು ಸುತ್ತು ಹಾಕಿ ಬಂದ ಮೇಲೆ
ಪಾಂಡು ಕೊಳದೆಡೆಗೆ ಹೋಗುತ್ತಿದ್ದ ತಪಾಸಣಾ ಠಾಣೆಯ ಅರಣ್ಯ ಸಿಬ್ಬಂದಿ
ಘೆವಾರ್‌ಚಂದ್ ಸಿಕ್ಕರು.
ಅವರನ್ನು ನನ್ನೊಂದಿಗೆ ಬರುವಂತೆ ಕೇಳಿದೆ.
ಸ್ವಲ್ಪ ದೂರ ಹೋಗುವಷ್ಟರಲ್ಲೇ ನಮ್ಮ ಜೀಪು
ಹಠಾತ್ತನೇ ನಿಂತಿತು.
ಕೆಸರಿನಿಂದಲ್ಲ,
ಜೌಗಿನಿಂದಲ್ಲ ಬದಲಿಗೆ ಟ್ರಾಫಿಕ್ ಜಾಮ್‌ನಿಂದ.
ಅರಣ್ಯದ ಮಧ್ಯೆ ಸಾಲು ಹಚ್ಚಿ ನಿಂತಿದ್ದ ಬಸ್ಸು,
ಕಾರು ಮುಂತಾದ ವಾಹನಗಳು ಆ ವನ್ಯಜೀವಿ ಸಂರಕ್ಷಣಾ
ವಲಯದಲ್ಲಿ ಕರಿಹೊಗೆಯ ಕಾರ್ಮೋಡವನ್ನೇ ಸೃಷ್ಟಿಸಿದ್ದವು.
ನೂರಾರು ಜನರ ಗದ್ದಲದಿಂದ ಆ ವಾತಾವರಣ
ಗಿಜಿಗುಟ್ಟುತ್ತಿತ್ತು.
ಇಷ್ಟೆಲ್ಲಾ ಗೌಜು-
ಗದ್ದಲ,
ಹೊಗೆಯ ಮಧ್ಯೆಯೂ ಕಾಡು ಮೊದಲಿನಂತೆಯೇ ಹಚ್ಚ
ಹಸಿರಿನಿಂದ ಕಂಗೊಳಿಸುತಿತ್ತು.
ಘೆವಾರ್‌ಚಂದ್ ಇಂದು ಬೆಳಿಗ್ಗೆ ತಾನೇ ಒಂದು
ಹೆಣ್ಣು ಹುಲಿಯನ್ನು ನೋಡಿದ್ದಾಗಿ ಹೇಳಿದರು.
ಹುಲಿಯ ಕುತ್ತಿಗೆಗೆ ರೇಡಿಯೋ ಕಾಲರ್
ಅಳವಡಿಸಲಾಗಿದ್ದು,
ವಿಜ್ಞಾನಿ ತಂಡವೊಂದು ಅವುಗಳ ಚಲನವಲನದ ಮೇಲೆ
ಕಣ್ಣಿಟ್ಟಿದ್ದಾರೆ.
ಉದ್ಯಾನವನದ ರಕ್ಷಣೆಯ ನಿಟ್ಟಿನಲ್ಲಿ ರಾಜಸ್ತಾನದ
ಸಶಸ್ತ್ರ ಪೊಲೀಸರ ತಂಡವೊಂದನ್ನು ನಿಯೋಜಿಸಲಾಗಿದೆ.
ನಾನು ಮಾತನಾಡಿಸಿದ ಅಧಿಕಾರಿಗಳೆಲ್ಲರೂ ಹುಲಿಗಳ
ನಾಶಕ್ಕೆ ಕಾರಣವಾಗಿರುವ ಎಲ್ಲಾ ವಿಷಯಗಳ ಬಗ್ಗೆ ಹೆಚ್ಚಿನ ನಿಗಾ
ವಹಿಸಿರುವುದಾಗಿ ಹೇಳಿದರು.
ಕಲ್ಲ್ಯಾ ಬಾವರಿಯಾನಂತಹ ಕಳ್ಳಬೇಟೆಗಾರರನ್ನು
ಬಂಧಿಸಲಾಗಿದೆ.
ಉದ್ಯಾನವನದ ವ್ಯಾಪ್ತಿಯ ಜನರನ್ನು ಸ್ಥಳಾಂತರಿಸಿ,
ಅವರಿಗೆ ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಭ್ರಷ್ಟ ಅರಣ್ಯ ರಕ್ಷಕರು ಮತ್ತು
ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದರು.
ಅವರು ಹೇಳಿದ್ದರಲ್ಲಿ ಸತ್ಯವಿತ್ತು.
ಘೆವಾರಚಂದ್,
ಕೆಲವು ಅರಣ್ಯ ಸಿಬ್ಬಂದಿ,
ಈಗ ಬಂಧಿಸಿರುವ ಬೇಟೆಗಾರರು ವ್ಯಾಪಕ ಜಾಲದ ಒಂದು
ಅಂಗವಷ್ಟೇ.
ಬಹಳ ಜನ ಕಳ್ಳ ಬೇಟೆಗಾರರು ಇನ್ನೂ ಉದ್ಯಾನವನದ
ಅಕ್ಕಪಕ್ಕದಲ್ಲಿರುವ ಗ್ರಾಮಗಳಲ್ಲೇ ಇದ್ದಾರೆ ಎಂಬುದನ್ನು ಅಂಜಿಕೆಯಿಂದಲೇ
ಹೇಳುತ್ತಾರೆ.
ಕೆಲವು ಗ್ರಾಮಸ್ಥರು ಕೂಡ,
ತಾವು ಈ ಹಿಂದೆ ಕೆಲವರು ಕಳ್ಳಬೇಟೆಗಾರರಿಗೆ
ಆಶ್ರಯ ನೀಡಿದ್ದು ನಿಜ.
ಆದರೆ,
ನಾವೇನು ಮಾಡುತ್ತಿದ್ದೇವೆ ಎಂದು ಗೊತ್ತಾಗುವ
ಮುನ್ನವೇ ಕಾಲ ಮಿಂಚಿತ್ತು ಎಂದು ಪಶ್ಚಾತ್ತಾಪ ವ್ಯಕ್ತಪಡಿಸಿದರು.
ಅಲ್ಲಿ ನಿಯೋಜಿತರಾದ ಕಾವಲುಗಾರರು ಮತ್ತು
ಸಶಸ್ತ್ರ ಪಡೆಯ ಸಿಬ್ಬಂದಿಗೆ ಕೂಡ ಬಂದೂಕು ಕೊಟ್ಟಿಲ್ಲ.
ತಮಗೆ ಕೊಟ್ಟ ದೊಣ್ಣೆಗಳಲ್ಲಿಯೇ ಅವರು ತಮಗೆ
ಮತ್ತು ಸಾರಿಸ್ಕಾದ ಹುಲಿಗಳಿಗೆ ರಕ್ಷಣೆ ಒದಗಿಸಬೇಕು.
ಅದಕ್ಕಿಂತ ದುರಾದೃಷ್ಟವೆಂದರೆ,
ವರ್ಗಾವಣೆಗೊಂಡಿದ್ದ ಅಧಿಕಾರಿಗಳು,
ತಮ್ಮ ಪ್ರಭಾವ ಬಳಸಿ
'ಬಡ್ತಿ'ಯೊಂದಿಗೆ
ಮರಳಿ ಸಾರಿಸ್ಕಾಕ್ಕೇ ಬಂದು ಠಿಕಾಣಿ ಹೂಡಿದ್ದಾರೆ ಎನ್ನುತ್ತಾರೆ ಘೆವಾರ್.
ವಿಪರ್ಯಾಸವೆಂದರೆ,
ಘೆವಾರ್ ಕಳೆದ
30
ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ,
ಒಮ್ಮೆಯೂ ಅವರಿಗೆ ಬಡ್ತಿ ಸಿಕ್ಕಿಲ್ಲ,
ಈಗ ಇನ್ನೇನು ನಿವೃತ್ತಿಯ ಅಂಚಿನಲ್ಲಿ ಅದರ
ಅಗತ್ಯವೂ ಇಲ್ಲ ಎಂಬುದು ಅವರ ಅನಿಸಿಕೆ.
ಕೊನೆಗೆ,
ದಾರಿ ತೆರವಾಯಿತು.
ಅಲ್ಲಿಂದ ನಾವು ಮುಂದೆ ಸಾಗಿದೆವು.
ಆ ಪ್ರದೇಶ ಹಳ್ಳಿಗಳ ಮೈದಾನದಂತೆ ಕಾಣುತ್ತಿತ್ತೇ
ವಿನಃ ಸುಸಜ್ಜಿತ ರಕ್ಷಣಾ ವ್ಯವಸ್ಥೆಯುಳ್ಳ ಹುಲಿಗಳ ಸಂರಕ್ಷಣಾ
ಉದ್ಯಾನವನದಂತೆ ಕಾಣುತ್ತಿರಲಿಲ್ಲ.
ಪ್ಲಾಸ್ಟಿಕ್ ಚೀಲಗಳು,
ಬಾಟಲಿಗಳು ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ
ಬಿದ್ದಿದ್ದವು.
ಈಗ ಸಾರಿಸ್ಕಾದ ಹುಲಿಗಳ ಪಾಲಿಗಿರುವುದು,
ವಯಸ್ಸಾದ,
ಕೈಲಾಗದ ರಕ್ಷಣಾ ಸಿಬ್ಬಂದಿ
(ಕಳೆದ
20
ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿಲ್ಲ),
ಸುತ್ತ-ಮುತ್ತ
ಮನೆಮಠ ಕಳೆದುಕೊಂಡ ಅಸಹಾಯಕ ಹಳ್ಳಿಗರ ಗೋಳು ಮತ್ತು ಭ್ರಷ್ಟ,
ಬೇಜವಾಬ್ದಾರಿ ಮತ್ತು ದಿವ್ಯ ನಿರ್ಲಕ್ಷ್ಯದ
ಅಧಿಕಾರಿಗಳ ನಿರ್ವಹಣೆ (ಅವರಲ್ಲಿ
ಯಾರ ಮೇಲೂ ಇಲ್ಲಿಯತನಕ ಮೊಕದ್ದಮೆ ದಾಖಲಾಗಿಲ್ಲ).
ಬಹಳಷ್ಟು ಹುಲಿಗಳು ಉದ್ಯಾನದ ನಡುವಿನ
ರಸ್ತೆಯಲ್ಲಿ ಸಂಚರಿಸುವ ವಾಹನಗಳ ಚಕ್ರಕ್ಕೆ ಸಿಲುಕಿ ಪ್ರಾಣಬಿಟ್ಟ
ಉದಾಹರಣೆಗಳೂ ಇವೆ.
ನಾನೊಂದು ವೇಳೆ ಬಾಜಿ ಕಟ್ಟುವವನಾಗಿದ್ದರೆ,
ಹುಲಿಗಳ ಉಳಿಗಾಲದ ಕುರಿತು ನಾನೆಂದೂ ಬಾಜಿ
ಕಟ್ಟುವ ಧೈರ್ಯ ಮಾಡುತ್ತಿರಲಿಲ್ಲ.
ಇಂತಹ ವಾತಾವರಣದಲ್ಲಿ ಇಲ್ಲಿಯ ತನಕ ಬದುಕುಳಿದ
ಹುಲಿಗಳ ಬಗ್ಗೆ ನನಗೆ ನಿಜಕ್ಕೂ ಆಶ್ಚರ್ಯವುಂಟಾಗುತ್ತದೆ.
ನನ್ನ ಮುಖದ ಮೇಲೆ ಆವರಿಸುತ್ತಿದ್ದ
ನಿರಾಶೆಯನ್ನು ಗಮನಿಸಿರಬೇಕು,
ನಾನು ಹೊರಟಾಗ ಘೆವಾರ್‌ಚಂದ್ ನನ್ನೆಡೆಗೆ ಕೈ
ಬೀಸಿ, "ಇನ್ನೂ
ಭರವಸೆ ಇದೆ ಸಾರ್,....
ನಮಗೆ ತುಸು ಪ್ರೋತ್ಸಾಹ ಕೊಟ್ಟು ಬಂದೂಕು
ನೀಡಿದರೆ ಸಾರಿಸ್ಕಾದ ಹುಲಿಗಳನ್ನು ಮಾತ್ರವಲ್ಲ,
ಅವುಗಳ ಜೊತೆಗೆ ನಮ್ಮ ಇಲಾಖೆಯ ಮರ್ಯಾದೆಯನ್ನು
ಕಾಪಾಡಬಹುದು...."
ಎಂದರು.
ಆದರೆ,
ಅಂತಹ ಭರವಸೆಗಳಿಗೆ ಭರವಸೆಗಳಷ್ಟೇ ಇಲ್ಲಿ ಆಸರೆ
ಎಂಬುದು ವಿಪರ್ಯಾಸ.
ಹಾಗಾಗಿ ಸಾರಿಸ್ಕಾದ ಹುಲಿಗಳು ಕೂಡ ಕುರಿಗಳಂತೆ
ಕಸಾಯಿಖಾನೆಯ ಕಡೆ ಮುಖಮಾಡುವ ದಿನಗಳು ದೂರವಿಲ್ಲ.
ಐಐಪಿಎಂ
ಥಿಂಕ್ ಟ್ಯಾಂಕ್
ಹರಿವಿನ ಬದಿ ತಡವಾದ ಅಲ್ಪಕಾರ್ಯ

ರಣತಂಬೋರ್‌ನ ಎರಡು ಹುಲಿಗಳನ್ನು ವಿಮಾನದ
ಮೂಲಕ ಸಾರಿಸ್ಕಾ ಹುಲಿ ಸಂರಕ್ಷಣಾಧಾಮಕ್ಕೆ ಸ್ಥಳಾಂತರಿಸಿದ್ದು,
ವನ್ಯಜೀವಿ ಸಂರಕ್ಷಣಾ ಕ್ಷೇತ್ರದಲ್ಲಿಯೇ ಒಂದು
ಮೈಲಿಗಲ್ಲು.
ಆದರೂ,
ಅಲ್ಲಿ ಆ ಹುಲಿಗಳು ಅಷ್ಟೇನೂ ಸಮೃದ್ಧವಾಗಿಲ್ಲ
ಎಂಬುದು ವಾಸ್ತವ.
ಅಲ್ಲಿ 2004ರಲ್ಲಿ
ಬದುಕಿದ್ದ ಕೊನೆಯ ಹುಲಿಯನ್ನೂ ಕಳ್ಳಬೇಟೆಗಾರರು ಆಧುನಿಕ ಬಂದೂಕು,
ಲೋಹದ ಟ್ರ್ಯಾಪ್ಸ್ ಬಳಸಿ ನಿರ್ನಾಮ ಮಾಡಿದಾಗ,
ಹುಲಿಗಳ ಸಂಕಷ್ಟಗಳಿಗೆ ಪೂರ್ಣ ವಿರಾಮ
ಬಿದ್ದಿತ್ತು.
ಹುಲಿಗಳ ಮಾರಣಹೋಮ ಅವ್ಯಾಹತವಾಗಿ ಸಾಗಿದ್ದರೂ ಅದನ್ನು
ಕಂಡೂ ಕಾಣದಂತಿದ್ದ,
ಉದ್ಯಾನವನದಲ್ಲಿರುವ ಹುಲಿಗಳ ಸಂಖ್ಯೆಯನ್ನು
ಉತ್ಪ್ರೇಕ್ಷಿಸಿ ಅಂಕಿ-ಅಂಶಗಳನ್ನು
ನೀಡುತ್ತಿದ್ದ ಬೇಜವಾಬ್ದಾರಿ ಅಧಿಕಾರಿಗಳಿಗೆ ಮಾತ್ರ ಕ್ಷಮೆಯೇ ಇಲ್ಲ.
ಇಲ್ಲಿನ ಅಧಿಕಾರಶಾಹಿಗೆ ಅದೆಷ್ಟು ಬೇಜವಾಬ್ದಾರಿ
ಮತ್ತು ಅಲಕ್ಷ್ಯವೆಂದರೆ,
2004ರಲ್ಲಿ
ಸಾರಿಸ್ಕಾದ ಸಂರಕ್ಷಣಾಧಾಮದಲ್ಲಿ ಹುಲಿಗಳು ಸಂಪೂರ್ಣ ನಾಮಾವಶೇಷವಾಗಿವೆ
ಎಂಬುದನ್ನು ಮೊದಲು ಪತ್ತೆ ಮಾಡಿದ್ದು
'ಭಾರತೀಯ
ವನ್ಯ ಜೀವಿ ಸಂಸ್ಥೆ'
ಮತ್ತು ಖಾಸಗಿ ವ್ಯಕ್ತಿಯೊಬ್ಬರೇ ವಿನಃ ಸಾರಿಸ್ಕಾದ ಆಡಳಿತ ವರ್ಗವಲ್ಲ!
ಸ್ಟೇಟ್ ಎಂಪವರ್‌ಮೆಂಟ್ ಕಮಿಟಿ(ಎಸ್‌ಇಸಿ)
ತನ್ನ ಶಿಫಾರಸಿನಲ್ಲಿ ಸಾರಿಸ್ಕಾದಲ್ಲಿರುವ
ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಹೊರತುಪಡಿಸಿ ಅಲ್ಲಿನ ಕ್ಷೇತ್ರ
ನಿರ್ದೇಶಕರು ಮತ್ತು ವೈಜ್ಞಾನಿಕ ಅಧಿಕಾರಿಗಳಿಗೆ ಅವರವರ ಕಾರ್ಯಕ್ಷೇತ್ರದ
ವ್ಯಾಪ್ತಿಯನ್ನು ನಿಗದಿ ಮಾಡಬೇಕು.
ಆ ಮೂಲಕ ೮೮೧ ಚದರ ಕಿ.ಮೀ.
ವ್ಯಾಪ್ತಿಯ ಉದ್ಯಾನದಲ್ಲಿ ಸಂಶೋಧನೆ
ಕಾರ್ಯಗಳಿಂದ ಅನಗತ್ಯವಾಗಿ ಪ್ರಾಣಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು
ಎಂದು ಹೇಳಿದೆ.
ಆ ನಿಟ್ಟಿನಲ್ಲಿ ಇದೀಗ ಹಳೆಯ ಗಣತಿ ಕ್ರಮಕ್ಕೆ ಬದಲಾಗಿ
ಅತ್ಯಾಧುನಿಕ ರೇಡಿಯೋ ಕಾಲರ್ ಅಳವಡಿಸಲಾದ ಹುಲಿಗಳನ್ನು ಸಾರಿಸ್ಕಾ
ಉದ್ಯಾನವನದಲ್ಲಿ ಬಿಟ್ಟಿರುವುದು ಸುಧಾರಣೆಯ ಚಿಹ್ನೆಯಾಗಿದೆ.
ಟಿಎಸ್‌ಐ
|