|

ಚಿತ್ರಸಾಹಿತಿಯಾಗಲು
ಸ್ಫೂರ್ತಿ...
ನಾನೊಬ್ಬ ಗಾಯಕನಾಗಬೇಕೆಂದು ಬೆಂಗಳೂರಿಗೆ ಬಂದೆ.
ಆದರೆ
ಕಲ್ಯಾಣ್ ಜೊತೆ ಕೆಲಸ ಮಾಡಿದ ಅನುಭವ ನನ್ನನ್ನು ಚಿತ್ರಸಾಹಿತಿಯಾಗಿಸಿತು.
ಚಿತ್ರಸಾಹಿತಿ
ಮತ್ತು ನಿರ್ದೇಶಕರ ನಡುವಿನ ಸಂಬಂಧ?
ನಿರ್ದೇಶಕನ
ಅಭಿರುಚಿ ಮತ್ತು ಸಾಹಿತಿಯ ಆಶಯಗಳೆರಡೂ ಸರಿಯಾಗಿ ಹೊಂದಿಕೆಯಾದರೆ ಉತ್ತಮ
ಚಿತ್ರಸಾಹಿತ್ಯ ಸಾಧ್ಯ.
ಇವತ್ತಿನ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ
ಹೊಸಬರ ಬಗ್ಗೆ?
ಕನ್ನಡಕ್ಕೆ ಒಳ್ಳೆಯ ನಿರ್ದೇಶಕರು,
ನಿರ್ಮಾಪಕರು,
ಪ್ರತಿಭಾನ್ವಿತ ನಟರು ಬರುತ್ತಿದ್ದಾರೆ.
ಆದರೆ,
ದಿಢೀರನೆ ಹಣ ಗಳಿಸುವ ಅತಿಯಾಸೆಯಿಂದ ಯಾವುದೋ ಒಂದು ಸೀಮಿತ ವರ್ಗಕ್ಕಾಗಿ
ಚಿತ್ರ ನಿರ್ಮಿಸುತ್ತಾರೆ.
ಚಿತ್ರಸಾಹಿತಿಗಳ ಸ್ಥಿತಿ ಹೇಗಿದೆ?
ಇತರ
ಭಾಷೆಗಳ ಚಿತ್ರಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಸಂಭಾವನೆ ಸಮಸ್ಯೆ ತುಂಬಾ
ಇದೆ.
ಕನ್ನಡದಲ್ಲಿ ಸ್ವಂತ ಕಥೆಗಳಿಗೆ ಬರವಿದೆಯೇ?
ಖಂಡಿತ
ಇಲ್ಲ,
ಆದರೆ
ಕನ್ನಡ ಚಿತ್ರರಂಗದಲ್ಲಿ ರಿಮೇಕ್ ಮಾಡಿದರಷ್ಟೇ ಚಿತ್ರ ಎನ್ನುವ ಅಭಿಪ್ರಾಯ
ಇದೆ.
ಹಾಗಾಗಿ ಸ್ವಂತ ಕಥೆಗಳ ಬಗ್ಗೆ ಇಲ್ಲಿಯ ಮಂದಿ ಯೋಚಿಸುವುದೇ ಇಲ್ಲ.
ಅಭಿನಯದತ್ತ...
ಒಲವಿದೆ.
ಆದರೆ ಬರವಣಿಗೆಗೆ ಮೊದಲ ಪ್ರಾಶಸ್ತ್ಯ.
ಟಿಎಸ್‌ಐ
ಚಿತ್ರಾ ಕರ್ಕೇರಾ |