ಪ್ರತಿಭಟನೆಯ ಪರಿಚಯ ನೀಡಿದೆ.
ಪ್ರಜೆಗಳ ನಿರೀಕ್ಷೆಗಳಿಗೆ ಸ್ಪಂದಿಸುವ ಅರ್ಹ ಪಕ್ಷವನ್ನು ಗುರುತಿಸಿ
ಮತದಾರ ತನ್ನ ಅಮೂಲ್ಯ ಮತ ನೀಡಿದ್ದಾನೆ. ಆತ ರಾಜಕೀಯ ಪಕ್ಷಗಳ ಪರಸ್ಪರ ವಾಗ್ದಾಳಿ, ಅಪಪ್ರಚಾರಕ್ಕೆ
ತಲೆಬಾಗದೆ ತನ್ನ ಹೃದಯಸ್ಪರ್ಶಿಸಿದ ವಿಚಾರಕ್ಕೇ ಮಹತ್ವಕೊಟ್ಟಿದ್ದಾನೆ ಮತ್ತು ಆ ನಿಟ್ಟಿನಲ್ಲಿ
ಪ್ರಬುದ್ಧತೆಯಿಂದ ಮತ ಹಾಕಿದ್ದಾನೆ. ಈ ಬಾರಿ ಮತದಾರ ರಾಜಕೀಯ ಧುರೀಣರ ಪೊಳ್ಳು ಮಾತುಗಳಿಗೆ ಬೆಲೆ
ಕೊಡಲಿಲ್ಲ. ಆಶ್ವಾಸನೆ, ಪರಸ್ಪರ ಕಾಲೆಳೆಯುವ ರಾಜಕೀಯದಿಂದ ಬೇಸತ್ತ ಜನತೆ ಸ್ಥಿರ ಸರ್ಕಾರದತ್ತ
ಮನಮಾಡಿದ್ದಾನೆ. ಜಾತಿ ಮತ್ತು ಭಾಷಾ ಪರಕೀಯ ಭಾವನೆಗಳ ಪ್ರಚೋದನೆಗಳ ಅಡಿಯಾಳಾಗಿಲ್ಲ. ಎಲ್ಲ
ವೈಪರೀತ್ಯಗಳ ಹೊರಗೆ ನಿಂತು ಮತದಾರ ಯೋಚಿಸಿದ್ದಾನೆ. ಈ ಬಾರಿ ಅಪರಾಧ ಹಿನ್ನೆಲೆಯುಳ್ಳ ರಾಜಕಾರಣಿಗಳು
ಮಾತ್ರವಲ್ಲ, ಅವರ ಸಂಬಂಧಿಗಳನ್ನು ಕೂಡ ಮತದಾರ ನಿರಾಕರಿಸಿದ್ದಾನೆ. ಈ ದೇಶ ಎದುರಿಸುತ್ತಿರುವ
ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ ಎನ್ನುವ ವಾಸ್ತವವನ್ನು ಮತದಾರರು
ಅರಿತಿದ್ದಾರೆ. ಅಭ್ಯರ್ಥಿಯ ರಾಷ್ಟ್ರೀಯಬದ್ಧತೆ, ಸಮಗ್ರತೆ ಮತ್ತು ಸಾಮರ್ಥ್ಯವನ್ನು ಮತದಾರರು
ಗುರುತಿಸಿದ್ದಾರೆ. ಒಟ್ಟಿನಲ್ಲಿ ಈ ಲೋಕಸಭಾ ಚುನಾವಣೆ ಮತದಾರರು ಸಾಕಷ್ಟು ಪ್ರಜ್ಞಾವಂತರು
ಎಂಬುದಕ್ಕೆ ಸೂಕ್ತ ಪುರಾವೆ ಒದಗಿಸಿದೆ. ಪ್ರಸ್ತುತ ಅಧಿಕಾರದ ಗಾದಿ ಏರಿರುವ ಯುಪಿಎ ಸರ್ಕಾರ, ಜನರ
ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚುವ ಸಾಧ್ಯತೆಯನ್ನು
ಅಲ್ಲಗಳೆಯಲಾಗದು.
ಮಾಧ್ಯಮ ನೀತಿ ಕುರಿತಾಗಿ ಟಿಎಸ್‌ಐಯಲ್ಲಿ ಮೂಡಿಬಂದ ಲೇಖನ
ಅರ್ಥಪೂರ್ಣವಾಗಿತ್ತು. ಪ್ರಸ್ತುತ ರಾಜಕೀಯ ಪಕ್ಷಗಳ ಗುಲಾಮರಂತೆ ವರ್ತಿಸುವ ಮಾಧ್ಯಮಲೋಕದ ಕೆಟ್ಟ
ಚಾಳಿಯನ್ನು ಅನಾವರಣಗೊಳಿಸಿದೆ. ವಿಪರ್ಯಾಸ ಎಂದರೆ ಇಂಥ ಮಾಧ್ಯಮಗಳ ಪರಿಣಾಮವಾಗಿಯೇ ರಾಜಕೀಯ ರಂಗ
ಹಣದ ಅಮಲಿನಲ್ಲಿ ತೇಲುತ್ತಿದೆ. ಇಂಥ ಸನ್ನಿವೇಶದಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದ್ದ
ಮಾಧ್ಯಮಗಳು ಹಣ ಪಡೆದುಕೊಂಡು ರಾಜಕೀಯ ಭಟ್ಟಂಗಿಗಳಂತೆ ವರ್ತಿಸುತ್ತವೆ ಎನ್ನುವುದು ನಾಚಿಕೆಗೇಡಿನ
ಸಂಗತಿ! ಭಾರತೀಯ ಚುನಾವಣಾ ಇತಿಹಾಸದಲ್ಲೇ ದಾಖಲೆ ವೆಚ್ಚ ಮಾಡಿದ್ದು 2009ರ ಲೋಕಸಭೆ ಚುನಾವಣೆಯಲ್ಲಿ
ಎನ್ನಬಹುದು. ಚುನಾವಣಾ ಆಯೋಗದ ಮಿತಿಯನ್ನೂ ಮೀರಿ ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣೆಗಾಗಿ
ಬರೋಬ್ಬರಿ ಹಣ ಚೆಲ್ಲಿದ್ದಾರೆ. ಚುನಾವಣೆಗಾಗಿ ಕೋಟ್ಯಂತರ ಕಪ್ಪು ಹಣ ಹರಿಯುವುದನ್ನು ವರದಿ ಮಾಡುವ
ಮಾಧ್ಯಮಗಳು, ಜಾಹೀರಾತುಗಳ ಮೂಲಕ ತಮಗೆ ಬರುವ ಇದೇ ಹಣವನ್ನು ಜೇಬಿಗಿಳಿಸಿಕೊಂಡು ಹಾಯಾಗಿರುತ್ತವೆ!
ಕೇವಲ ಮತಬ್ಯಾಂಕ್‌ಗಾಗಿ ಕೋಟ್ಯಂತರ ಹಣ ಪೋಲು ಮಾಡುವ ಅಭ್ಯರ್ಥಿಗಳ ವೆಚ್ಚಕ್ಕೆ ಕಡಿವಾಣ ಹಾಕಲೇಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿ ತೋರಿಸಬೇಕಾದ ಮಾಧ್ಯಮರಂಗ ತಮ್ಮ ಹೊಣೆಯನ್ನು ನಿಷ್ಠೆಯಿಂದ
ನಿಭಾಯಿಸಬೇಕಾದ ಅಗತ್ಯವಿದೆ ಅಲ್ಲವೇ?
ಜೆ. ಅಭಯ್
ಬೆಂಗಳೂರು
ಮತದಾರನ ಪ್ರಬುದ್ಧತೆ!
'ನಿಜವಾದ ನಿರ್ಣಾಯಕ ಮಹಿಳೆ' (ರಂಜಿತ್ ಭೂಷಣ್) ಲೇಖನ ಚೆನ್ನಾಗಿ
ಮೂಡಿಬಂದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತದಾರ ಪ್ರಬುದ್ಧತೆ ಮೆರೆದಿದ್ದಾನೆ. ಕೇಂದ್ರದಲ್ಲಿ
ಮತ್ತೆ ಅತಂತ್ರ ಸರ್ಕಾರ ಕಾಣುವ ಕುರಿತು ನಿರಾಶರಾಗಿದ್ದ ಅದೆಷ್ಟೋ ಮಂದಿಗೆ ಈಗ ಸಮಾಧಾನವಾಗಿದೆ.
ಬಹಳಷ್ಟು ಸಮೀಕ್ಷೆಗಳು ಯುಪಿಎ ಸರ್ಕಾರ ಹೆಚ್ಚು ಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದರೂ,
ಕೇಂದ್ರದಲ್ಲಿ ಮತ್ತೆ ಅತಂತ್ರ ಸರ್ಕಾರವನ್ನೇ ನಿರೀಕ್ಷಿಸಿದವು. ಆದರೆ ಮತದಾರ ಎಲ್ಲರ ನಿರೀಕ್ಷೆಗೂ
ಮೀರಿ ಅಚ್ಚರಿಯ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದಾನೆ. ಒಂದು ವೇಳೆ ಯುಪಿಎ ಭದ್ರ ಬಹುಮತ
ಪಡೆಯದಿದ್ದಲ್ಲಿ ಪಕ್ಷಗಳ ತಿಕ್ಕಾಟಕ್ಕೆ ದೇಶ ಬಲಿಯಾಗಬೇಕಿತ್ತು. ಇನ್ನು ಐದು ವರ್ಷ ಜನತೆಗೆ
ಚುನಾವಣೆಯ ಚಿಂತೆಯಿಲ್ಲ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೂ ಹೆಚ್ಚಿನ ಹೊರೆ ಬೀಳಲಿಲ್ಲ.
ಸುಭದ್ರ ಸರ್ಕಾರ ರಚಿಸುವ ಅವಕಾಶ ಪಡೆದ ಯುಪಿಎ ದೇಶವನ್ನು ಅಭಿವೃದ್ಧಿಯ ಕಡೆ ಮುನ್ನಡೆಸಲು ರಾಜಿ
ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಆದರೆ ಸರ್ಕಾರ ಈ ಅವಕಾಶವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದೆ
ಎನ್ನುವುದನ್ನು ಕಾದು ನೋಡಬೇಕು.
ಸೀಮಾ ವಸಂತ್
ಬೆಂಗಳೂರು
ಆತಂಕ ಸುಳ್ಳಾಯಿತು!
ಚುನಾವಣೆಗೆ ಮುನ್ನ ನಡೆಯುತ್ತಿದ್ದ ರಾಜಕೀಯ ದೊಂಬರಾಟ, ಉರಿಯುವ
ಮನೆಯಲ್ಲಿ ಗಳ ಹಿರಿಯುವ ಪ್ರಾದೇಶಿಕ ಪಕ್ಷಗಳು... ಹೀಗೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಾತ್ರ
ಕಾಣಬಹುದಾದ ವಿಲಕ್ಷಣ ಸನ್ನಿವೇಶ ಅತಂತ್ರ ಲೋಕಸಭೆಯ ಆತಂಕ ಸೃಷ್ಟಿಸಿತ್ತು. ನಂತರ ನಡೆಯುವ ರಾಜಕೀಯ
'ಅಸಹ್ಯ'ಗಳಿಗೆ ಜನತೆಯನ್ನು ಸಾಕ್ಷಿಯನ್ನಾಗಿಸುತ್ತದೋ ಎಂಬ ಆತಂಕವಿತ್ತು. ಒಂದು ವೇಳೆ ಅತಂತ್ರ
ಲೋಕಸಭೆ ಸೃಷ್ಟಿಯಾಗಿದ್ದರೆ ಕಾಂಗ್ರೆಸ್ ಬೆಂಬಲದೊಂದಿಗೆ ರಾಷ್ಟ್ರಪತಿ ಸ್ಥಾನಕ್ಕೇರಿರುವ ಪ್ರತಿಭಾ
ಪಾಟೀಲರ ರಾಜಕೀಯ ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಪರೀಕ್ಷೆಗೊಳಪಡುತ್ತಿತ್ತು. ಸ್ಥಿರ ಲೋಕಸಭೆಗೆ
ಮನ್ನಣೆ ನೀಡುವ ಮೂಲಕ ಮತದಾರ ರಾಷ್ಟ್ರಪತಿ ಸ್ಥಾನದ ಗೌರವ ಕಾಪಾಡಿದ್ದಾನೆ.
ಎಸ್. ಪ್ರವೀಣ್ ಕುಮಾರ್
ಕುಂದಾಪುರ
ಗ್ರಾಮೀಣ ಜನತೆಗೆ ಶಿಕ್ಷಣ
'ನಿಜವಾದ ನಿರ್ಣಾಯಕ ಮಹಿಳೆ' (ರಂಜಿತ್ ಭೂಷಣ್) ಟಿಎಸ್‌ಐ ಮುಖಪುಟ
ಲೇಖನ ಸಮಸ್ತ ಭಾರತೀಯರ ನಿರೀಕ್ಷೆಯೂ ಆಗಿತ್ತು. ಒಂದೆಡೆ ಆರ್ಥಿಕ ಮುಗ್ಗಟ್ಟು, ಇನ್ನೊಂದೆಡೆ ಯುಪಿಎ
ಸರ್ಕಾರದ ಜಡ ಪ್ರವೃತ್ತಿಯಿಂದ ಬೇಸತ್ತ ಮತದಾರ ಅತಂತ್ರ ಸರ್ಕಾರದ ಕೊಡುಗೆಯನ್ನೇ ನೀಡುತ್ತಾನೆನ್ನುವ
ಊಹೆ ಸುಳ್ಳಾಯಿತು. ಚುನಾವಣೆಗಳು ಈಗ ಸಂಕೀರ್ಣಗೊಳ್ಳುತ್ತಿವೆ ಎನ್ನುವುದು ನಿಜ. ಊಹೆಗೆ ಮೀರಿದ
ಫಲಿತಾಂಶಗಳು ಸಿಗುತ್ತಿವೆ. ಈ ಬಾರಿಯ ಲೋಕಸಭೆ ಚುನಾವಣೆಯೂ ಇದಕ್ಕೆ ಹೊರತಾಗಿಲ್ಲ. ಪಶ್ಚಿಮ ಬಂಗಾಳದ
ನಂದಿಗ್ರಾಮ ನರಹತ್ಯೆ ಎಡಪಕ್ಷಗಳಿಗೆ ಪೆಟ್ಟು ನೀಡಿದರೆ, ಎನ್‌ಡಿಎಯ ಅನಾದಿಕಾಲದ ರಾಮಸೇತುವೆ ವಿಷಯವೂ
ಲಾಭ ತರಲಿಲ್ಲ. ಇನ್ನೊಂದೆಡೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಪ್ರಚಾರ ವೈಖರಿ
ದೇಶದಾದ್ಯಂತ ಹೊಸ ಅಲೆ ಸೃಷ್ಟಿಸಿವೆ ಎಂದರೆ ತಪ್ಪಾಗದು. ಚುನಾವಣೆ ಮುಗಿಯಿತು, ಯುಪಿಎ
ಅಗತ್ಯಕ್ಕಿಂತ ಹೆಚ್ಚೇ ಬೆಂಬಲ ಬಲ ಪಡೆದು ಅಧಿಕಾರ ಗಾದಿ ಹಿಡಿದಿದೆ. ಅಜ್ಜ ನೆಟ್ಟ ಆಲದ ಮರಕ್ಕೆ
ಜೋತು ಬೀಳದೆ ದೇಶವನ್ನು ಸಮಗ್ರತೆಯತ್ತ ಕೊಂಡೊಯ್ಯಲು ಇದು ಸಕಾಲ. ಗ್ರಾಮೀಣ ಪ್ರದೇಶಗಳ ಜನತೆಗೆ
ಶಿಕ್ಷಣ ದೊರೆಯುವಂತಾಗಬೇಕು. 'ಗ್ರಾಮೋದ್ಧಾರವೇ ದೇಶದುದ್ಧಾರ' ಎಂದುಕೊಂಡು ಗಾಂಧೀಜಿಯ ಕನಸು
ನನಸಾಗಿಸಲು ಇದೇ ಸಕಾಲ. ಈ ಅವಧಿಯಲ್ಲಿ ಯುಪಿಎ ಸರ್ಕಾರ ಮಾಡಿರುವ ಕಾರ್ಯಸಾಧನೆಗಳು ಮುಂಬರುವ
ದಿನಗಳಲ್ಲಿ ಅದರ ಭವಿಷ್ಯ ನಿರ್ಧರಿಸಲಿದೆ.
ಕಿರಣ್ ಕುಮಾರ್
ಹುಬ್ಬಳ್ಳಿ
ಶಾಂತಿಯುತ ಬದುಕು
ಗ್ರಾಮಭಾರತದ ಸಂವೈಧಾನಿಕ ಹಕ್ಕು ಕಸಿಯುವ ಸರದಿ, ಅವಕಾಶವಾದಿ
ರಾಜಕಾರಣಿಗಳ ಬಳಿಕ ಈಗ ನಕ್ಸಲರದು!' (ಅರಿಂದಮ್ ಚೌಧುರಿ) ಸಂಪಾದಕೀಯ ಅರ್ಥಪೂರ್ಣವಾಗಿ ಮೂಡಿಬಂದಿದೆ.
ರಾಜಕೀಯ ಬೆಳವಣಿಗೆಗಳ ಕುರಿತು, ರಾಜಕಾರಣಿಗಳ ಕುರಿತು ತೀವ್ರ ಚರ್ಚೆ ನಡೆಯುವುದು ಹಳ್ಳಿಗಳಲ್ಲೇ!
ಅಷ್ಟೇ ಅಲ್ಲ, ನಗರಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಮತದಾನದ ಕುರಿತು ಹೆಚ್ಚಿನ ಉತ್ಸಾಹ
ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ನಕ್ಸಲರ ಹಾವಳಿಯಿಂದ ಕಂಗೆಟ್ಟ ಹಳ್ಳಿಗರು ಮತದಾನದಿಂದ
ದೂರ ಸರಿಯುತ್ತಿದ್ದಾರೆ. ಈ ಮೂಲಕ ನಕ್ಸಲರು ಗ್ರಾಮೀಣ ಜನರ ಸಂವಿಧಾನಬದ್ಧ ಹಕ್ಕನ್ನು ಕಸಿಯುವ
ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಗೆದ್ದೆತ್ತಿನ ಬಾಲ ಹಿಡಿಯುವ ರಾಜಕಾರಣಿಗಳಿಗೆ ಇನ್ನೂ ನಕ್ಸಲರು
ಭೀಕರ ಸಮಸ್ಯೆಯಾಗಿ ಕಂಡಿಲ್ಲ ಎನ್ನುವುದು ನಮ್ಮ ರಾಜ್ಯದ ದುರಂತ. ನಮ್ಮ ಪ್ರಜಾಪ್ರಭುತ್ವ
ವ್ಯವಸ್ಥೆಯಲ್ಲಿ ಸ್ಪಷ್ಟ ಜನಾದೇಶ ಬಂದಿದ್ದರೆ ಅದು ಗ್ರಾಮ ಭಾರತದಿಂದ, ಸಾಮಾನ್ಯ ಮತದಾರರಿಂದ
ಎಂಬುವುದು ನಿಜ. ತಾವು ಶೋಷಿತ ವರ್ಗದ ಪರ ಎನ್ನುವ ನಕ್ಸಲರು, ಹಳ್ಳಿಯ ಮುಗ್ಧ ಜನರನ್ನು ತಮ್ಮತ್ತ
ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸರ್ಕಾರ ನಕ್ಸಲರ ಬೇಡಿಕೆಗಳಿಗೆ ಸ್ಪಂದಿಸಿ ಶಾಂತಿ ಸ್ಥಾಪನೆಗೆ
ಕ್ರಮ ಕೈಗೊಳ್ಳಬೇಕು. ನಕ್ಸಲರು ಬಂದೂಕನ್ನು ಕೆಳಗಿಟ್ಟು ಸಾಮಾನ್ಯ ಜನರಂತೆ ಬದುಕು ಕಂಡುಕೊಳ್ಳಲು
ಮುಂದಾಗಬೇಕು.
ಎಚ್. ಆನಂದಕುಮಾರ್
ಚಿತ್ರದುರ್ಗ
ಸರ್ಕಾರ ಎಚ್ಚೆತ್ತುಕೊಳ್ಳಲಿ
ಸಂಪಾಕೀಯ ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಹಿಡಿದ ಕೈಗನ್ನಡಿ.
ಇತ್ತೀಚಿನ ದಿನಗಳಲ್ಲಿ ಮತದಾನ ಮಾಡುವವರ ಸಂಖ್ಯೆ ಇಳಿಮುಖವಾಗಿದೆ. ಅದರಲ್ಲೂ ಸುಶಿಕ್ಷಿತರೇ
ಮತದಾನದಿಂದ ಹಿಂದೆ ಸರಿಯುತ್ತಿದ್ದಾರೆ. ಬಹುತೇಕ ರಾಜಕಾರಣಿಗಳು ಹಣ ಗಳಿಕೆಗಾಗಿ ರಾಜಕೀಯ
ರಂಗಕ್ಕಿಳಿದು ಹಣಬಲ-ತೋಳ್ಬಲದಿಂದ ಗೆದ್ದಿದ್ದಾರೆ. ಅಭಿವೃದ್ಧಿಪರ ಕಾರ್ಯಗಳಿಂದ
ವಿಮುಖರಾಗುತ್ತಿದ್ದಾರೆ. ಪರಿಣಾಮವಾಗಿ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ನಿರಾಸಕ್ತಿ
ತೋರಿಸುತ್ತಿದ್ದಾರೆ. ಹಾಗೆ ನೋಡಿದರೆ, ಗ್ರಾಮೀಣ ಪ್ರದೇಶದಲ್ಲೇ ಜನರಿನ್ನೂ ಮತದಾನದಲ್ಲಿ ನಂಬಿಕೆ
ಇಟ್ಟಿದ್ದಾರೆನ್ನಬಹುದು. ರಾಜಕೀಯ ಗೊಂದಲಗಳಿಗೆ ತಲೆ ಕೆಡಿಸಿಕೊಳ್ಳದೆ, ಚುನಾವಣೆಯಿಂದ ಸುಧಾರಣೆ
ಆದೀತು ಎನ್ನುವ ಆಶಾಭಾವನೆ ಹೊಂದಿದವರು ಅದೆಷ್ಟೋ ಮಂದಿ ಇದ್ದಾರೆ. ಛತ್ತೀಸ್‌ಗಢ, ಬಿಹಾರ ಮುಂತಾದ
ಕಡೆ ಬಡವರ, ಕಾರ್ಮಿಕರ ಹಿತೈಷಿಗಳಂತೆ ವರ್ತಿಸುವ ನಕ್ಸಲರು ಚುನಾವಣೆ ಸಂದರ್ಭಗಳಲ್ಲಿ ನೆಲಬಾಂಬು
ಸ್ಫೋಟಿಸಿ ಭೀತಿ ನಿರ್ಮಿಸುವ ಮೂಲಕ ಪ್ರಜಾತಂತ್ರ ವ್ಯವಸ್ಥೆಗೆ ಕೊಡಲಿಯೇಟು ನೀಡುವ ಕೆಲಸ
ಮಾಡುತ್ತಿದ್ದಾರೆ. ನಕ್ಸಲರ ಹಾವಳಿಯಿಂದ ಗ್ರಾಮ ಭಾರತವನ್ನು ರಕ್ಷಿಸಬೇಕಿದೆ. ಅವಕಾಶವಾದಿ, ಅಪರಾಧಿ,
ಜಾತಿ ಸಮುದಾಯಗಳ ದುರಭಿಮಾನಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬಾರದು. ನಕ್ಸಲ್
ಹಾವಳಿಯನ್ನು ತಡೆಗಟ್ಟಲು ಸರ್ಕಾರ ಗಂಭೀರ ಹೆಜ್ಜೆಯನ್ನಿಡಬೇಕು.
ರೇ.ಚ. ರೇವಡಿಗಾರ
ಸಿಂದಗಿ
ವಾಸ್ತವಕ್ಕೆ ಕನ್ನಡಿ
ಸಂಪಾದಕೀಯ ಲೇಖನ ಸತ್ಯಕ್ಕೆ ಹತ್ತಿರವಾಗಿದ್ದು ನೈಜವಾಗಿ ಮೂಡಿಬಂದಿದೆ.
ಅವರು ತಮ್ಮ ಲೇಖನದಲ್ಲಿ ಅವಕಾಶವಾದಿ ರಾಜಕಾರಣಿಗಳ ಬಗ್ಗೆ ಮತ್ತು ಇತ್ತೀಚಿನ ನಕ್ಸಲರ ಹಾವಳಿಗಳ
ಬಗ್ಗೆ ಚೆನ್ನಾಗಿ ವಿವರಿಸಿದ್ದಾರೆ. ಗ್ರಾಮೀಣ ಜನರ ಬದುಕು, ಅವರ ಸ್ಥಿತಿಗತಿಗಳನ್ನು
ಅರ್ಥಪೂರ್ಣವಾಗಿ ವಿವರಿಸಿದ ಅವರಿಗೆ ಹ್ಯಾಟ್ಸಾಫ್. ಟಿಎಸ್‌ಐ ಪ್ರಾದೇಶಿಕ ಗುರಿಮುಟ್ಟುವಲ್ಲಿ
ಸಫಲವಾಗುವುದರಲ್ಲಿ ಎರಡು ಮಾತಿಲ್ಲ.
ಗಿರೀಶ್ ಹೆಗಡೆ
ಶಿರಸಿ
ಐದಿಗ್ಗಜರು ಮುಂದಡಿಯಿಡಲಿ
ಸಜ್ಜನಿಕೆಯ ಐದಿಗ್ಗಜ ಎನ್. ಆರ್. ನಾರಾಯಣ ಮೂರ್ತಿ (ಕೆ.
ದಿವ್ಯದರ್ಶಿನಿ) ಸಂದರ್ಶನ ಸಕಾಲಿಕ. ಅವರು ದೇಶದಲ್ಲಿ ದ್ವಿಪಕ್ಷೀಯ ವ್ಯವಸ್ಥೆಯ ಆಶಯ
ವ್ಯಕ್ತಪಡಿಸಿರುವುದು ಸರಿಯೇ. ನಿಜಕ
್ಕೂ
ನಮ್ಮ ದೇಶದಲ್ಲಿ ದ್ವಿಪಕ್ಷೀಯ ವ್ಯವಸ್ಥೆ ಇರುತ್ತಿದ್ದರೆ ನಮ್ಮ ರಾಜಕೀಯ, ಆಡಳಿತ ವ್ಯವಸ್ಥೆ ಇಷ್ಟು
ಹೀನಾಯ ಸ್ಥಿತಿ ತಲುಪುತ್ತಿರಲಿಲ್ಲ. ಅಷ್ಟೇ ಅಲ್ಲ, ಸದೃಢ ದೇಶದ ನಿರ್ಮಾಣಕ್ಕೆ ದ್ವಿಪಕ್ಷೀಯ
ವ್ಯವಸ್ಥೆಯೇ ನಾಂದಿ. ಪ್ರತಿ ಬಾರಿ ಪಕ್ಷಾಂತರ ಮಾಡುವ ರಾಜಕಾರಣಿಗಳ ಕೆಟ್ಟಚಟಕ್ಕೆ ಈ ದೇಶ, ದೇಶದ
ಜನತೆ ಬಲಿಯಾಗುತ್ತಿರಲಿಲ್ಲ. ಭಾರತದ ಹೀನಾಯ ಸ್ಥಿತಿಯನ್ನು ಪುಸ್ತಕ, ಸಿನಿಮಾಗಳ ಮೂಲಕ ಜಾಗತಿಕವಾಗಿ
ಪ್ರಚಾರ ಮಾಡಿ ಪ್ರಸಿದ್ಧರಾಗುವ ಮಂದಿ ಇಲ್ಲಿನ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ
ಚಿಂತಿಸುವುದು ತೀರ ಕಡಿಮೆ. ಎನ್.ಆರ್. ನಾರಾಯಣ ಮೂರ್ತಿ ಅವರ 'ಎ ಬೆಟರ್ ಇಂಡಿಯಾ ಎ ಬೆಟರ್ ವರ್ಲ್ಡ್'
ಗ್ರಾಮೀಣ ಮತ್ತು ನಗರದ ನಡುವಿನ ಅಂತರ ಹೆಚ್ಚುತ್ತಿರುವ ಕುರಿತು ಬರೆದಿರುವುದು ಸ್ವಾಗತಾರ್ಹ. ಈ
ಸಮಸ್ಯೆ ಪರಿಹಾರಕ್ಕೆ ಸೂಚಿಸಿರುವ ಸಲಹೆಗಳು ವಾಸ್ತವಕ್ಕೆ ದೂರವಿದ್ದರೂ, ದೇಶದ ಮಾಹಿತಿ
ತಂತ್ರಜ್ಞಾನ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿರುವ ಐದಿಗ್ಗಜರಾದ ನಾರಾಯಣ ಮೂರ್ತಿ, ಅಜೀಂ ಪ್ರೇಮ್
ಜೀ, ನಂದನ್ ನಿಲೇಕಣಿ ಅವರಂಥವರು ಈ ನಿಟ್ಟಿನಲ್ಲಿ ಮುಂದಡಿಯಿಡಲಿ. ಜೊತೆಗೆ ನಮ್ಮ ಸರ್ಕಾರಗಳು
ಸಮಗ್ರ ದೇಶದ ಅಭಿವೃದ್ಧಿ ಕುರಿತಾದ ಮಾತುಗಳನ್ನು ಕಾರ್ಯರೂಪಕ್ಕೆ ತಂದಲ್ಲಿ ದೇಶದ ಬಹಳಷ್ಟು
ಸಮಸ್ಯೆಗಳು ಬಗೆಹರಿಯುವುದು ಖಚಿತ.
ಪ್ರೇಮ್ ಕುಮಾರ್
ಗುಲ್ಬರ್ಗ
ನುಡಿದಂತೆ ನಡೆಯಿರಿ
'ಸಜ್ಜನಿಕೆಯ ಐದಿಗ್ಗಜ' (ಕೆ. ದಿವ್ಯದರ್ಶಿನಿ) ವಿಶೇಷ ಸಂದರ್ಶನ
ಚೆನ್ನಾಗಿ ಮೂಡಿಬಂದಿದೆ. ಎನ್.ಆರ್. ನಾರಾಯಣ ಮೂರ್ತಿ ಅವರ ಪ್ರತಿ ಮಾತುಗಳು ದೇಶದ ಭವಿಷ್ಯದ
ದೃಷ್ಟಿಯಿಂದ ಗಮನಾರ್ಹ. ತಂತ್ರಜ್ಞಾನದಲ್ಲಿ ನಂಬಿಕೆಯಿಲ್ಲ ಎನ್ನುತ್ತಾ ಮೊಬೈಲ್ ಫೋನಿನಲ್ಲಿ
ಮಾತನಾಡುವ ಮೂರ್ಖರ ಕುರಿತು ಚೆನ್ನಾಗೆ ಹೇಳಿದ್ದಾರೆ! ನಮ್ಮಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಿ
ಎನ್ನುತ್ತಾ ವೇದಿಕೆ ಮೇಲೆ ಗಂಟೆಗಟ್ಟಲೆ ಮಾತನಾಡುವ ಬಾಯಿಬಡುಕರು ಮಾಡುವುದು ಕೂಡ ಇಂಥದ್ದೇ
ಅವಿವೇಕದ ಕೆಲಸವನ್ನು. ಕನ್ನಡ ಕಟ್ಟಾಭಿಮಾನಿಗಳೆಂದು ಹೇಳಿಕೊಳ್ಳುತ್ತಾ ತಮ್ಮ ಮಕ್ಕಳನ್ನು
ಆಂಗ್ಲಮಾಧ್ಯಮಕ್ಕೆ ಕಳಿಸುವವರು ಅದೆಷ್ಟೋ ಜನ. ಈ ರೀತಿಯ ಪ್ರವೃತ್ತಿಯಿಂದಲೇ ನಮ್ಮಲ್ಲಿ ಕನ್ನಡ
ಭಾಷೆಗಾಗಿ ಹೋರಾಡಬೇಕಾದ ಅನಿವಾರ್ಯತೆ ಬಂದಿದೆ. ನುಡಿದಂತೆ ನಡೆಯುವ ಪ್ರಾಮಾಣಿಕತೆಯನ್ನು ಈ ದೇಶದ
ಜನರು ಮಾತ್ರವಲ್ಲ. ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳೆಂದು ಬೀಗುವವರು ಕೂಡ ರೂಢಿಸಿಕೊಳ್ಳಬೇಕಿದೆ.
ಉಷಾ ಸುರೇಶ್
ಮಡಿಕೇರಿ
ವ್ಯವಸ್ಥೆಯೇ ಕೊಲೆಗಾರ!
'ಕೊಲೆಗಡುಕ ಅಧಿಕಾರಶಾಹಿ!' (ಮನೀಷ್ ಮೆಕ್ವಾನ್) ವರದಿ ಓದಿ ದೇಶದ
ಅದೆಷ್ಟೋ ಜಾಡಮಾಲಿಗಳ ಬದುಕಿನ ಚಿತ್ರಣ ಕಣ್ಣೆದುರು ತೇಲಿಹೋಯಿತು. ಸಂವಿಧಾನ ಪ್ರತಿಯೊಬ್ಬರಿಗೂ
ಸಮಾನ ಹಕ್ಕು ನೀಡಿದೆ. ಇದಕ್ಕೆ ಜಾಡಮಾಲಿಗಳೂ ಹೊರತಲ್ಲ. ಯಾವುದೋ ಒಂದು ವರ್ಗವನ್ನು ಅತ್ಯಂತ
ಹೀನವಾಗಿ ದುಡಿಸಿಕೊಳ್ಳುವುದು ಅಮಾನವೀಯತೆಯ ಪರಮಾವಧಿ ಎನ್ನುವುದರಲ್ಲಿ ತಪ್ಪೇನಿಲ್ಲ. ಆಧುನಿಕ
ಯುಗದಲ್ಲಿ ಹೊಸ ತಂತ್ರಜ್ಞಾನಗಳತ್ತ ಮುಖ ಮಾಡಿರುವ ನಮ್ಮ ದೇಶ ಒಳಚರಂಡಿ ಸ್ವಚ್ಛ ಮಾಡಲು ಜಾಡ
ಮಾಲಿಗಳಿಗೆ ಆಧುನಿಕ ಪರಿಕರಗಳನ್ನು ಒದಗಿಸುವತ್ತ ಚಿಂತಿಸಬೇಕು. ಜಾಡಮಾಲಿಗಳು ಒಳಚರಂಡಿಯಲ್ಲಿ
ಪ್ರಾಣ ಬಿಟ್ಟಾಗ ಅವರ ಕುಟುಂಬಕ್ಕೆ ಪರಿಹಾರ ನೀಡಿ ಕೈತೊಳೆದುಕೊಳುತ್ತವೆ ನಮ್ಮ ಸರ್ಕಾರಗಳು. ಅವರೂ
ಹೀನ ಬದುಕಿನಿಂದ ಹೊರಬಂದು ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಬದುಕಲು ಅನುವು ಮಾಡಿಕೊಡಬೇಕಿದೆ.
ಜಾಡಮಾಲಿಗಳ ಸಾವು ಆಕಸ್ಮಿಕ ಅಲ್ಲ. ಅದು ನಮ್ಮ ವ್ಯವಸ್ಥೆ ಅಥವಾ ನಾವೇ ಮಾಡಿರುವ ಕೊಲೆ!
ರೋಹನ್ ಡಿ ಸಿಲ್ವ
ಮಂಗಳೂರು
ಹುತಾತ್ಮರಿಗೆ ಗೌರವ?!
'ಭಾರತದ ಕಟುವಾಸ್ತವ' (ಪ್ರಸೂನ್ ಮಜುಂದಾರ್) ವಾಸ್ತವವನ್ನು
ತೆರೆದಿಟ್ಟಿತ್ತು. ಅನೇಕ ಬಾರಿ ನನಗೂ ಇಂಥ ಯೋಚನೆ ಕಾಡಿದ್ದಿದೆ. ಸಿನಿಮಾ ತಾರೆಗಳು, ರಾಜಕೀಯ
ವಿಚಾರಗಳು ಪ್ರಚಾರ ಪಡೆದಷ್ಟರಮಟ್ಟಿಗೆ ಸೇನಾಯೋಧರ ಸುದ್ದಿ ಮಹತ್ವ ಪಡೆಯುವುದೇ ಇಲ್ಲ! ಮಳೆ, ಗಾಳಿ,
ಬಿಸಿಲು, ಚಳಿ ಎನ್ನದೆ ಹಗಲಿರುಳು ಶ್ರಮಿಸುತ್ತಾ ವೀರ ಮರಣವನ್ನುಪ್ಪುವ ಸೈನಿಕರ ಕುರಿತಾಗಿ
ಸರ್ಕಾರದ ಕಾಳಜಿ, ಗೌರವ ಅಷ್ಟಾಗಿಯೇ ಇದೆ. ಮಾಧ್ಯಮಗಳೂ ಇದಕ್ಕೆ ಹೊರತಾಗಿಲ್ಲ. ನಿತ್ಯ ನಿರಂತರ
ನಕ್ಸಲ್ ಪಡೆ ಜೊತೆ ಹೋರಾಡಿ ಸಾಯುವ ಅದೆಷ್ಟೋ ಪೊಲೀಸ್ ಸಿಬ್ಬಂದಿ ಸುದ್ದಿಯಾಗುವುದೇ ಇಲ್ಲ! ಹೌದು,
ನೀವಂದಂತೆ 'ಕರ್ತವ್ಯ ನಿರತ ಯೋಧನ ಸಾವು' ಎಂದು ಗೀಚಿ ಕೈತೊಳೆದುಕೊಳ್ಳುವ ಮಾಧ್ಯಮಗಳು ತಮ್ಮ
ಕರ್ತವ್ಯ ನಿಷ್ಠೆಯನ್ನೇ ಮರೆಯುತ್ತವೆ. ಕಳೆದ ಬಾರಿ ಮುಂಬೈ ದಾಳಿ ನಡೆದ ಸಂದರ್ಭದಲ್ಲಿ ಸೇನಾಪಡೆಗೆ
ಮಾಧ್ಯಮಗಳು ಪ್ರಚಾರ ಕೊಟ್ಟ ಪರಿ, ಈವರೆಗೆ ಯಾವುದೇ ಒಬ್ಬ ಯೋಧನಿಗೂ ದಕ್ಕಿಲ್ಲ ಎನ್ನುವುದು ನಿಜ.
ಇದು ತಪ್ಪಲ್ಲ, ಆದರೆ ಪ್ರತಿಯೊಬ್ಬ ಯೋಧನೂ ತನ್ನ ಕರ್ತವ್ಯಕ್ಕೆ ನಿಷ್ಠನಾಗಿ ದೇಶಕ್ಕಾಗಿ ದುಡಿದು
ಮಡಿದಾಗ ಈ ರೀತಿಯ ಗೌರವ ಸಿಗಬೇಕು.
ಕೆ. ಪ್ರತಿಭಾ
ರಾಯಚೂರು
ಪ್ರಜಾಪ್ರಭುತ್ವದ ಅಣಕ
ಗ್ರಾಮಭಾರತದ ಸಂವೈಧಾನಿಕ ಹಕ್ಕು ಕಸಿಯುವ ಸರದಿ, ಅವಕಾಶವಾದಿ
ರಾಜಕಾರಣಿಗಳ ಬಳಿಕ ಈಗ ನಕ್ಸಲರದು!'(ಅರಿಂದಮ್ ಚೌಧುರಿ) ಸಂಪಾದಕೀಯ ಸಕಾಲಿಕ. ಗಾಂಧೀಜಿ ಕಂಡ ಗ್ರಾಮ
ಭಾರತ ಈಗ ಎಲ್ಲಿದೆ? ಇಂದಿನ ಚುನಾವಣೆಗಳಲ್ಲಿ ಹಣ, ಹೆಂಡದ ಹಂಚುವಿಕೆ ಮೂಲಕ ಮತದಾರನ ಮನವೊಲಿಸುವ
ತಂತ್ರಗಳೇ ಕಾಣುತ್ತಿವೆ. ಇವೆಲ್ಲಾ ಪ್ರಜಾಪ್ರಭುತ್ವ ವ್ಯವಸ್ಥೆಯ ಅಣಕವೇ ಸರಿ. ನಮ್ಮ ರಾಜಕಾರಣಿಗಳು
ಚುನಾವಣೆ ಬಂದಾಗ ಮಾತ್ರ ಮತದಾರನ ಮನೆ ಬಾಗಿಲಿಗೆ ಬರುವ ಪ್ರವೃತ್ತಿ ಮಾಮೂಲಾಗಿದೆ. ಮತದಾರರು ತಮ್ಮ
ಮತದಾನದ ಹಕ್ಕಿನ ಮಹತ್ವದ ಕಡೆ ಗಮನ ಹರಿಸದಿದ್ದರೆ ದೇಶವನ್ನು ಕಿತ್ತು ತಿನ್ನುವ ಹದ್ದುಗಳಿಗೆ
ಆಹಾರವಾಗುವುದಂತೂ ಸತ್ಯ. ಗ್ರಾಮೀಣ ಪ್ರದೇಶಗಳನ್ನು ಗಾಳವಾಗಿಸಿಕೊಂಡು ರಾಜಕಾರಣಿಗಳು ತಮ್ಮ
ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ. ಆದರೆ ಮೂಲ ಸೌಕರ್ಯಗಳು ಅಭಿವೃದ್ಧಿಯಾಗದಿರುವುದು
ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಇನ್ನೊಂದೆಡೆ ಚುನಾವಣಾ ಪ್ರಕ್ರಿಯೆಗಳು ಇಂದು ರಕ್ತದ
ಮಡುವಿನಲ್ಲಿ ನಡೆಯುತ್ತಿರುವುದು ವಿಷಾದದ ಸಂಗತಿ. ಇಂತಹ ಭ್ರಷ್ಟ ರಾಜಕಾರಣಕ್ಕೆ ಮುಗ್ಧ ನಾಗರಿಕರು
ಬಲಿಯಾಗುತ್ತಿರುವುದು ದೊಡ್ಡ ದುರಂತ. ಇದಕ್ಕೆ 15ನೇ ಲೋಕಸಭಾ ಚುನಾವಣೆ ವೇಳೆ ನಡೆದ ನಕ್ಸಲ್
ದಾಳಿಗಳೇ ಉತ್ತಮ ಉದಾಹರಣೆ. ಹಾಗಾಗಿ ನಮ್ಮ ಕಾನೂನು ಸುವ್ಯವಸ್ಥೆ, ಆಡಳಿತದ ಸುಧಾರಣೆ ಇನ್ನಷ್ಟು
ಕಠಿಣಗೊಳ್ಳಬೇಕಾದ ಅನಿವಾರ್ಯತೆಯಿದೆ. ಅಸಹಾಯಕ ಗ್ರಾಮೀಣ ಭಾಗದ ನಾಗರಿಕರು ಎಚ್ಚೆತ್ತುಕೊಳ್ಳಬೇಕಿದೆ.
ರಮೇಶ
ಕಂಚೀಪುರ
ರೂ. 3,000 ಬಹುಮಾನ ಗೆದ್ದವರು
ವಾಸ್ತವ
ಅರಿತ ಮತದಾರ
2009ರ ಲೋಕಸಭೆ ಚುನಾವಣೆ ಸಂಬಂಧಿಸಿದಂತೆ ರಾಜಕೀಯ ತಜ್ಞರ ಭವಿಷ್ಯ
ಸಂಪೂರ್ಣ ಸುಳ್ಳಾಗಿದೆ! ಆದರೆ ಇದರಲ್ಲಿ ಮುಜಗರಪಡುವಂಥದ್ದೇನೂ ಇಲ್ಲ, ಏಕೆಂದರೆ ರಾಜಕೀಯ ಭವಿಷ್ಯಗಳು
ಅದೃಷ್ಟವನ್ನು ಅವಲಂಬಿಸಿರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ. ಈ ಬಾರಿಯ ಚುನಾವಣೆ ಭವಿಷ್ಯದ
ಮತದಾರನ ಮೌನ ಪ್ರತಿಭಟನೆಯ ಪರಿಚಯ ನೀಡಿದೆ. ಪ್ರಜೆಗಳ ನಿರೀಕ್ಷೆಗಳಿಗೆ ಸ್ಪಂದಿಸುವ ಅರ್ಹ
ಪಕ್ಷವನ್ನು ಗುರುತಿಸಿ ಮತದಾರ ತನ್ನ ಅಮೂಲ್ಯ ಮತ ನೀಡಿದ್ದಾನೆ. ಆತ ರಾಜಕೀಯ ಪಕ್ಷಗಳ ಪರಸ್ಪರ
ವಾಗ್ದಾಳಿ, ಅಪಪ್ರಚಾರಕ್ಕೆ ತಲೆಬಾಗದೆ ತನ್ನ ಹೃದಯಸ್ಪರ್ಶಿಸಿದ ವಿಚಾರಕ್ಕೇ ಮಹತ್ವಕೊಟ್ಟಿದ್ದಾನೆ
ಮತ್ತು ಆ ನಿಟ್ಟಿನಲ್ಲಿ ಪ್ರಬುದ್ಧತೆಯಿಂದ ಮತ ಹಾಕಿದ್ದಾನೆ. ಈ ಬಾರಿ ಮತದಾರ ರಾಜಕೀಯ ಧುರೀಣರ
ಪೊಳ್ಳು ಮಾತುಗಳಿಗೆ ಬೆಲೆ ಕೊಡಲಿಲ್ಲ. ಆಶ್ವಾಸನೆ, ಪರಸ್ಪರ ಕಾಲೆಳೆಯುವ ರಾಜಕೀಯದಿಂದ ಬೇಸತ್ತ ಜನತೆ
ಸ್ಥಿರ ಸರ್ಕಾರದತ್ತ ಮನಮಾಡಿದ್ದಾನೆ. ಜಾತಿ ಮತ್ತು ಭಾಷಾ ಪರಕೀಯ ಭಾವನೆಗಳ ಪ್ರಚೋದನೆಗಳ
ಅಡಿಯಾಳಾಗಿಲ್ಲ. ಎಲ್ಲ ವೈಪರೀತ್ಯಗಳ ಹೊರಗೆ ನಿಂತು ಮತದಾರ ಯೋಚಿಸಿದ್ದಾನೆ. ಈ ಬಾರಿ ಅಪರಾಧ
ಹಿನ್ನೆಲೆಯುಳ್ಳ ರಾಜಕಾರಣಿಗಳು ಮಾತ್ರವಲ್ಲ, ಅವರ ಸಂಬಂಧಿಗಳನ್ನು ಕೂಡ ಮತದಾರ ನಿರಾಕರಿಸಿದ್ದಾನೆ.
ಈ ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಸ್ಥಿರ ಸರ್ಕಾರದ ಅಗತ್ಯವಿದೆ ಎನ್ನುವ
ವಾಸ್ತವವನ್ನು ಮತದಾರರು ಅರಿತಿದ್ದಾರೆ. ಅಭ್ಯರ್ಥಿಯ ರಾಷ್ಟ್ರೀಯಬದ್ಧತೆ, ಸಮಗ್ರತೆ ಮತ್ತು
ಸಾಮರ್ಥ್ಯವನ್ನು ಮತದಾರರು ಗುರುತಿಸಿದ್ದಾರೆ. ಒಟ್ಟಿನಲ್ಲಿ ಈ ಲೋಕಸಭಾ ಚುನಾವಣೆ ಮತದಾರರು ಸಾಕಷ್ಟು
ಪ್ರಜ್ಞಾವಂತರು ಎಂಬುದಕ್ಕೆ ಸೂಕ್ತ ಪುರಾವೆ ಒದಗಿಸಿದೆ. ಪ್ರಸ್ತುತ ಅಧಿಕಾರದ ಗಾದಿ ಏರಿರುವ ಯುಪಿಎ
ಸರ್ಕಾರ, ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಇದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ನೆಲಕಚ್ಚುವ
ಸಾಧ್ಯತೆಯನ್ನು ಅಲ್ಲಗಳೆಯಲಾಗದು.
ಸುಭ್ರತೋ ಸಿನ್ಹಾ
ಪುಣೆ
ಮಾಧ್ಯಮಗಳು ಜವಾಬ್ದಾರಿ ನಿರ್ವಹಿಸಲಿ
ಮಾಧ್ಯಮ ನೀತಿ ಕುರಿತಾಗಿ ಟಿಎಸ್‌ಐಯಲ್ಲಿ ಮೂಡಿಬಂದ ಲೇಖನ
ಅರ್ಥಪೂರ್ಣವಾಗಿತ್ತು. ಪ್ರಸ್ತುತ ರಾಜಕೀಯ ಪಕ್ಷಗಳ ಗುಲಾಮರಂತೆ ವರ್ತಿಸುವ ಮಾಧ್ಯಮಲೋಕದ ಕೆಟ್ಟ
ಚಾಳಿಯನ್ನು ಅನಾವರಣಗೊಳಿಸಿದೆ. ವಿಪರ್ಯಾಸ ಎಂದರೆ ಇಂಥ ಮಾಧ್ಯಮಗಳ ಪರಿಣಾಮವಾಗಿಯೇ ರಾಜಕೀಯ ರಂಗ
ಹಣದ ಅಮಲಿನಲ್ಲಿ ತೇಲುತ್ತಿದೆ. ಇಂಥ ಸನ್ನಿವೇಶದಲ್ಲಿ ಜನರನ್ನು ಎಚ್ಚರಿಸುವ ಕೆಲಸ ಮಾಡಬೇಕಿದ್ದ
ಮಾಧ್ಯಮಗಳು ಹಣ ಪಡೆದುಕೊಂಡು ರಾಜಕೀಯ ಭಟ್ಟಂಗಿಗಳಂತೆ ವರ್ತಿಸುತ್ತವೆ ಎನ್ನುವುದು ನಾಚಿಕೆಗೇಡಿನ
ಸಂಗತಿ! ಭಾರತೀಯ ಚುನಾವಣಾ ಇತಿಹಾಸದಲ್ಲೇ ದಾಖಲೆ ವೆಚ್ಚ ಮಾಡಿದ್ದು 2009ರ ಲೋಕಸಭೆ ಚುನಾವಣೆಯಲ್ಲಿ
ಎನ್ನಬಹುದು. ಚುನಾವಣಾ ಆಯೋಗದ ಮಿತಿಯನ್ನೂ ಮೀರಿ ಪ್ರತಿಯೊಬ್ಬ ಅಭ್ಯರ್ಥಿಯೂ ಚುನಾವಣೆಗಾಗಿ
ಬರೋಬ್ಬರಿ ಹಣ ಚೆಲ್ಲಿದ್ದಾರೆ. ಚುನಾವಣೆಗಾಗಿ ಕೋಟ್ಯಂತರ ಕಪ್ಪು ಹಣ ಹರಿಯುವುದನ್ನು ವರದಿ ಮಾಡುವ
ಮಾಧ್ಯಮಗಳು, ಜಾಹೀರಾತುಗಳ ಮೂಲಕ ತಮಗೆ ಬರುವ ಇದೇ ಹಣವನ್ನು ಜೇಬಿಗಿಳಿಸಿಕೊಂಡು ಹಾಯಾಗಿರುತ್ತವೆ!
ಕೇವಲ ಮತಬ್ಯಾಂಕ್‌ಗಾಗಿ ಕೋಟ್ಯಂತರ ಹಣ ಪೋಲು ಮಾಡುವ ಅಭ್ಯರ್ಥಿಗಳ ವೆಚ್ಚಕ್ಕೆ ಕಡಿವಾಣ ಹಾಕಲೇಬೇಕು.
ಪ್ರಜಾಪ್ರಭುತ್ವ ವ್ಯವಸ್ಥೆಗೆ ದಾರಿ ತೋರಿಸಬೇಕಾದ ಮಾಧ್ಯಮರಂಗ ತಮ್ಮ ಹೊಣೆಯನ್ನು ನಿಷ್ಠೆಯಿಂದ
ನಿಭಾಯಿಸಬೇಕಾದ ಅಗತ್ಯವಿದೆ ಅಲ್ಲವೇ?
ಜೆ. ಅಭಯ್
ಬೆಂಗಳೂರು
ಮತದಾರನ
ಪ್ರಬುದ್ಧತೆ!
'ನಿಜವಾದ ನಿರ್ಣಾಯಕ ಮಹಿಳೆ' (ರಂಜಿತ್ ಭೂಷಣ್) ಲೇಖನ ಚೆನ್ನಾಗಿ
ಮೂಡಿಬಂದಿದೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಮತದಾರ ಪ್ರಬುದ್ಧತೆ ಮೆರೆದಿದ್ದಾನೆ. ಕೇಂದ್ರದಲ್ಲಿ
ಮತ್ತೆ ಅತಂತ್ರ ಸರ್ಕಾರ ಕಾಣುವ ಕುರಿತು ನಿರಾಶರಾಗಿದ್ದ ಅದೆಷ್ಟೋ ಮಂದಿಗೆ ಈಗ ಸಮಾಧಾನವಾಗಿದೆ.
ಬಹಳಷ್ಟು ಸಮೀಕ್ಷೆಗಳು ಯುಪಿಎ ಸರ್ಕಾರ ಹೆಚ್ಚು ಮತ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದರೂ,
ಕೇಂದ್ರದಲ್ಲಿ ಮತ್ತೆ ಅತಂತ್ರ ಸರ್ಕಾರವನ್ನೇ ನಿರೀಕ್ಷಿಸಿದವು. ಆದರೆ ಮತದಾರ ಎಲ್ಲರ ನಿರೀಕ್ಷೆಗೂ
ಮೀರಿ ಅಚ್ಚರಿಯ ಫಲಿತಾಂಶ ತರುವಲ್ಲಿ ಯಶಸ್ವಿಯಾಗಿದ್ದಾನೆ. ಒಂದು ವೇಳೆ ಯುಪಿಎ ಭದ್ರ ಬಹುಮತ
ಪಡೆಯದಿದ್ದಲ್ಲಿ ಪಕ್ಷಗಳ ತಿಕ್ಕಾಟಕ್ಕೆ ದೇಶ ಬಲಿಯಾಗಬೇಕಿತ್ತು. ಇನ್ನು ಐದು ವರ್ಷ ಜನತೆಗೆ
ಚುನಾವಣೆಯ ಚಿಂತೆಯಿಲ್ಲ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೂ ಹೆಚ್ಚಿನ ಹೊರೆ ಬೀಳಲಿಲ್ಲ.
ಸುಭದ್ರ ಸರ್ಕಾರ ರಚಿಸುವ ಅವಕಾಶ ಪಡೆದ ಯುಪಿಎ ದೇಶವನ್ನು ಅಭಿವೃದ್ಧಿಯ ಕಡೆ ಮುನ್ನಡೆಸಲು ರಾಜಿ
ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ. ಆದರೆ ಸರ್ಕಾರ ಈ ಅವಕಾಶವನ್ನು ಎಷ್ಟರ ಮಟ್ಟಿಗೆ ಬಳಸಿಕೊಳ್ಳಲಿದೆ
ಎನ್ನುವುದನ್ನು ಕಾದು ನೋಡಬೇಕು.
ಸೀಮಾ ವಸಂತ್
ಬೆಂಗಳೂರು